Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಮಂಡ್ಯ / ಮಾಕವಳ್ಳಿ ನೂತನ ಹಾಲು ಶುಧ್ದೀಕರಣ ಘಟಕಕ್ಕೆ ಗುದ್ದಲಿ ಪೂಜೆ.

ಮಾಕವಳ್ಳಿ ನೂತನ ಹಾಲು ಶುಧ್ದೀಕರಣ ಘಟಕಕ್ಕೆ ಗುದ್ದಲಿ ಪೂಜೆ.

 

ಮಂಡ್ಯ: ಕಸಬಾ ಮಾಕವಳ್ಳಿ ಗ್ರಾಮದ ಸಾರ್ವಜನಿಕರಿಗಾಗಿ ನಿರ್ಮಿಸಲಾದ ನೂತನ ಹಾಲು ಶುಧ್ದೀಕರಣ ಘಟಕಕ್ಕೆ ಇಂದು ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಸದಸ್ಯರಾದ ಡಾಲು ರವಿಕುಮಾರ್ ಮತ್ತು ಎಚ್ ಟಿ ಮಂಜುನಾಥರವರು ಗುದ್ದಲಿ ಪೂಜೆ ಸಲ್ಲಿಸಿದರು.
ಜೋಡೆತ್ತಿನ ಅಂತೆ ಪೂಜೆ ಸಲ್ಲಿಸಿ ಹಾಲು ಶುದ್ಧೀಕರಣ ಘಟಕ ಅತಿವೇಗದಲ್ಲಿ ಗುಣಮಟ್ಟ ಕಟ್ಟಡ ನಿರ್ಮಾಣವಾಗಲಿ. ಈ ಕಟ್ಟಡದಲ್ಲಿ ನೀವುಗಳು ಗುಣಮಟ್ಟದ ಹಾಲನ್ನು ಹಾಕಬೇಕು ಮತ್ತು ನಮ್ಮ ತಾಲೂಕಿನಲ್ಲೇ ನೂತನ ಘಟಕ ಶುದ್ಧ ಹಾಲು ಉತ್ಪಾದಕರ ಸಂಘ ವಾಗಿ ಹೊರಹೊಮ್ಮಲಿ ಎಂದು ಹಿತನುಡಿ ನುಡಿದರು.ನಮ್ಮ ಗ್ರಾಮಕ್ಕೆ ಹಾಲು ಶುದ್ಧೀಕರಣ ಘಟಕ ಸ್ಥಾಪನೆ ಆಗುತ್ತಿರುವುದು ನನ್ನ ಪರಿಶ್ರಮವಲ್ಲ .ನಮ್ಮ ಸಂಘದ ಸರ್ವ ಸದಸ್ಯರು ಹಾಗೂ ಗ್ರಾಮದ ಮುಖಂಡರು ಮತ್ತು ನಮ್ಮ ತಾಲೂಕಿನಲ್ಲಿ ಜೋಡಿ ನಂತೆ ಉತ್ತಮ ಕಾರ್ಯ ಆಡಳಿತ ನಡೆಸುತ್ತಿರುವ ನೂತನ ಮಂಡ್ಯ ಜಿಲ್ಲಾ ಹಾಲು ನಿರ್ದೇಶಕರ ಯಲ್ಲರ ಬೆಂಬಲದೊಂದಿಗೆ ಗ್ರಾಮದ ಜನರಿಗೆ ಉತ್ತಮ ವಿಶಾಲ ಮಾದರಿಯಲ್ಲಿ ಕಟ್ಟಡ ನಿರ್ಮಾಣವಾಗುತ್ತಿದೆ ನಮ್ಮ ಗ್ರಾಮದ ಸೌಭಾಗ್ಯ ಎಂದು ಮಾಕವಳ್ಳಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರು ಹಾಗೂ ವಿಜಯವಾಣಿ ಪತ್ರಕರ್ತರಾದ ಎಂ. ಸಿ. ರವಿಕುಮಾರ್ ರವರು ತಿಳಿಸಿ ಕಾರ್ಯಕ್ರಮಕ್ಕೆ ಮೆರಗು ತುಂಬಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ.ಎಂ. ಆರ್ ಮಂಜೇಗೌಡ, ರಾಮೇಗೌಡ, ಚೆನ್ನಬಸಪ್ಪ, ರಾಜೇಗೌಡ,ಗ್ರಾಮ ಪಂಚಾಯಿತಿ ಸದಸ್ಯ ಯೋಗೇಶ್, ಗ್ರಾಮದ ಯುವಕರಾದ ಸತ್ಯನಾರಾಯಣ ಮನು ಗೌಡ ಹಾಗೂ ಹಾಲು ಉತ್ಪಾದಕರ ಸಂಘದ ಸದಸ್ಯರಾದ ಮಂಜೇಗೌಡ.ಎಂ. ಎಸ್. ಕುಮಾರ್, ಮಮತಾ, ಗೌರಮ್ಮ, ಚೆಲುವಯ್ಯ, ಮಂಜೇಗೌಡ ಇನ್ನಿತರರು ಸಾರ್ವಜನಿಕರು ಉಪಸ್ಥಿತರಿದ್ದರು.

Share

About Bora nayak BIG TV NEWS, Mandya

Check Also

ರಾಜ್ಯ ಸರ್ಕಾರದಿಂದ ರೈತ ಸಮುದಾಯಕ್ಕೆ `ಶುಭಸುದ್ದಿ

ಮಂಡ್ಯ : ರಾಜ್ಯ ಸರ್ಕಾರವು ರೈತರಿಗೆ ಸಿಹಿಸುದ್ದಿ ನೀಡಲು ಮುಂದಾಗಿದ್ದು, ರಾಜ್ಯದಲ್ಲಿ ಯಶಸ್ವಿನಿ ಯೋಜನೆಯನ್ನು ಮತ್ತೆ ಜಾರಿಗೆ ತರಲು ಚಿಂತನೆ …

Leave a Reply

Your email address will not be published. Required fields are marked *

error: Content is protected !!