BigTv News
May 17, 2025
Breaking News, Crime, ಕೊಪ್ಪಳ
ಖರ್ಚಿಗೆ 100 ರೂಪಾಯಿಗೆ ಕೊಡದಿದ್ದಕ್ಕೆ ಅಜ್ಜಿ ತಲೆಯ ಮೇಲೆ ಮೊಮ್ಮಗ ರುಬ್ಬುವ ಗುಂಡು ಕಲ್ಲು ಎತ್ತಿಹಾಕಿ ಕೊಲೆ ಮಾಡಿದ ಘಟನೆ ಕೊಪ್ಪಳ ಜಿಲ್ಲೆ ಕನಕಗಿರಿಯಲ್ಲಿ ಶುಕ್ರವಾರ ನಡೆದಿದೆ.ಶುಕ್ರವಾರ ಬೆಳಗ್ಗೆ ಹಣಕ್ಕಾಗಿ ತಂದೆ, ತಾಯಿ, ಅಜ್ಜಿಯನ್ನು ಚೇತನ್ ಕುಮಾರ್ ಪೀಡಿಸಿದ್ದ. ಹಣಕ್ಕಾಗಿ ಅಜ್ಜಿ ಕನಕಮ್ಮನ ಕೈ ಕಾಲು ಹಿಡಿದಿದ್ದನಾದರೂ ಅವರು ಹಣ ಕೊಟ್ಟಿಲ್ಲ. ಇದರಿಂದ ರೊಚ್ಚಿಗೆದ್ದ ಚೇತನ ಅಜ್ಜಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿದ್ದಾನೆ. ತೀವ್ರ ರಕ್ತಸ್ರಾವದಿಂದ ಮನೆಯಲ್ಲಿಯೇ ಕನಕಮ್ಮ …
Read More »
BigTv News
April 24, 2025
Breaking News, Crime, ಕೊಪ್ಪಳ
ಆಟೋ ಮಾಲೀಕನೊಬ್ಬ ತನ್ನ ಆಟೋವನ್ನು 12 ವರ್ಷದ ಬಾಲಕನಿಗೆ ಚಾಲನೆಗೆ ನೀಡಿದಿದ್ದು, ಬಾಲಕ ಆಟೋ ಓಡಿಸುತ್ತಿದ್ದ ವೇಳೆ ಯಲಬುರ್ಗಾ ಪಟ್ಟಣದ ಅಂಗಡಿಯೊಂದರ ಬಳಿ ಮೊಬೈಲ್‌ನಲ್ಲಿ ಮಾತನಾಡುತ್ತಾ ನಿಂತಿದ್ದ ರಾಜಶೇಖರ ಪಾಟೀಲ್ ಎಂಬ ವ್ಯಕ್ತಿಗೆ ಡಿಕ್ಕಿ ಹೊಡೆದಿದ್ದ. ಈ ಅಪಘಾತದಲ್ಲಿ ರಾಜಶೇಖರ ಪಾಟೀಲ್ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದರು. ಅವರು ಕೊಪ್ಪಳದ ಯಲಬುರ್ಗಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಗಂಗಾವತಿ ನಿವಾಸಿಯಾಗಿದ್ದರು. ಗಂಗಾವತಿ ಹಿರಿಯ ಸಿವಿಲ್ ನ್ಯಾಯಾಲಯವು 12 …
Read More »
BigTv News
April 18, 2025
Breaking News, ಕೊಪ್ಪಳ
ಮಹಾರಾಣ ಪ್ರತಾಪ್ ಸಿಂಗ್ ವೃತ್ತದ ಸಮೀಪದ ಎನ್.ಆರ್ ರೈಸ್ ಮಿಲ್‌ನಲ್ಲಿ ಆಪರೇಟರ್ ಕೆಲಸ ಮಾಡುವ ಯುವಕ ಅಕ್ಕಿ ಸಂಗ್ರಹದ ಟ್ಯಾಂಕ್ ಒಡೆದು, ಅಕ್ಕಿಯಡಿ ಸಿಲುಕಿ ಮೃತಪಟ್ಟ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.ಅಕ್ಕಿ ಸಂಗ್ರಹದ ಟ್ಯಾಂಕ್‌ನಿಂದ ಅಕ್ಕಿ ಹೊರ ಬಿಡುವ ವೇಳೆ ತಾಂತ್ರಿಕ ದೋಷ ಸಂಭವಿಸಿ, ಸುಮಾರು 250 ಟನ್ ಅಕ್ಕಿ ಸಂಗ್ರಹದ ಟ್ಯಾಂಕ್ ಒಡೆದು ಅವಘಡ ಸಂಭವಿಸಿದೆ.ಕೂಡಲೇ ಅಗ್ನಿಶಾಮಕ ದಳ, ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬಂದರು. 3 ಜೆಸಿಬಿ, 1 …
Read More »
BigTv News
March 9, 2025
Breaking News, Crime, ಕೊಪ್ಪಳ
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ಸಾಲು ಸಾಲಾಗಿ ಅಪರಾಧ ಪ್ರಕರಣಗಳು ದಾಖಲಾಗುತ್ತಿದ್ದು ಇದೀಗ ವಿದೇಶಿಗರ ಮೇಲೆ ದುಡ್ಡಿಗಾಗಿ ಹಲ್ಲೆ ನಡೆಸಿದ ಯತ್ನ ಬೆಳಕಿಗೆ ಬಂದಿದೆ. ಗಾರೆ ಕೆಲಸ ಮಾಡುತ್ತಿರುವ ಇಬ್ಬರು ಆರೋಪಿಗಳು ಕುಡಿದು ಪ್ರವಾಸಿಗರಿಂದ ದುಡ್ಡನ್ನು ಕಸಿದುಕೊಳ್ಳಲು ಪ್ರಯತ್ನಿಸಿದ್ದಾರೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳನ್ನು ಬಂಧಿಸಿ ವಿಚಾರಿಸಿದಾಗ ಆರೋಪಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.
Read More »
BigTv News
March 9, 2025
Breaking News, Crime, ಕೊಪ್ಪಳ
ಮಾರ್ಚ್ 6 ರಂದು ನಡೆದಿದ್ದ ಗ್ಯಾಂಗ್ ರೇಪ್. ಕೊಪ್ಪಳ ಜಿಲ್ಲೆಯ ಗಂಗಾವತಿ ಯಲ್ಲಿ ನಡೆದ ಘಟನೆ. ಗ್ಯಾಂಗ್ ರೇಪ್ ತಡೆಯಲು ಮೂವರು ಯತ್ನಿಸಿದ್ದರು ಮೂರನ್ನು ನಾಲೆಗೆ ದುಡಿ ಪರಾರಿಯಾದ ದುಷ್ಕರ್ಮಿಗಳು. ಮೂವರಲ್ಲಿ ಇಬ್ಬರು ಈಜಿ ದಡ ಸೇರಿ ಪಾರಾಗಿದ್ದಾರೆ. ಇಬ್ಬರಿಗೂ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಬ್ಬರ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಮಲ್ಲೇಶ್ ಅಲಿಯಾಸ್ ಹಂಡಿಮಲ್ಲ (22) ಮತ್ತು ಚೇತನ್ ಸಾಯಿ (21) ಬಂಧಿತ ಆರೋಪಿಗಳಾಗಿದ್ದಾರೆ. ಮತ್ತೊಬ್ಬ ಆರೋಪಿಗಾಗಿ ಪೊಲೀಸರು …
Read More »
BigTv News
March 9, 2025
Breaking News, Crime, ಕೊಪ್ಪಳ
ಕೊಪ್ಪಳ ಜಿಲ್ಲೆಯ ಗಂಗಾವತಿ ಗ್ರಾಮದಲ್ಲಿ ಮೊನ್ನೆ ರಾತ್ರಿ ನಡೆದ ಘಟನೆ ಮೂವರು ಆರೋಪಿಗಳು ಅಮಾಯಕನನ್ನು ಕೊಲೆಮಾಡಿ ತಪ್ಪಿಸಿಕೊಳ್ಳಲು ಯತ್ನ ಮಾಡಿದ್ದಾರೆ. ಕಾರ್ಯಾಚರಣೆ ನಡೆಸಿದ ಪೊಲೀಸರು ನಿನ್ನೆ ಇಬ್ಬರು ಆರೋಪಿಗಳನ್ನು ಬಂಧನ ಮಾಡಿದ್ದೂ 3 ನೇ ಕೊಲೆಗಾರನು ಗಂಗಾವತಿ ಗ್ರಾಮದವನಾಗಿದ್ದು ಅವನಿಗಾಗಿ ಹುಡುಕಾಟ ನಡೆಸಿದ್ದಾರೆ. ಕೃತ್ಯದ ಬಳಿಕ ಬೇರೆ ಕಡೆ ತಪ್ಪಿಸಿಕೊಳ್ಳಲು ಯತ್ನ ನಡೆಸಿದರು ಪೋಲೀಸರ ಕಾರ್ಯ ಕ್ಷಮತೆಯಿಂದ ಆರೋಪಿಗಳನ್ನು ಭಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
Read More »
BigTv News
February 1, 2025
Breaking News, ಕೊಪ್ಪಳ
ಕೊಪ್ಪಳ: ಲಕ್ಷ ಲಕ್ಷ ಭಕ್ತರನ್ನು ಸೆಳೆಯುತ್ತಿರುವ ಹಾಗೂ ಕೋಟಿ ಕೋಟಿ ಆದಾಯ ತಂದುಕೊಡುತ್ತಿರುವ ಹುಲಿಗೆಮ್ಮ ದೇವಸ್ಥಾನವನ್ನು ಮಾಸ್ಟರ್‌ಪ್ಲಾನ್‌ನಂತೆ ಅಭಿವೃದ್ಧಿ ಮಾಡುವುದಕ್ಕೆ ಕೇಂದ್ರ ಸರ್ಕಾರ ₹100 ಕೋಟಿ ಅನುದಾನ ನೀಡಲು ತಾತ್ಕಾಲಿಕ ಅನುಮೋದನೆ ನೀಡಿದ್ದು, ಶೀಘ್ರದಲ್ಲಿಯೇ ಅನುದಾನ ಬಿಡುಗಡೆ ಆದೇಶವೂ ಆಗಬಹುದು. ಸಂಸದ ರಾಜಶೇಖರ ಹಿಟ್ನಾಳ ಅವರು ಕೇಂದ್ರಕ್ಕೆ ಮಾಡಿದ್ದ ಮನವಿಗೆ ಸ್ಪಂದಿಸಿರುವ ಕೇಂದ್ರ ಸರ್ಕಾರ ತಕ್ಷಣ ಡಿಪಿಆರ್ ಕಳುಹಿಸಿಕೊಟ್ಟರೆ ನೀಡುವುದಾಗಿ ಹೇಳಿದೆ. ಹೀಗಾಗಿ ಬಹುದಿನಗಳ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ. …
Read More »
BigTv News
January 27, 2025
Breaking News, ಕೊಪ್ಪಳ
ಕೊಪ್ಪಳ: ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಕೈಗೊಂಡಿರುವ ಶಾಲಾ ಶೌಚಾಲಯಗಳ ನಿರ್ಮಾಣ ಕಾಮಗಾರಿಗಳ ಗುಣಮಟ್ಟವನ್ನು ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆಯ ಅವರು ಇಂದು ಪರಿಶೀಲಿಸಿ, ಗುಣಮಟ್ಟ ಕಾಯ್ದುಕೊಳ್ಳಲು ಕರೆ ನೀಡಿದ್ದಾರೆ. ಕೊಪ್ಪಳ ತಾಲೂಕಿನ ಹಾಲವರ್ತಿ, ಗಿಣಿಗೇರಾ ಹಾಗೂ ಚಿಕ್ಕಬೊಮ್ಮನಾಳ ಗ್ರಾಮ ಪಂಚಾಯತಿಗಳಲ್ಲಿ ಅನುಷ್ಠಾನಗೊಂಡ ಮಹಾತ್ಮಾ ಗಾಂಧಿ ನರೇಗಾ ಯೋಜನೆಯ ಕಾಮಗಾರಿಗಳನ್ನು ಸೋಮವಾರ ಪರಿಶೀಲಿಸಿದರು. ಶಾಲಾ ಶೌಚಾಲಯ ಹಾಗು ಸಂಜೀವಿನಿ ಸಂಘದ ಶೆಡ್ ಕಾಮಗಾರಿಗಳ ಪರಿಶೀಲನೆ: ಗ್ರಾಮ …
Read More »
BigTv News
January 27, 2025
Breaking News, ಕೊಪ್ಪಳ
ಕೊಪ್ಪಳ : ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ನಡುವಿನ ಗುದ್ದಾಟ ಅವರ ಆಂತರಿಕ ವಿಚಾರವಾಗಿದ್ದು, ಅವರು ಕಾಂಗ್ರೆಸ್ ಬರುವ ಹಾಗೆ ಕಾಣುತ್ತಿಲ್ಲ. ಕಾಂಗ್ರೆಸ್ ತೋರಿಸಿ ಬಿಜೆಪಿಯಲ್ಲಿ ಬೇಳೆ ಬೇಯಿಸಿಕೊಳ್ಳುತ್ತಿದ್ದು, ನಾಟಕ ಮಾಡುತ್ತಿದ್ದಾರೆ ಎಂದು ನನಗೆ ಅನಿಸುತ್ತಿದೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ರವಿವಾರ ಹೇಳಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ ನಾವು ಯಾರು ಅವರನ್ನು ಪಕ್ಷಕ್ಕೆ ಕರೆದಿಲ್ಲ. ನಮ್ಮ ಪಕ್ಷಕ್ಕೆ ತಗೋಬೇಕಾದ್ರೆ ಹೈಕಮಾಂಡ್ ಜತೆ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. …
Read More »
BigTv News
January 23, 2025
Breaking News, ಕೊಪ್ಪಳ
ಕೊಪ್ಪಳ: ಜಿಲ್ಲೆಯಲ್ಲಿ ಪರಮಾಣು ವಿದ್ಯುತ್ ಸ್ಥಾವರ ಸ್ಥಾಪನೆ ಮಾಡಲಾಗುತ್ತಿದೆ ಎಂದು ಜನರನ್ನು ದಾರಿ ತಪ್ಪಿಸುವ ಕೆಲಸ ನಡೆಯುತ್ತಿದ್ದು, ಇದರಿಂದ ಯಾರೂ ಆತಂಕಕ್ಕೆ ಒಳಗಾಗುವುದು ಬೇಕಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು. ನಗರದಲ್ಲಿ ಮಾತನಾಡಿದ ಅವರು ‘ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಮೇಲಿಂದ ಮೇಲೆ ಭೂಮಿಯಲ್ಲಿರುವ ಖನಿಜದ ಬಗ್ಗೆ ಮಾಹಿತಿ ಸಂಗ್ರಹಿಸುವ ಸಾಮಾನ್ಯ ಪ್ರಕ್ರಿಯೆ ನಡೆಸುತ್ತಿದ್ದಾರೆ. ಪರಮಾಣು ಸ್ಥಾವರ ಸ್ಥಾಪನೆ ಅಂತಿಮವೇ ಆಗಿಲ್ಲ. ಒಂದು ವೇಳೆ …
Read More »