Hiring Reporter’s For more Information Contact Above Number 876 225 4007 . Program producer
Home / Breaking News / ಚೀನಾ ಗಡಿಯಲ್ಲಿ ಯೋಧ ಈರಯ್ಯ ಪೂಜಾರನ ಸ್ಟೇಟಸ್‌ ಮತ್ತು ಡಿಪಿಯಲ್ಲಿ ಫುಲ್ ಮಿಚಿಂಗ್

ಚೀನಾ ಗಡಿಯಲ್ಲಿ ಯೋಧ ಈರಯ್ಯ ಪೂಜಾರನ ಸ್ಟೇಟಸ್‌ ಮತ್ತು ಡಿಪಿಯಲ್ಲಿ ಫುಲ್ ಮಿಚಿಂಗ್

Spread the love

ಧಾರವಾಡ: ಚೀನಾ ಮತ್ತು ಭಾರತದ ಮಧ್ಯೆ ಕಳೆದ ಕೆಲವು ತಿಂಗಳಿಂದ ಗಡಿಯಲ್ಲಿ ಸದಾ ತಂಟೆ ತಕರಾರು ನಡೆದೇ ಇದೆ. ಅಲ್ಲಿ ಭಾರತೀಯ ಯೋಧರು ಅನೇಕ ಬಾರಿ ಸಂಕಷ್ಟಗಳನ್ನು ಎದುರಿಸಿದ್ದು ಉಂಟು. ಚೀನಾದ ಗಡಿಯಲ್ಲಿ ದೇಶ ಕಾಯುತ್ತಿರುವ ತಾಲೂಕಿನ ಬೆನಕನಕಟ್ಟಿ ಗ್ರಾಮದ ಯೋಧ ಈರಯ್ಯ ಪೂಜಾರ ತನ್ನ ವಾಟ್ಸ್‌ಆಯಪ್‌ ಮೂಲಕ ಚೀನಾದ ಗಡಿಯಲ್ಲಿದ್ದೇನೆ.

ಅದು ಚೀನಾ ಗಡಿ, ಇದು ಬೆನಕನಕಟ್ಟಿ ಹುಲಿ, ನಾನು ಯುದ್ಧಕ್ಕಾಗಿಯೇ ಬಂದಿದ್ದೇನೆ. ನೋಡೋಣಾ ಏನಾಗುತ್ತದೆಯೋ? ಬೆನಕಪ್ಪನ ದಯೆ ಇರಲಿ ಎಂದೆಲ್ಲ ಪಕ್ಕಾ ಜವಾರಿ ಭಾಷೆಯಲ್ಲಿ ಸೆಲ್ಫಿ ವಿಡಿಯೋ ಮಾಡಿಕೊಂಡು ಅದನ್ನು ತನ್ನ ಕುಟುಂಬಸ್ಥರಿಗೆ ಕಳುಹಿಸಿದ್ದಾನೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಆತನ ಬಗ್ಗೆ ಯುವ ಪೀಳಿಗೆ ಹೆಮ್ಮೆಯ ಮಾತುಗಳನ್ನಾಡುತ್ತಿದ್ದಾರೆ.

ತಮ್ಮ ಮಗನ ದೇಶ ಸೇವೆ ಕುರಿತು ತಂದೆ ಮಲ್ಲಯ್ಯ ಮತ್ತು ತಾಯಿ ಅನ್ನಪೂರ್ಣಾ ಅವರು ಅಭಿಮಾನದ ಮಾತುಗಳನ್ನಾಡಿದ್ದಾರೆ.ಗ್ರಾಮೀಣ ಭಾಗದ ವಾಟ್ಸ್‌ಆಯಪ್‌ ಗುಂಪುಗಳಲ್ಲಂತೂ ಯೋಧ ಈರಯ್ಯ ಪೂಜಾರ ಇದೀಗ ಸ್ಟೇಟಸ್‌ ಮತ್ತು ಡಿಪಿಯಲ್ಲಿ ರಾರಾಜಿಸುತ್ತಿದ್ದಾರೆ.

Check Also

ಬ್ಯಾಂಕ್‌ಗಳ ಸಾಲಗಳ ಮೇಲಿನ ಚಕ್ರಬಡ್ಡಿ ಮನ್ನಾ

Spread the loveನವದೆಹಲಿ: ನವರಾತ್ರಿ ಸಂದರ್ಭದಲ್ಲಿ ಸಾಲಗಾರರಿಗೆ ಕೇಂದ್ರ ಸರ್ಕಾರ ಶುಭ ಸುದ್ದಿ ನೀಡಿದೆ. ಮಾರ್ಚ್ 1ರಿಂದ ಆಗಸ್ಟ್ 31ರವರೆಗಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!