Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಕಾಡು ಪ್ರಾಣಿಗಳ ಸಂರಕ್ಷಣೆಗೆ ವನ್ಯಜೀವಿ ಸಂರಕ್ಷಣಾ ರಾಯಭಾರಿ ಶ್ರೀಮುರುಳಿ ಕರೆ.

ಕಾಡು ಪ್ರಾಣಿಗಳ ಸಂರಕ್ಷಣೆಗೆ ವನ್ಯಜೀವಿ ಸಂರಕ್ಷಣಾ ರಾಯಭಾರಿ ಶ್ರೀಮುರುಳಿ ಕರೆ.

ಗುಂಡ್ಲುಪೇಟೆ: ನಾಡಿನ ಅರಣ್ಯ ಸಂಪತ್ತು ಮತ್ತು ವನ್ಯ ಜೀವಿ ದೇಶದ ಆಸ್ತಿ.‌ ಇದರ ಸಂರಕ್ಷಣೆಯಲ್ಲಿ ಪ್ರತಿಯೊಬ್ಬ ಪ್ರಜೆಯ ಪಾತ್ರವಿದೆ ಎಂದು ವೈಲ್ಡ್ ಲೈಫ್ ರಾಯಭಾರಿ ಚಿತ್ರನಟ ಶ್ರೀಮುರಳಿ ತಿಳಿಸಿದರು.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೇರಂಬಾಡಿ ಪಂಚಾಯಿತಿಯ ವ್ಯಾಪ್ತಿಯ ಬೇರಂಬಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅರಣ್ಯ ಇಲಾಖೆ ಆಯೋಜಿಸಿದ್ದ ವನ್ಯಜೀವಿ ಸಂರಕ್ಷಣೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಕಾಡುಪ್ರಾಣಿಗಳಿಗೆ ಯಾವುದೇ ರೀತಿಯ ತೊಂದರೆಗಳನ್ನು ಕೊಡದೆ ಅವರ ಪಾಡಿಗೆ ಅವುಗಳನ್ನು ಕಾಡಿನಲ್ಲಿ ಸ್ವತಂತ್ರವಾಗಿ ಜೀವಿಸಲು ಬಿಡಿ ಎಂದು ಮನವಿ ಮಾಡಿಕೊಂಡರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಕಾಡು ಪರಿಸರ ಮತ್ತು ವನ್ಯಜೀವಿಗಳ ಸಂರಕ್ಷಣೆಯಲ್ಲಿ ಬಗ್ಗೆ ಎಲ್ಲರೂ ಗಮನಹರಿಸಬೇಕು ವಿದ್ಯಾರ್ಥಿಗಳು ಪರಿಸರ ಮತ್ತು ವನ್ಯಜೀವಿಗಳ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ತಿಳಿಸಿದರು.
ಗುಂಡ್ಲುಪೇಟೆ ಶಾಸಕರಾದ ಸಿಎಸ್ ನಿರಂಜನ್ ಕುಮಾರ್ ಮಾತನಾಡಿ ಬಂಡೀಪುರ ರಾಷ್ಟ್ರೀಯ ಅಭಯಾರಣ್ಯ ನಮ್ಮ ದೇಶದ ಹೆಮ್ಮೆ ಇದರ ಉಳಿವಿಗಾಗಿ ನಾವು ಪ್ರತಿಯೊಬ್ಬರು ಪರಿಸರವನ್ನು ರಕ್ಷಣೆ ಮಾಡುವುದು ನಮ್ಮ ಆದ್ಯ ಕರ್ತವ್ಯ ಎಂದು ಇದೇ ಸಂದರ್ಭದಲ್ಲಿ ಮಾತನಾಡಿದರು . ಇದೇ ಸಂದರ್ಭದಲ್ಲಿ ಹುಲಿ ಸೆರೆಗೆ ಶ್ರಮಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಜನರಿಗೂ ಅಭಿನಂದನೆ ತಿಳಿಸಿದರು‌
ಕಾರ್ಯಕ್ರಮದ ಆಯೋಜಕರಾದ
ಹುಲಿಯೋಜನೆ ನಿರ್ದೇಶಕರ ಟಿ ಬಾಲಚಂದ್ರ ಚಿತ್ರನಿರ್ಮಾಪಕ ಶ್ರುತಿನಾಯ್ಡು ಮುಖಂಡರು ಎಚ್ ಸ್ ನಂಜಪ್ಪ ದೊರೆಸ್ವಾಮಿ ನಮೋ ಸುರೇಶ ಇದ್ದರು.
ವರದಿ:ಮಹಾದೇವಪ್ರಸಾದ್ ಯಡಹುಂಡಿ. ಬಿಗ್ ಟಿವಿ ನ್ಯೂಸ್.

Share

About ramu BIG TV NEWS, Kolar

Check Also

ಡಿಕೆಶಿ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪೋಟಕ ಆರೋಪ ಮಾಡಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. …

Leave a Reply

Your email address will not be published. Required fields are marked *

error: Content is protected !!