Breaking News

ರಾಜಕಾರಣ ಹೊಲಸು ಹಿಡಿದಿದೆ-ಎಚ್.ವಿಶ್ವನಾಥ್ ಲೇವಡಿ

ಹುಬ್ಬಳ್ಳಿ: ರಾಜಕಾರಣ ಹೊಲಸು ಹಿಡದಿದೆ. ಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿ ತಾಕತ್ ಇದೆಯಾ? ಧಮ್ ಇದೆಯಾ? ಅಂತಾರೆ. ಎಲ್ಲಿಗೆ ಹೋಗಿದೀವಿ ನಾವು, ರಾಜಕಾರಣಿಗಳು ಕನ್ನಡ ಭಾಷೆಯನ್ನು ಕೊಲ್ಲುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಆತಂಕ ವ್ಯಕ್ತಪಡಿಸಿದರು.

ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು 50 ವರ್ಷದಿಂದ ರಾಜಕಾರಣ ನೋಡಿದ್ದೇನೆ. ಈಗ ರಾಜಕಾರಣ ಹೊಲಸಾಗಿದೆ. ಇದು ರಿಪೇರಿ ಆಗಲೇಬೇಕು. ಇವತ್ತು ಚುನಾವಣೆ ಕೂಡಾ ಹಾಗೆ ಆಗಿವೆ. ಇವತ್ತು ಚುನಾವಣೆ ಅಂದ್ರೆ ಎಷ್ಟು ದುಡ್ಡು ಇಟ್ಟಿದಿಯಾ ಅಂತಾರೆ. ಇವತ್ತು ಪಕ್ಷಕ್ಕಿಂತ ಪಕ್ಷದ ನಾಯಕರು ದೊಡ್ಡವರಾಗಿದ್ದಾರೆ. ಮೊದಲು ಪಕ್ಷ ದೊಡ್ಡದಿತ್ತು. ಇವತ್ತು ನಾಯಕಾರಣ ರಾಜಕಾರಣ ಆಗಿದೆ. ಇದು ಮಾರಕ ಎಂದರು

ಡಿ.ಕೆ ಶಿವಕುಮಾರ್ ಕುರಿತು ಜಾರಕಿಹೊಳಿ ವಿಚಾರವಾಗಿ ಮಾತನಾಡಿದ ಅವರು, ಯಾರು ಯಾರನ್ನೂ ಮುಗಿಸೋಕೆ ಆಗಲ್ಲ. ಅದನ್ನು ಜಾರಕಿಹೊಳಿ ಹೇಳಬಾರದು. ಜನ ಮುಖ್ಯ, ಜನ ಏನಾದರೂ ಮಾಡಬಹುದು, ಆದರೆ ನಾವೇನೂ ಮಾಡೋಕೆ ಆಗಲ್ಲ. ಜಾರಕಿಹೊಳಿ ಕುಟುಂಬಕ್ಕೂ ಈ ರೀತಿ ಮಾಡೋದು ಗೌರವ ಅಲ್ಲ ಎಂದು ಡಿ.ಕೆ.ಶಿವಕುಮಾರ್ ಬಗ್ಗೆ ಸಾಫ್ಟ್ ಕಾರ್ನರ್ ಆಗಿದ್ದಾರೆ.

ಪರೋಕ್ಷವಾಗಿ ರಮೇಶ್ ಜಾರಕಿಹೊಳಿ ಮಾತಾಡೋದು ಸರಿ ಅಲ್ಲ. ನಾವೆಲ್ಲರೂ ಒಟ್ಟಿಗೆ ಇದ್ದವರು. ರಮೇಶ್ ಹಾಗೆ ಮಾತಾಡಬಾರದು. ನಾವೆಲ್ಲ ಬಂದು ಬಿಜೆಪಿ ಸರ್ಕಾರ ತಂದಿದ್ದೇವೆ. ಇವರೆಲ್ಲ ಯಡವಟ್ಟು ಗಿರಾಕಿ, ಶಿಕ್ಷಣ ವ್ಯವಸ್ಥೆ ಹಾಳು ಮಾಡಿದ್ದಾರೆ. ಶಾಲೆಗೆ ಕಾವಿ ಬಣ್ಣ ಹೊಡೆಯೋದು ಯೋಜನೆನ? ಬರೀ ಈ ಸರ್ಕಾರದಲ್ಲಿ ದುಡ್ಡು ದುಡ್ಡು, ಇದು ಸರ್ಕಾರಾನಾ..? ಎಂದು ಪ್ರಶ್ನಿಸಿದ ಅವರು, ಯಡಿಯೂರಪ್ಪ ಮ್ಯಾಜಿಕ್ 150 ಅಂತಾರೆ. ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ 115 ನಮ್ಮ ಮ್ಯಾಜಿಕ್, ಕುಮಾರಸ್ವಾಮಿ 123 ಅಂತಾರೆ. ಯಾರಪ್ಪ ನೀವು, ನೀವೆ ಡಬ್ಬಿ ತುಂಬಿಕೊಂಡು ಬಿಡ್ತೀರಾ. ಹುಚ್ಚರ ತರಹ ನೀವೆ ನಂಬರ್ ಕೊಡ್ತೀದ್ದೀರಾ ಎಂದು ಲೇವಡಿ ಮಾಡಿದರು.

Share News

About BigTv News

Check Also

ಜಮೀನು ವಿವಾದ: ಯುವಕನ ಕೊಲೆ, ನಾಲೆಗೆ ಶವ ಎಸೆದ ಆರೋಪ

ಮಂಡ್ಯ: ಜಮೀನು ವಿವಾದ ಹಾಗೂ ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ 30 ವರ್ಷದ ನವೀನ್ ಎಂಬ ಯುವಕನನ್ನು ಕೊಲೆ ಮಾಡಿ ಶವವನ್ನು …

Leave a Reply

Your email address will not be published. Required fields are marked *