Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಯಲಿವಾಳ್ ಪಿ.ಕೆ.ಪಿ.ಎಸ್. ಸೊಸೈಟಿಯಿಂದ ರೈತರಿಗೆ ಮೋಸ: ಚನ್ನಪ್ಪ ಗಂಭೀರ ಆರೋಪ.

ಯಲಿವಾಳ್ ಪಿ.ಕೆ.ಪಿ.ಎಸ್. ಸೊಸೈಟಿಯಿಂದ ರೈತರಿಗೆ ಮೋಸ: ಚನ್ನಪ್ಪ ಗಂಭೀರ ಆರೋಪ.

 

ಹುಬ್ಬಳ್ಳಿ; ನಾಪೆಡ್ 2017-18 ನೇ ಸಾಲಿನಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ಪಿ.ಕೆ.ಪಿ.ಎಸ್) ಯಲಿವಾಳ ಸೊಸೈಟಿಯು ಶೇಂಗಾ ಖರೀದಿಸಿ ರೈತರಿಗೆ ಖಾಲಿ ಚೀಲ ಹಾಗೂ ಸಾಗಾಣಿಕೆ ವೆಚ್ಚ (ಬಾಡಗಿ) ವನ್ನು ರೈತರಿಗೆ ಕೊಡದೇ ಮೋಸ ಮಾಡಿದೆ ಎಂದು ಚನ್ನಪ್ಪ ಡಪ್ಪಳಿ ಆರೋಪಿಸಿದ್ದಾರೆ.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 21 ಜನವರಿ 2018 ರಂದು 126 ಚೀಲ ಶೇಂಗಾವನ್ನು ಎಲಿವಾಳ ಸೊಸೈಟಿಗೆ ಕೊಟ್ಟಿದ್ದು, ಪ್ರತಿ ಖಾಲಿಚೀಲಕ್ಕೆ 35 ರೂ, ಬಾಡಗೆ 15.50 ಸೇರಿ ಒಟ್ಟು 50.50. ಒಂದು ಚೀಲಕ್ಕೆ ಕೊಡಬೇಕಾಗಿತ್ತು. ಆದರೆ ಶೇಂಗಾ ಹಣದ ಹಣವನ್ನು ಪಾವತಿಸಿ ಶೇಂಗಾದ ಖಾಲಿ ಚೀಲ ಹಾಗೂ ಬಾಡಗಿ ಹಣವನ್ನು ಈವರೆಗೆ ಸಂದಾಯ ಮಾಡಿಲ್ಲ. ಅಲ್ಲದೇ ಈ ಬಗ್ಗೆ ಸೊಸೈಟಿ ಅಧ್ಯಕ್ಷ ಸಹದೇವಪ್ಪ ಹೊಸಕಟ್ಟಿ ಕೇಳಿದರೆ ಅವರು ಸೊಸೈಟಿ ಸದಸ್ಯರೆಲ್ಲರೂ ಚರ್ಚೆ ನಡೆಸಿ ಠರಾವು ಹೊರಡಿಸಲಾಗಿದ್ದು, ಅದರಲ್ಲಿ ಬಾಡಗಿ , ಖಾಲಿ ಚೀಲದ ಹಣವನ್ನು ಪೂರ್ಣವಾಗಿ ಸಂದಾಯ ಮಾಡಲಾಗುವುದಿಲ್ಲ. ಬದಲಾಗಿ 30 ರೂ ಹಣವನ್ನು ಮಾತ್ರ ಕೊಡಲಾಗುವುದು ಉಳಿದ ಹಣವನ್ನು ಸೊಸೈಟಿ ಅಭಿವೃದ್ಧಿಗೆ ಬಳಸಿಕೊಳ್ಳುವುದಾಗಿ ಹಾರಿಕೆ ಉತ್ತರ ಕೊಡುತ್ತಿದ್ದಾರೆ. ಅಲ್ಲದೇ ಈ ಬಗ್ಗೆ ಇನ್ನೂ ಹೆಚ್ಚಿಗೆ ಕೇಳಲು ಹೋದರೆ ರೈತರ ಮೇಲೆಯೇ ದಬ್ಬಾಳಿಕೆ ಮಾಡಿ, ನಿಮ್ಮ ಶೇಂಗಾ ವ್ಯಾಪಾರ ಮಾಡಲು ಮೇಲಧಿಕಾರಿಗಳಿಗೆ ಲಕ್ಷಗಟ್ಟಲೇ ಹಣ ಕೊಟ್ಡಿದ್ದೇನೆ ಎಂದು ಹೇಳುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು.
ಇನ್ನೂ ರೈತರಿಗೆ ಅನ್ಯಾಯ ಮಾಡಿದ ಯಲಿವಾಳ ಸೊಸೈಟಿಯೂ ರೈತರಿಗೆ ಸಂದಾಯ ಮಾಡಬೇಕಾದ ಖಾಲಿಚೀಲ ಹಾಗೂ ಸಾಗಾಣಿಕೆ ಬಾಡಿಗೆಯನ್ನು ಕೂಡಲೇ ಬಿಡುಗಡೆ ಮಾಡಬೇಕು. ಅಲ್ಲದೇ ಸೊಸೈಟಿಯಲ್ಲಿ ನಡೆದ ಬ್ರಷ್ಟಾಚಾರ ಕುರಿತು ತನಿಖೆ ಆಗಬೇಕು. ಅಲ್ಲದೇ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪಂಚಾಕ್ಷರಿ ಹಿರೇಮಠ, ನಿಂಗನಗೌಡ, ವೀರಭದ್ರಗೌಡ ಚಿಕ್ಕನಗೌಡ್ರ ಸೇರಿದಂತೆ ಮುಂತಾದವರು ಇದ್ದರು.

Share

About Shaikh BIG TV NEWS, Hubballi

Check Also

ಡಿಕೆಶಿ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪೋಟಕ ಆರೋಪ ಮಾಡಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. …

Leave a Reply

Your email address will not be published. Required fields are marked *

error: Content is protected !!