Hiring Reporter’s For more Information Contact Above Number 876 225 4007 . Program producer
Home / Breaking News / ಹು-ಧಾ ಪೊಲೀಸ್ ಕಮೀಷನರ್ : ಡಿಸಿಪಿ ಕೃಷ್ಣಕಾಂತ್ ನಡುವೆ ಶಿಥಲ ಸಮರ

ಹು-ಧಾ ಪೊಲೀಸ್ ಕಮೀಷನರ್ : ಡಿಸಿಪಿ ಕೃಷ್ಣಕಾಂತ್ ನಡುವೆ ಶಿಥಲ ಸಮರ

Spread the love

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾದ ಆರ್.‌ದೀಲೀಪ್ ಹಾಗೂ ಡಿಸಿಪಿ ಕೃಷ್ಣಕಾಂತ ನಡುವೆ ಪ್ರಕರಣವೊಂದರ ತನಿಖೆ ಕುರಿತಂತೆ ಭಿನ್ನಾಭಿಪ್ರಾಯ ಉಂಟಾಗಿದೆ. ಈ ಭಿನ್ನಾಭಿಪ್ರಾಯ ತಾರಕ್ಕೇಕ್ಕೀರಿದ್ದು ಸ್ವತಃ ಡಿಸಿಪಿ ಹಾಗೂ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಆರ್.ದಿಲೀಪ್ ಡಿಸಿಪಿ ಕೃಷ್ಣಕಾಂತರವನ್ನ ಭೇಟಿ ಮಾಡಲು ಅವಕಾಶ ನೀಡುತ್ತಿಲ್ಲವೆಂದು ಕಮೀಷನರಗೆ ಪತ್ರವೊಂದನ್ನ ಬರೆದಿದ್ದು, ಪ್ರತಿಯನ್ನ ಪೊಲೀಸ್ ಮಹಾನಿ ರ್ದೇಶಕರಿಗೂ ಕಳುಸಿ ಕೊಟ್ಡಿದ್ದಾರೆ.

ಈ ಸೂಕ್ಷ್ಮವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಪಿ ಕೃಷ್ಣಕಾಂತರವರು ಪೊಲೀಸ್ ಕಮೀಷನರ್ ಗೆ ಭೇಟಿಯಾಗಲು ಪ್ರಯತ್ನ ಮಾಡುತ್ತಿದ್ದರೂ, ಯಾವುದೇ ರೀತಿಯ ಸ್ಪಂಧನೆ ದೊರಕಿಲ್ಲವೆಂದು ಈ ಪತ್ರದಲ್ಲಿ ನಮೂದಿಸಲಾಗಿದೆ.
ಪೊಲೀಸ್ ಕಮೀಷನರ್ ಅವರನ್ನ ಭೇಟಿಯಾಗಲು ಒಂದೂವರೆ ಗಂಟೆ ಕಾದರೂ ಭೇಟಿಯಾಗಲು ಅವಕಾಶ ನೀಡಿಲ್ಲ. ಹಾಗಾಗಿಯೇ ಕಂಟ್ರೋಲ್ ರೂಮ್ ಮುಖಾಂತರ ಪತ್ರವನ್ನ ಸಲ್ಲಿಸಿದ್ದೇನೆಂದು ಡಿಸಿಪಿ ಕೃಷ್ಣಕಾಂತ ಪತ್ರದಲ್ಲಿ ಹೇಳಿಕೊಂಡಿದ್ದಾರೆ.ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಚೇರಿ ಬಿಟ್ಟು ಹೊರಗೆ ಬಂದು ಕೆಲಸ ಮಾಡಿ ಎಂದು ಹೇಳಿದ ಮೇಲೂ ಇಲಾಖೆಯಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬುದು ತಿಳಿದುಬರುತ್ತದೆ.

Check Also

ಭಾರತೀಯ ಕ್ರಿಕೆಟ್ ದಿಗ್ಗಜ ಕಪಿಲ್ ದೇವ್​ಗೆ ಹೃದಯಾಘಾತ!

Spread the love ನವ ದೆಹಲಿ: ಭಾರತಕ್ಕೆ ಚೊಚ್ಚಲ ವಿಶ್ವಕಪ್ ತಂದುಕೊಟ್ಟ ಮಾಜಿ ನಾಯಕ ಕಪಿಲ್ ದೇವ್ ಹೃದಯಾಘಾತಕ್ಕೆ ಒಳಗಾಗಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!