ರಾಷ್ಟ್ರಮಟ್ಟದಲ್ಲಿ ಹಾಗೂ ವಿವಿಧ ರಾಜ್ಯದಲ್ಲಿ ಸಕ್ರಿಯವಾಗಿರುವ ಕಾರ್ಮಿಕ ಸಂಘಟನೆಗಳು, ನೌಕರರ ಸಂಘ ಸಂಸ್ಥೆಗಳು ಒಟ್ಟುಗೂಡಿ ರಾಷ್ಟ್ರಮಟ್ಟದಲ್ಲಿNC-JCM ನವ ದೆಹಲಿಯ ಅಡಿಯಲ್ಲಿ,ನಿಶ್ಚಿತ ಪಿಂಚಣಿಯ ಮರು ಅನುಷ್ಠಾನದ ಹೋರಾಟಕ್ಕೆ ಜಂಟಿ ವೇದಿಕೆಯನ್ನುರಚಿಸಿಕೊಂಡಿವೆ.ಈ ವೇದಿಕೆ ರಕ್ಷಣಾ ಇಲಾಖೆ, ರೇಲ್ವೆ ಇಲಾಖೆ, ರಾಜ್ಯ ಸರ್ಕಾರಿ ನೌಕರರು ಸೇರಿದಂತೆ ಹೊಸ ಪಿಂಚಣಿ ವ್ಯವಸ್ಥೆಯಡಿಯಲ್ಲಿ ಬರುವ ಶಿಕ್ಷಕ ಹಾಗೂ ಶಿಕ್ಷಕೇತರ ನೌಕರರನ್ನೂ ಒಳಗೊಂಡಿದ್ದು,ಈ ಜಂಟಿ ವೇದಿಕೆಯ ಉದ್ದೇಶವೇ NPS ರದ್ದತಿ ಹಾಗೂ ಹಳೆಯ ನಿಶ್ಚಿತ ಪಿಂಚಣಿಯ ಮರು ಅನುಷ್ಠಾನವಾಗಿದೆ. ಎಪ್ರೀಲ್ – 01,2004 ರಿಂದಾ ಹಾಗೂ ನಂತರ ನೇಮಕಾತಿಗೊಂಡ ಎಲ್ಲ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರು ಹೊಸ ಪಿಂಚಣಿ ವ್ಯವಸ್ಥೆಯ ಅಡಿಯಲ್ಲಿ ಬರುತ್ತಾರೆ.ಈ ಜಂಟಿ ವೇದಿಕೆಯು ಕಳೆದ ತಿಂಗಳು ದಿನಾಂಕ 21-01-2023 ನವದೆಹಲಿಯಲ್ಲಿ ಸಭೆ ಸೇರಿ ಸರ್ವಾನುಮತದಿಂದ ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಂಡಿದ್ದು,NPS ರದ್ದುಗೊಳಿಸಿ ಹಳೆಯ ನಿಶ್ಚಿತ ಪಿಂಚಣಿಯನ್ನು ಮರು ಅನುಷ್ಠಾನಗೊಳಿಸಲು ಪೆಬ್ರವರಿ ತಿಂಗಳ ದಿನಾಂಕ 10 ರಿಂದ 20 ರವರೆಗೆ ಹಸ್ತಾಕ್ಷರ ಅಭಿಯಾನ ವನ್ನು ರಾಷ್ಟ್ರಾದ್ಯಂತ ಹಮ್ಮಿಕೊಳ್ಳುವುದು. ಹಾಗೂ ಅದರ ಅಂಗವಾಗಿ NPS ವ್ಯಾಪ್ತಿಗೆ ಒಳಪಟ್ಟಿರುವ ದೇಶ ಹಾಗೂ ವಿವಿಧ ರಾಜ್ಯಗಳ ಎಲ್ಲ ಕೇಂದ್ರ ಸರ್ಕಾರಿ, ರಾಜ್ಯ ಸರ್ಕಾರಿ ಹಾಗೂ ಅರೇ ಸರ್ಕಾರಿ ನೌಕರರ ಹಾಗೂ ಅವರ ಕುಟುಂಬದವರ ಹಸ್ತಾಕ್ಷರವನ್ನು ನಿಗದಿತ ನಮೂನೆಯಲ್ಲಿ ಸಂಗ್ರಹಿಸಿವುದು ಮತ್ತು ಅವುಗಳನ್ನು ದಿನಾಂಕ: 20-02-2023 ರಂದು ಗೌರವಾನ್ವಿತ ಭಾರತದ ರಾಷ್ಟ್ರಪತಿ ಯವರಿಗೆ ಈ-ಮೇಲ್ ಮುಖೇನ ಮನವಿ ರೂಪದಲ್ಲಿ ಕಳಿಸಿಕೊಡುವುದು. ವೈಕಕ್ತಿವಾಗಿ ಹಾಗೂ SWRMU ಮೂಲ ಕಲಕ್ಷಾಂತರ ನೌಕರರು ಆನ್ ಲೈನ್ ಮನವಿ ಸಲ್ಲಿಸಿದರು.
ದಿನಾಂಕ 21-02-2023 ರಂದು, SWRMU ಬೆಂಗಳೂರು ಮೈಸೂರು ವಿಭಾಗಗಳಲ್ಲಿ, ಮೈಸೂರು ಹಾಗೂ ಹುಬ್ಬಳ್ಳಿ ರೇಲ್ವೆ ಕಾರ್ಯಾಗಾರಗಳು, ಮತ್ತು ಹುಬ್ಬಳ್ಳಿ ವಿಭಾಗ ಹಾಗೂ ಕೇಂದ್ರ ಕಚೇರಿ ಸೇರಿದಂತೆ ವಲಯದಾದ್ಯಂತ ಹೊಸ ಪಿಂಚಣಿ ಪದ್ದತಿಯನ್ನು ರದ್ದುಗೂಳಿಸಿ, ಹಳೆಯ ನಿಶ್ಚಿತ ಪಿಂಚಣಿಯನ್ನು ಮರು ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆಗಳನ್ನು ಹಮ್ಮಿಕೊಂಡಿದ್ದು,ಸರ್ಕಾರ ಹಳೆಯ ಪಿಂಚಣಿಯನ್ನು ರದ್ದುಪಡಿಸಿದಂದಿನಿಂದಲೆ SWRMU/AIRF ಅದರ ಮರು ಅನುಷ್ಠಾನಕ್ಕೊಸ್ಕರ ನಿರಂತರವಾಗಿ ಹೋರಾಟ ಮಾಡುತ್ತಲೆ ಬಂದಿದೆ. ಯಾಕೆಂದರೆ NPS ನೌಕರರಿಗೆ ಫಲಪ್ರದವಾಗಿಲ್ಲ. ಕಾರಣ ನಿವೃತ್ತಿ ನಂತರ ಹಳೆಯ ಪಿಂಚಣಿ ಪದ್ದತಿಯಲ್ಲಿ ಸಿಗುತ್ತಿದ್ದ ಸವಲತ್ತುಗಳು, ಜೀವನ ಭದ್ರತೆ ಇದರಲ್ಲಿ ಸಿಗದಿರುವುದು. ಅನುಕಂಪ ಆಧಾರಿತ ನೇಮಕಾತಿ, ಕುಟುಂಬ ಪಿಂಚಣಿ ಮೊದಲಾದ ಸವಲತ್ತುಗಳು NPS ನಲ್ಲಿ ಸಿಗದಿರುವುದು ವಿಪರ್ಯಾಸ ಎಂದವರು ಹೇಳಿದರು.
ರೇಲ್ ಸೌಧದಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿಂದು ನೂರಾರು ಸಂಖ್ಯೆಯಲ್ಲಿ ಯುವ ರೇಲ್ವೆ ನೌಕರರು ಜಮಾಯಿಸಿ NPS ವಿರುದ್ದ ಘೋಷಣೆ ಕೂಗಿದರು ಹಾಗೂ ಹಳೆಯ ನಿಶ್ಚಿತ ಪಿಂಚಣಿಯ ಮರು ಅನುಷ್ಠಾನಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.

bigtvnews | Hubli Dharwad News | Kannada News | Karnataka News Hubli News | News In Hubli | Local news




