Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಕನ್ನಡ ಬಾವುಟಕ್ಕೆ ಆಕ್ಷೇಪ: ಜೋಶಿ ಕಚೇರಿ ಮೇಲೆ ಹಾರಾಡಿದ ಹಳದಿ- ಕೆಂಪು ಬಾವುಟ.

ಕನ್ನಡ ಬಾವುಟಕ್ಕೆ ಆಕ್ಷೇಪ: ಜೋಶಿ ಕಚೇರಿ ಮೇಲೆ ಹಾರಾಡಿದ ಹಳದಿ- ಕೆಂಪು ಬಾವುಟ.

 

ಹುಬ್ಬಳ್ಳಿ: ಕನ್ನಡ ರಾಜ್ಯೋತ್ಸವದಂದು ಕನ್ನಡ ಬಾವುಟ ಹಾರಿಸಬೇಡಿ ಎಂದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಹೇಳಿಕೆ ಕೆಂಡಾಮಂಡಲರಾಗಿದ್ದ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು, ಶುಕ್ರವಾರ ಹುಬ್ಬಳ್ಳಿಯಲ್ಲಿರುವ ಜೋಶಿ ಕಚೇರಿ ಮೇಲೆಯೇ ಕನ್ನಡ ಬಾವುಟ ಹಾರಿಸಿದ್ದಾರೆ.

ಆ ಮೂಲಕ ಕನ್ನಡ ಬಾವುಟ ಹಾರಾಟಕ್ಕೆ ಆಕ್ಷೇಪಿಸಿದ್ದ ಕೇಂದ್ರ ಸಚಿವ ಜೋಶಿಯವರಿಗೆ ಖಡಕ್ ಸಂದೇಶ ರವಾನಿಸಿದ್ದಾರೆ. ಕನ್ನಡ ರಾಜ್ಯೋತ್ಸವದಂದು ರಾಷ್ಟ್ರಧ್ವಜವನ್ನು ಮಾತ್ರ ಹಾರಿಸಬೇಕು ಎಂದು ಈ ಹಿಂದೆ ಜೋಶಿ ಹೇಳಿದ್ದರು. ಇದು ಪ್ರತಿಪಕ್ಷ ಹಾಗೂ ಕನ್ನಡಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿತ್ತು.

ಕೇಂದ್ರ ಸಚಿವ ಜೋಶಿಯವರ ಕಚೇರಿ ಮೇಲೆ ಕರ್ನಾಟಕ ರಕ್ಷಣಾ ವೇದಿಕೆಯ ಅಮೃತ ಇಜಾರಿ ಹಾಗೂ ಕಾರ್ಯಕರ್ತರು ಕನ್ನಡ ಬಾವುಟ ಹಾರಿಸಿರುವ ವಿಷಯ ತಿಳಿದು ತಮಗೆ ಮಹದಾನಂದವಾಗಿದೆ ಎಂದು ಕರುನಾಡು ರಕ್ಷಣಾ ಪಡೆಯ ರಾಜ್ಯಾಧ್ಯಕ್ಷ ಹರೀಶಕುಮಾರ್‍ಜೀ ಫೇಸ್‍ಬುಕ್ ಅಕೌಂಟ್‍ನಲ್ಲಿ ಬರೆದುಕೊಂಡಿದ್ದಾರೆ.

ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ, ಕನ್ನಡ ಬಾವುಟ ಇಲ್ಲದೇ ರಾಜ್ಯೋತ್ಸವ ಆಚರಣೆಗೆ ಮುಂದಾಗಿದ್ದು ಜನಾಕ್ರೋಶಕ್ಕೆ ಕಾರಣವಾಗಿತ್ತು. ರಾಷ್ಟ್ರಧ್ವಜ ವಿರುವಾಗ ಪ್ರಾದೇಶಿಕ ಬಾವುಟಗಳಿಗೆ ಮಾನ್ಯತೆ ಇಲ್ಲ ಎಂದು ಬಿಜೆಪಿ ಸರ್ಕಾರ 2 ವರ್ಷಗಳಿಂದ ಹೇಳಿಕೆ ನೀಡುತ್ತಲೇ ಬಂದಿದೆ. ಈ ಮಧ್ಯೆ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕನ್ನಡ ಧ್ವಜ ರಚನೆಗೆ ಸಮಿತಿ ರಚಿಸಿ ನೂತನ ಧ್ವಜ ವಿನ್ಯಾಸಗೊಳಿಸಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.

Share

About Shaikh BIG TV NEWS, Hubballi

Check Also

ಡಿಕೆಶಿ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪೋಟಕ ಆರೋಪ ಮಾಡಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. …

Leave a Reply

Your email address will not be published. Required fields are marked *

error: Content is protected !!