Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಹುಬ್ಬಳ್ಳಿ / ಯುವಜನತೆ ಸಂಸ್ಕಾರವನ್ನು ಅಳವಡಿಸಿಕೊಳ್ಳಲಿ.

ಯುವಜನತೆ ಸಂಸ್ಕಾರವನ್ನು ಅಳವಡಿಸಿಕೊಳ್ಳಲಿ.

 

ಲಧಾರವಾಡ:- ಇಂದಿನ ಯುವಜನತೆ ಸಂಸ್ಕೃತಿ, ಸಂಸ್ಕಾರವನ್ನು ಕಲಿತು ಅಳವಡಿಸಿಕೊಳ್ಳುವ ಮೂಲಕ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕಿದೆ ಎಂದು ಕರ್ನಾಟಕ ಕಾನೂನು ವಿಶ್ವವಿದ್ಯಾಲಯದ ಡೀನ್‌ ಪ್ರೊ. ಸಿ. ಎಸ್. ಪಾಟೀಲ ಹೇಳಿದರು.
ಇಲ್ಲಿನ ಕವಿವಿಯಲ್ಲಿ ಆಯೋಜಿಸಲಾಗಿದ್ದ 5ನೇ ವಲಯ ಮಟ್ಟದ ಯುವಜನೋತ್ಸವದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಇಂದಿನ ಯುವ ಜನತೆ ಸಂಸ್ಕೃತಿಯನ್ನು ಕಡೆಗಣಿಸದೇ, ಕಲಿತು ಬೆಳೆಸಬೇಕಿದೆ. ಜೀವನದಲ್ಲಿ ಬಹುತೇಕರು ಯಶಸ್ವಿಯಾಗಲು ಅನ್ಯಮಾರ್ಗ ಬಳಸದೇ, ತಮ್ಮ ಕಾಯಕದಲ್ಲಿ ವೃತ್ತಿಪರತೆಯನ್ನು ಹೆಚ್ಚಿಸಿಕೊಳ್ಳಬೇಕು. ಅಂದಾಗ ಮಾತ್ರ ಯಶಸ್ಸು ಲಭಿಸುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕವಿವಿ ವಿದ್ಯಾರ್ಥಿ ಕಲ್ಯಾಣ ವಿಭಾಗದ ನಿರ್ದೇಶಕ ಡಾ. ಆರ್. ಆರ್. ನಾಯಕ್‌ ಮಾತನಾಡಿ, ಜೀವನದಲ್ಲಿ ಸೋಲು ಗೆಲುವು ಸಹಜ. ಎರಡನ್ನೂ ಸಮಾನವಾಗಿ ಸ್ವೀಕರಿಸುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಅಲ್ಲದೇ ಯುವಜನೋತ್ಸವದ ವಿಜೇತರನ್ನು ವಿವಿಯ ಖರ್ಚಿನಲ್ಲಿ ಮುಂದಿನ ಹಂತದ ಯುವಜನೋತ್ಸವಕ್ಕೂ ಕಳುಹಿಸುವ ವ್ಯವಸ್ಥೆ ಮಾಡಲು ತಾವು ಸಿದ್ಧರಿದ್ದು, ವಿದ್ಯಾರ್ಥಿಗಳು ಶ್ರದ್ಧೆಯಿಂದ ಪಾಲ್ಗೊಳ್ಳಬೇಕೆಂದರು.
ಕಾರ್ಯಕ್ರಮದಲ್ಲಿ ಕವಿವಿಯ ಪಿಜಿ ಜಿಮಖಾನಾ ಅಧ್ಯಕ್ಷ ಪ್ರೊ. ಷಣ್ಮುಖ ವಸಂತ ಕಾಂಬಳೆ, ಜಿಮಖಾನಾ (ಸಾಂಸ್ಕೃತಿಕ) ಉಪಾಧ್ಯಕ್ಷೆ ಡಾ. ತ್ರಿವೇಣಿ ಎಸ್, ಜಿಮಖಾನಾ (ಕ್ರೀಡೆ) ಉಪಾಧ್ಯಕ್ಷ ಡಾ. ಎ. ಎಮ್. ಕಡಕೊಳ, ಜಿಮಖಾನ ಕಾಯದರ್ಶಿ ಕು. ಮಂಜುಳಾ ಕುಂಬಾರ ಉಪಸ್ಥಿತರಿದ್ದರು.

ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನಡೆದ 5ನೇ ವಲಯ ಮಟ್ಟದ ಯುವಜನೋತ್ಸವದಲ್ಲಿ ವಾಣಿಜ್ಯ ಶಾಸ್ತ್ರ ವಿಭಾಗ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದುಕೊಂಡಿತು. ‌ವೈಯಕ್ತಿಕ ವಿಭಾಗದ ವೀರಾಗ್ರಣಿ ಪ್ರಶಸ್ತಿಯನ್ನು ಪಿ.ಪಿ.ಜಿ. ಮ್ಯೂಸಿಕ್‌ ಆಂಡ್‌ ಪಿಜಿ ಸೆಂಟರ್‌ ಗದಗ ಕಾಲೇಜಿನ ಗಂಗಪ್ಪ ಗಾಣಿಗೇರ ತಮ್ಮದಾಗಿಸಿಕೊಂಡರು.

Share

About Shaikh BIG TV NEWS, Hubballi

Check Also

Featured Video Play Icon

ಬಾ ಬಾ ನಾ ರಡಿ….ರಾಬರ್ಟ್ ಗೆ ಜೈ ಅಂದ ಅಭಿಮಾನಿಗಳು | Roberrt movie craze after releasing | BIG TV NEW

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!