ಬೆಳಗಾವಿ: ಡಿಕೆಶಿ ಗರ್ಲ್ ಫ್ರೆಂಡ್ ಮನೆ ಲಂಡನ್ನಲ್ಲಿ ಇದೆ ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ. ಶುಗರ್ ಫ್ಯಾಕ್ಟರಿಯಲ್ಲಿ ಡಿಕೆಶಿ ಹಣ ಹೂಡಿಕೆ ಮಾಡಿದ್ದಾರೆ. ಹೆಬ್ಬಾಳ್ಕರ್ ಶುಗರ್ ಫ್ಯಾಕ್ಟರಿಯಲ್ಲಿ ಡಿಕೆಶಿ ಬ್ಲಾಕ್ಮನಿ ಇದೆ, ಕೋ-ಆಪರೇಟೀವ್ ಬ್ಯಾಂಕ್ನಲ್ಲಿ ಕೋಟ್ಯಂತರ ಅವ್ಯವಹಾರ ಆಗಿದೆ. ಲಂಡನ್, ದುಬೈನಲ್ಲಿ ಮನೆ ಇವೆ ಅಂತಾ ಡಿಕೆಶಿ ಹೇಳಿದ್ದಾರೆ, ಡಿಕೆಶಿ ಗರ್ಲ್ ಫ್ರೆಂಡ್ ಮನೆ ಲಂಡನ್ನಲ್ಲಿ ಇದೆ ಎಂದು ಗುಡುಗಿದ್ದಾರೆ. ಡಿ.ಕೆ.ಶಿವಕುಮಾರ್ ನೂರಾರು CD ಮಾಡಿಕೊಂಡಿದ್ದಾರೆ ಎಂದು ರಮೇಶ್ ಜಾರಕಿಹೊಳಿ ಆರೋಪ ಮಾಡಿದ್ದಾರೆ. ಡಿ.ಕೆ.ಶಿವಕುಮಾರ್ ನೂರಾರು CD ಮಾಡಿಕೊಂಡಿದ್ದಾರೆ, ಈ ವಿಡಿಯೋ ಆಡಿಯೋ CBIಗೆ ನೀಡುತ್ತೇನೆ, ರಮೇಶ್ ಜಾರಕಿಹೊಳಿ, ನನ್ನ ಬಳಿ 120 ನಿಮಿಷದ ವಿಡಿಯೋ, ಆಡಿಯೋ ಇದೆ. ನನ್ನ ವಿರುದ್ಧ 40 ಕೋಟಿ ಖರ್ಚು ಮಾಡಿ CD ಷಡ್ಯಂತ್ರ ಮಾಡಲಾಗಿದೆ. ಡಿಕೆಶಿ, CD ಲೇಡಿ ಮತ್ತು 6 ಜನರು ಅರೆಸ್ಟ್ ಆಗಬೇಕು, ಕನಕಪುರದ ಗ್ರಾನೈಟ್ ಉದ್ಯಮಿ, ಮಂಡ್ಯದ ಇಬ್ಬರು ನಾಯಕರು,ಕಾಂಗ್ರೆಸ್ನ ಒಂದಿಬ್ಬರು CD ಷಡ್ಯಂತ್ರದ ಹಿಂದೆ ಇದ್ದಾರೆ ಎಂದು ಬೆಳಗಾವಿಯಲ್ಲಿ ಸಾಹುಕಾರ್ ಆರೋಪಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

