Breaking News

ಪ್ರೀತಿಸಿ ಮದುವೆಯಾದ ಜೋಡಿ : ಗಂಡನಿಗೆ ಹೆಣವಾಗಿ ಸಿಕ್ಕ ಪತ್ನಿ

ಹಾವೇರಿ: ಆರು ತಿಂಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಗೃಹಿಣಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕಾಗಿನೆಲೆ ಗ್ರಾಮದಲ್ಲಿ ನಡೆದಿದೆ.

ಮನುಜಾ (20) ಮೃತ ಗೃಹಿಣಿ. ಕಳೆದ ಐದು ದಿನಗಳ ಹಿಂದೆ ಗಂಡನ ಮನೆಯಿಂದ ಕಾಣೆಯಾಗಿದ್ದ ಮನುಜಾ ಕಾಗಿನೆಲೆಯ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ ಎನ್ನಲಾಗ್ತಿದೆ.

ಬ್ಯಾಡಗಿ ತಾಲೂಕಿನ ಕಳಗೊಂಡ ಗ್ರಾಮದವಳಾಗಿದ್ದ ಮನುಜಾ ಆರು ತಿಂಗಳ ಹಿಂದೆ ಅದೇ ಗ್ರಾಮದ ಬಸವರಾಜ ಎಂಬಾತನನ್ನ ಪ್ರೀತಿಸಿ ಮದುವೆಯಾಗಿದ್ದಳು. ಈ ಮಧ್ಯೆ ಅವರಿಗೆ ಪತಿ ಬಸವರಾಜ ಮತ್ತು ಆತನ ಮನೆಯವರು ಕಿರಕುಳ ನೀಡುತ್ತಿದ್ದರು ಎಂದು ಮನುಜಾ ಪೋಷಕರು ದೂರಿದ್ದಾರೆ. ಅಲ್ಲದೇ ಐದು ದಿನಗಳ ಹಿಂದೆ ನಮ್ಮ ಮಗಳನ್ನು ಕೊಲೆ ಮಾಡಿ ಕೆರೆಯಲ್ಲಿ ಬಿಸಾಕಿ ಹೋಗಿದ್ದಾರೆ ಎಂದು ಆಕೆಯ ಪೋಷಕರು ಆರೋಪಿಸಿದ್ದಾರೆ.

ಇನ್ನು ಮನುಜಾ ಮೃತದೇಹ ತೆಗೆದುಕೊಂಡು ಹೋಗದ ಬಸವರಾಜ ಮತ್ತು ಅವನ ಮನೆಯವರ ವಿರುದ್ಧ ಮನುಜಾ ಸಂಬಂಧಿಕರು ತೀವ್ರ ಆಕ್ರೋಶಪಡಿಸಿದ್ದಾರೆ. ಕಾಗಿನೆಲೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Share News

About admin

Check Also

ಕುಷ್ಟಗಿಯಲ್ಲಿ ಘೋರ ದುರಂತ: ಮೂವರು ಮಕ್ಕಳಿಗೆ ವಿಷ ಕುಡಿಸಿ ತಂದೆಯೂ ಆತ್ಮಹತ್ಯೆಗೆ ಯತ್ನ!

ಕುಷ್ಟಗಿ ತಾಲೂಕಿನ ನೀರಲೂಟಿ ಗ್ರಾಮದಲ್ಲಿ ಮದ್ಯವ್ಯಸನಿ ತಂದೆಯೊಬ್ಬ ತನ್ನ 10, 8 ಮತ್ತು 5 ವರ್ಷದ ಮೂವರು ಮಕ್ಕಳಿಗೆ ವಿಷ …

Leave a Reply

Your email address will not be published. Required fields are marked *