Breaking News
Hiring Reporter’s For more Information Contact Above Number 876 225 4007 . Program producer
Home / Breaking News / ನ.7 ಕ್ಕೆ ಈದ್ ಮಿಲಾದ್ ಪ್ರಯುಕ್ತ ವಿವಿಧ ಸ್ಪರ್ಧೆಗಳು.

ನ.7 ಕ್ಕೆ ಈದ್ ಮಿಲಾದ್ ಪ್ರಯುಕ್ತ ವಿವಿಧ ಸ್ಪರ್ಧೆಗಳು.

 

ಹುಬ್ಬಳ್ಳಿ: ನಗರದ ಅಂಜುಮನ್ ಏ ಇಸ್ಲಾಂ ಸಂಸ್ಥೆಯಿಂದ ಈದ್ – ಮಿಲಾದ್ ಪ್ರಯುಕ್ತ ವಿವಿಧ ಸ್ಪರ್ಧೆಗಳನ್ನು ನ.07 ರಂದು ನೆಹರೂ ಮಹಾವಿದ್ಯಾಲಯದ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಮಹಮ್ಮದ್ ಯೂಸುಫ್ ಸವಣೂರು ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಜುಮನ್ -ಎ- ಇಸ್ಲಾಂ ಸಂಸ್ಥೆಯ ಪ್ರಾಥಮಿಕ ಮತ್ತು ಪ್ರೌಢಶಾಲೆ, ಪದವಿ ಪೂರ್ವ, ಡಿಪ್ಲೋಮಾ, ಬಿ.ಎಡ್, ಸ್ನಾತಕೋತ್ತರ, ಪ್ಯಾರಾ ಮೆಡಿಕಲ್ ಸೇರಿದಂತೆ ಒಟ್ಟು 25 ವಿಭಾಗಗಳ ವಿದ್ಯಾರ್ಥಿಗಳಿಗೆ ನಾತ್ ಖಾವನಿ, ಪ್ರಬಂಧ, ಭಾಷಣ ಹಾಗೂ ರಸ್ ಪ್ರಶ್ನೆ ಸ್ಪರ್ಧೆ ಆಯೋಜಿಸಲಾಗಿದ್ದು, ಇದರಲ್ಲಿ ಸುಮಾರು 250 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆ ಇದ್ದು, 50 ಕ್ಕೂ ಹೆಚ್ಚು ಬಹುಮಾನ ಪಾರಿತೋಷಕ ವಿತರಣೆ ಮಾಡಲಾಗುವುದು. ಸ್ಪರ್ಧೆಯಲ್ಲಿ ನಾಲ್ಕು ಹಂತಗಳಲ್ಲಿ ನಡೆಯಲಿದ್ದು, ಪ್ರತಿಸ್ಪರ್ಧೆಗೆ ಮೂರು ಬಹುಮಾನಗಳು ಕೊಡಲಾಗುವುದು. ಇದನ್ನು 24 ನಿರ್ಣಾಯಕರು ನಿರ್ಣಯ ಮಾಡಲಿದ್ದಾರೆ ಎಂದರು.
ಇನ್ನೂ ಸ್ಪರ್ಧೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಹಾರಾಷ್ಟ್ರದ ಸಜ್ಜದ್ ನಹಿನ್ ದರ್ಗಾದ ಸಯ್ಯದ್ ಶಾ ಹೈದರ್ ವಾಲಿ ಖಾದ್ರಿ ಆಗಮಿಸುವರು. ಅತಿಥಿಗಳಾಗಿ ಫೀರ್ ಇ ತಾರಿಹಕ್ ನ ಸಯ್ಯದ್ ತಾಜ್ಜುದ್ದಿನ್ ಖಾದ್ರಿ, ಅಲ್ – ಹಜ್ ಹಜರತ್ ಅಲ್ಲಾಂ, ಅಬ್ದುಲ್ ಹಮ್ಮಿದ್ ಖೈರಾತಿ, ಎ.ಎಮ್.ಹಿಂಡಸಗಿರಿ, ಜಬ್ಬರ್ ಖಾನ್ ಹೊನ್ನಳಿ ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಮಹಮ್ಮದ್ ಯೂಸುಫ್ ಸವಣೂರು ವಹಿಸಲಿದ್ದಾರೆ ಎಂದರು. ಅಂದು ಅಂಜುಮನ್ ಏ ಇಸ್ಲಾಂ ಸಂಸ್ಥೆಯ ಎಲ್ಲ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಭಾಗವಹಿಸಬೇಕು. ಅಲ್ಲದೇ ಅಂದು ವಿದ್ಯಾರ್ಥಿಗಳಿಗೆ ಉಪಹಾರ, ಊಟದ ವ್ಯವಸ್ಥೆ ಮಾಡಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಸೀರ್ ಅಹ್ಮದ್ ಹಳ್ಳೂರ, ಅಲ್ತಾಫ್ ಕಿತ್ತೂರ, ಎಮ್.ಎಮ್.ಪಠಾಣ, ಇಮಾಮಹುಸೇನ ಸೇರಿದಂತೆ ಮುಂತಾದವರು ಇದ್ದರು.

ಡಿಜೆ ಬಳಕೆ ನಿಷೇಧ: ಹುಬ್ಬಳ್ಳಿ ಅಂಜುಮನ್ ಏ ಇಸ್ಲಾಂ ಸಂಸ್ಥೆ ವತಿಯಿಂದ ಡಿಜೆ ಹಚ್ಚುವುದನ್ನು ನಿಷೇಧ ಮಾಡಿರುವುದಕ್ಕೆ ಎಲ್ಲೆಡೆಯಿಂದ ಪ್ರಶಂಸೆ ಬರುತ್ತಿದ್ದು, ಈ ಹಿಂದೆ ಡಿಜೆ ಬಂದ್ ಮಾಡಬೇಕೆಂದು ಎಷ್ಟೇ ಪ್ರಯತ್ನ ಮಾಡಿದರು ಸಾಧ್ಯ ಆಗಿರಲಿಲ್ಲ. ಆದರೆ ಇದೀಗ ಸಂಸ್ಥೆಯ ಎಲ್ಲರ ಸಹಕಾರದಿಂದ ಒಂದು ನಿರ್ಣಯಕ್ಕೆ ಬಂದು ಡಿಜೆ ಯನ್ನು ಬಂದ್ ಮಾಡಲಾಗಿದೆ. ಅಲ್ಲದೇ ಯಾರಾದರೂ ಇದನ್ನು ಉಲ್ಲಂಘನೆ ಮಾಡಿದರೆ ಸಮುದಾಯದಿಂದ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಲ್ತಾಫ್ ಕಿತ್ತೂರ ಹೇಳಿದರು.

Share

About Shaikh BIG TV NEWS, Hubballi

Check Also

ಡಿಕೆಶಿ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪೋಟಕ ಆರೋಪ ಮಾಡಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. …

Leave a Reply

Your email address will not be published. Required fields are marked *

error: Content is protected !!