Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಈ ಹಿಂದೆ ಶಾಸಕನಾದಾಗ ಮಾಡಿದ ಅಭಿವೃದ್ದಿ ಕಾರ್ಯಗಳನ್ನು ಪರಿಗಣಿಸಿ ಮತ ನೀಡಲು ಕೆ.‌ಬಿ. ಚಂದ್ರಶೇಖರ್ ಮನವಿ.

ಈ ಹಿಂದೆ ಶಾಸಕನಾದಾಗ ಮಾಡಿದ ಅಭಿವೃದ್ದಿ ಕಾರ್ಯಗಳನ್ನು ಪರಿಗಣಿಸಿ ಮತ ನೀಡಲು ಕೆ.‌ಬಿ. ಚಂದ್ರಶೇಖರ್ ಮನವಿ.

 

ಮಂಡ್ಯ : ಕಸಬಾ ಮತ್ತು ಕಿಕ್ಕೇರಿ ಹೋಬಳಿಯ ಮಾಕವಳ್ಳಿ ಬಂಡಿಹೊಳೆ ಚೌಡೇನಹಳ್ಳಿ ಐಕನಹಳ್ಳಿ ಹಾಗೂ ಮುಂತಾದ ಗ್ರಾಮಪಂಚಾಯ್ತಿಗಳು ವ್ಯಾಪ್ತಿಗೆ ಬರುವ ಹಳ್ಳಿಗಳಿಗೆ ಮಂಡ್ಯ ಕೆ.ಆರ್. ಪೇಟೆ ಕ್ಷೇತ್ರದ ವಿಧಾನಸಭಾ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕೆಬಿ ಚಂದ್ರಶೇಖರ್ ರವರು ಬಿರುಸಿನ ಪ್ರಚಾರ ನಡೆಸಿದರು.
ಪ್ರಚಾರದ ವೇಳೆ ಹಿಂದೆ ಎರಡು ಬಾರಿ ಶಾಸಕರಾಗಿದ್ದ ಅವಧಿಯಲ್ಲಿ ಕೆಲಸ ಮಾಡಿರುವುದರ ಬಗ್ಗೆ ಪ್ರಸ್ತಾಪಿಸಿ ಮತದಾರರಿಗೆ ಮನವರಿಕೆ ಮಾಡಿ ಬಾಡೂಟ ಮತ್ತು ಸೀರೆ ಹಂಚಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು ಇದೆಲ್ಲ ಬಿಜೆಪಿಯವರ ದುಡ್ಡು ಪ್ರತಿಯೊಂದನ್ನು ಸ್ವೀಕರಿಸಿ ಆದರೆ ಮತವನ್ನು ಮಾತ್ರ ನನಗೆ ನೀಡಿ ಮುಂದಿನ ದಿನಗಳಲ್ಲಿ ನಮ್ಮ ತಾಲೂಕನ್ನು ಅಭಿವೃದ್ಧಿ ಮಾಡುತ್ತೇನೆ ಎಂದು ಮತಯಾಚನೆ ಮಾಡಿದರು.
ಕೆ.ಬಿ.ಚಂದ್ರಶೇಖರ್ ರವರು ಪ್ರಚಾರಕ್ಕೆ ಹೋದ ಸ್ಥಳದಲ್ಲಿ ಜೆಡಿಎಸ್ ಯುವಕರು ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಕೆಬಿ ಚಂದ್ರಶೇಖರ್ ರವರ ನೇತೃತ್ವದಲ್ಲಿ ಸೇರ್ಪಡೆಯಾದರು ಪಕ್ಷಕ್ಕೆ ಸೇರಿದ ಕುಮಾರ್, ಮನು, ಚಕಯ್ಯ, ಮಂಜು, ದೀಪು, ನಾಗೇಶ್, ಅರುಣ್ ಇನ್ನು
10ಕ್ಕು ಹೆಚ್ಚು ಮಾಕವಳ್ಳಿ ಗ್ರಾಮದ ಯುವಕರಿಗೆ ನಿಮ್ಮ ಕಷ್ಟ ಸುಖದಲ್ಲಿ ನಾನು ಸದಾಕಾಲ ನಿಮ್ಮೊಡನೆ ಇರುತ್ತೇನೆ ಎಂದು ಭರವಸೆ ನೀಡಿ ಯುವಕರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಲಾಯಿತು ಮತ್ತೊಂದೆಡೆ ಕೆ.ಬಿ. ಚಂದ್ರಶೇಖರ್ ರವರ ಸುಪುತ್ರಿ ಹಂಸು ರವರು ಕಸಬಾ ಹೋಬಳಿಯ ಕೆಲವು ಗ್ರಾಮಗಳಿಗೆ ತೆರಳಿ ಗ್ರಾಮದ ಮತಯಾಚನೆ ಮಾಡಿದರು.

Share

About Bora nayak BIG TV NEWS, Mandya

Check Also

ಡಿಕೆಶಿ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪೋಟಕ ಆರೋಪ ಮಾಡಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. …

Leave a Reply

Your email address will not be published. Required fields are marked *

error: Content is protected !!