Hiring Reporter’s For more Information Contact Above Number 876 225 4007 . Program producer
Home / Breaking News / ಅರೆಸ್ಟ್ ​ಆದ ISIS ಉಗ್ರನ ಪತ್ನಿ ಎನ್ನು ಮನವಿ ಮಾಡಿದ್ದಾರೆ ಗೊತ್ತಾ

ಅರೆಸ್ಟ್ ​ಆದ ISIS ಉಗ್ರನ ಪತ್ನಿ ಎನ್ನು ಮನವಿ ಮಾಡಿದ್ದಾರೆ ಗೊತ್ತಾ

Spread the love

ನಿನ್ನೆ ನವದೆಹಲಿ ಪೊಲೀಸರು, ಭದ್ರತಾ ಪಡೆಗಳು ನವದೆಹಲಿಯಲ್ಲಿ ಐಎಸ್​ಐಎಸ್ ಉಗ್ರ ಅಬು ಯೂಸೂಫ್​ ಎಂಬಾತನನ್ನು ಗುಂಡಿನ ಚಕಮಕಿ ಬಳಿಕ ಬಂಧಿಸಿದ್ದವು. ದೆಹಲಿಯ ದೌಲಾ ಕುಂವಾ ಏರಿಯಾದಲ್ಲಿ ಉಗ್ರ ಹಾಗೂ ಪೊಲೀಸರ ನಡುವೆ ಮೊನ್ನೆ ರಾತ್ರಿ ಗುಂಡಿನ ಚಕಮಕಿ ನಡೆದಿತ್ತು. ಇನ್ನು ಬಂಧಿತ ಉಗ್ರನ ಬಳಿ ಇದ್ದ ಐಇಡಿ(ಸುಧಾರಿತ ಸ್ಫೋಟಕ ಸಾಧನ) ವಶಪಡಿಸಿಕೊಳ್ಳಲಾಗಿತ್ತು. ಅಷ್ಟೇ ಅಲ್ಲ ಎರಡು ಐಇಡಿ ಅಲ್ಲದೇ, ಪಿಸ್ತೂಲ್ ವಶಪಡಿಸಿಕೊಳ್ಳಲಾಗಿತ್ತು. ಈತನಿಗೆ ಐಎಸ್​ಐಎಸ್​ನ ಟಾಪ್ ಕಮಾಂಡರ್​ಗಳ ಜೊತೆ ನೇರ ಸಂಪರ್ಕ ಇತ್ತು ಎಂದು ಕೂಡ ತಿಳಿದು ಬಂದಿತ್ತು.

ಆದ್ರೆ, ಈತನ ಪತ್ನಿ ಈಗ ನನ್ನ ಗಂಡನನ್ನು ಕ್ಷಮಿಸಿ ಬಿಟ್ಟು ಬಿಡಿ ಅಂತಾ ಮನವಿ ಮಾಡಿದ್ದಾಳೆ. ವಿಶೇಷ ಅಂದ್ರೆ ಆತ ಮನೆಯಲ್ಲಿ ಗನ್​ ಪೌಡರ್​ ಇಟ್ಟಿದ್ದನ್ನೂ ಆಕೆ ಮಾಧ್ಯಮಗಳ ಮುಂದೆ ಹೇಳಿದ್ದು, ಸದ್ಯ ಆಕೆ ಬಗ್ಗೆಯೂ ಸಂಶಯ ಮೂಡಲು ಕಾರಣವಾಗಿದೆ.

ಅಷ್ಟಕ್ಕೂ ಆಗಿದ್ದು ಏನೆಂದ್ರೆ, ಎಎನ್‌ಐ ಸುದ್ದಿ ಸಂಸ್ಥೆ ಜೊತೆ ಮಾತನಾಡಿರುವ ಉಗ್ರ ಅಬು ಯೂಸುಫ್​ ಪತ್ನಿ, ನನ್ನ ಪತಿ ಮನೆಯಲ್ಲಿ ಗನ್​ ಪೌಡರ್ ಹಾಗೂ ಇತರೆ ವಸ್ತುಗಳನ್ನು ಇಟ್ಟಿದ್ದ. ಇಂಥದ್ದನ್ನೆಲ್ಲ ಮಾಡಬೇಡ ಅಂತಾ ನಾನು ಹೇಳಿದಾಗ, ಆತ ನನ್ನನ್ನು ತಡೀಬೇಡ ಎಂದು ಹೇಳಿದ್ದ. ನನ್ನ ಪತಿಯನ್ನು ಕ್ಷಮಿಸಬೇಕು ಅನ್ನೋದು ನನ್ನ ಬಯಕೆಯಾಗಿದೆ. ನನಗೆ ನಾಲ್ಕು ಮಕ್ಕಳಿವೆ? ನಾನು ಎಲ್ಲಿಗ ಎಹೋಗಬೇಕು? ಎಂದು ಆಕೆ ಪ್ರಶ್ನಿಸಿದ್ದಾಳೆ.

ಸದ್ಯ, ಅಬು ಯೂಸೂಫ್ ಮನೆಯಲ್ಲಿ ಗನ್​ ಪೌಡರ್ ಹಾಗೂ ಇತರೆ ವಸ್ತುಗಳನ್ನು ಇಟ್ಟಿದ್ದು ತಿಳಿದಿದ್ದರೂ, ಆತನ ಪತ್ನಿ ಯಾಕೆ ಸುಮ್ಮನಿದ್ದಳು? ಪೊಲೀಸರ ಗಮನಕ್ಕೆ ಯಾಕೆ ತರಲಿಲ್ಲ? ಈ ಕೃತ್ಯದಲ್ಲಿ ಆಕೆಯೂ ಆರೋಪಿಯಾ? ಅನ್ನೋ ಪ್ರಶ್ನೆಗಳು ಮೂಡಿವೆ. ಅಷ್ಟೇ ಅಲ್ಲ, ಆಕೆಯನ್ನೂ ಬಂಧಿಸಿ ಈ ಬಗ್ಗೆ ತನಿಖೆ ಮಾಡಬೇಕು ಅನ್ನೋ ಒತ್ತಾಯ ಕೂಡ ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬಂದಿದೆ.

Check Also

ವಾಹನ ಸವಾರರಿಗೆ ಮತ್ತೊಂದು ಗುಡ್ ನ್ಯೂಸ್

Spread the loveಮೋಟಾರು ವಾಹನ ನಿಯಮಗಳಲ್ಲಿ ಕೇಂದ್ರ ಸರ್ಕಾರ ಬದಲಾವಣೆ ತಂದಿದ್ದು ಅಕ್ಟೋಬರ್ 1 ರಿಂದ ವಾಹನ ನಿಯಮಗಳಲ್ಲಿ ಬದಲಾವಣೆಯಾಗಲಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!