Hiring Reporter’s For more Information Contact Above Number 876 225 4007 . Program producer
Home / Breaking News / ವರ್ಕ್​ ಫ್ರಂ ಹೋಮ್​ ಕೇಳಿದ್ದೀರಿ, ಇದೀಗ ಶೂಟ್ಸ್​ ಫ್ರಂ ಹೋಮ್​ ಶುರು.

ವರ್ಕ್​ ಫ್ರಂ ಹೋಮ್​ ಕೇಳಿದ್ದೀರಿ, ಇದೀಗ ಶೂಟ್ಸ್​ ಫ್ರಂ ಹೋಮ್​ ಶುರು.

Spread the love

ಕರೊನಾ ಹಾವಳಿಯಿಂದ ಸಿನಿಮಾ ಇಂಡಸ್ಟ್ರಿ ತತ್ತರಿಸಿ ಹೋಗಿದೆ. ಇತ್ತ ಧಾರಾವಾಹಿ ಕ್ಷೇತ್ರ ಈಗಷ್ಟೇ ಸುಧಾರಿಸಿಕೊಳ್ಳುತ್ತಿದೆ. ಲಾಕ್​ಡೌನ್​ ಸಡಿಲವಾದ ಬೆನ್ನಲ್ಲೇ ಚಿತ್ರೀಕರಣಕ್ಕೆ ಅನುಮತಿ ನೀಡಲಾಗಿದೆ. ಆದರೂ ಅಲ್ಲೊಂದು ಇಲ್ಲೊಂದು ಕರೊನಾ ಪ್ರಕರಣಗಳು ವರದಿಯಾಗುತ್ತಿವೆ. ಇದೀಗ ಹಿಂದಿಯ ಖ್ಯಾತ ಧಾರಾವಾಹಿ ತಂಡದ ಮೂರು ಮಂದಿಗೆ ಕರೊನಾ ಬಂದ ಹಿನ್ನೆಲೆಯಲ್ಲಿ, ಇಡೀ ತಂಡ ಆತಂಕದಲ್ಲಿ ಶೂಟಿಂಗ್​ ಮಾಡಿಕೊಳ್ಳುತ್ತಿದೆ.

ಕಸೌತಿ ಜಿಂದಗಿ ಕಾಯ್ ಧಾರಾವಾಹಿ ಸೆಟ್​ನಲ್ಲಿನ ಇಬ್ಬರು ಮತ್ತು ಕಲಾವಿದ ಪಾರ್ಥ ಸಮರ್ಥಗೆ ಕರೊನಾ ವೈರಸ್​ ದೃಢಪಟ್ಟಿತ್ತು. ಬಳಿಕ ಇತ್ತೀಚಿನ ಮತ್ತೊಂದು ವರದಿಯಲ್ಲಿ ನೆಗೆಟಿವ್​ ಬಂದಿದ್ದರಿಂದ ಪಾರ್ಥ ಕ್ವಾರಂಟೈನ್​ನಲ್ಲಿದ್ದಾರೆ.

ಹೀಗಿರುವಾಗಲೇ ಧಾರಾವಾಹಿಯ ನಾಯಕಿ ಎರಿಕಾ ಫರ್ನಾಂಡಿಸ್​ ಕರೊನಾ ಹಾವಳಿಯಿಂದ ತಪ್ಪಿಸಿಕೊಳ್ಳಲು ಹೊಸ ನಿರ್ಧಾರಕ್ಕೆ ಬಂದಿದ್ದಾರೆ. ಅವರ ಭಾಗದ ಚಿತ್ರೀಕರಣವನ್ನು ಅವರ ಮನೆಯಲ್ಲಿಯೇ ಚಿತ್ರೀಕರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.

ಇನ್ನು ಧಾರಾವಾಹಿ ವಿಚಾರಕ್ಕೆ ಬರುವುದಾದರೆ, ನಿರ್ದೇಶನ, ಛಾಯಾಗ್ರಹಣ, ಮೇಕಪ್​ ಸೇರಿ ಹಲವು ವಿಭಾಗಗಳಲ್ಲಿ ಪರಿಣತಿ ಹೊಂದಿರುವುದರಿಂದ ಅವರ ಭಾಗದ ಚಿತ್ರೀಕರಣವನ್ನು ಅವರೇ ಮಾಡಲಿದ್ದಾರಂತೆ. ಸಹಕಲಾವಿದರಿಲ್ಲದೆ ನಟನೆ ಮಾಡಿ ಅದರ ದೃಶ್ಯಾವಳಿಗಳನ್ನು ಕಳುಹಿಸುವುದಾಗಿ ಹೇಳಿಕೊಂಡಿದ್ದಾರೆ. ಸದ್ಯ ಪಾಸಿಟಿವ್​ ಬಂದವರು ಕ್ವಾರಂಟೈನ್​ನಲ್ಲಿದ್ದು, ಅವರೆಲ್ಲರ ವರದಿ ನೆಗೆಟಿವ್​ ಬಂದ ಬಳಿಕವಷ್ಟೇ ಸೆಟ್​ಗೆ ಹಾಜರಾಗಲಿದ್ದಾರಂತೆ ಎರಿಕಾ.

Check Also

ಹವಾಮಾನ ಇಲಾಖೆಯಿಂದ ರಾಜ್ಯದ ಜನತೆಗೆ ಮಹತ್ವದ ಸೂಚನೆ

Spread the loveಬೆಂಗಳೂರು: ಮುಂದಿನ 24 ಗಂಟೆಗಳಲ್ಲಿ ಕರ್ನಾಟಕದ ಕರಾವಳಿ ಭಾಗ ಮತ್ತು ದಕ್ಷಿಣ ಒಳನಾಡಿನಲ್ಲಿ ಅತಿ ಹೆಚ್ಚು ಮಳೆಯಾಗುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!