ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಹೆಚ್ಚಿದ ಕಳ್ಳರ ಕೈಚಳಕ ಜೋರಾಗಿದೆ. ನಗರದಲ್ಲಿ ಮತ್ತೆ ಸರಣಿ ಕಳ್ಳತನ ಪ್ರಕರಣ ನಡೆದಿದೆ. ಕೇಶ್ವಾಪುರ, ಮಯೂರಿ ಎಸ್ಟೇಟ್ ಮತ್ತಿತರ ಕಡೆ ಸರಣಿ ಕಳ್ಳತನ ನಡೆದಿದೆ. ರಾತ್ರಿ ಹೊತ್ತು ಖದೀಮರು ರಾಜಾರೋಷವಾಗಿ ಬಂದು ಕಳ್ಳತನ ಮಾಡ್ತಿದ್ದಾರೆ. ಮನೆಗಳಿಗೆ ನುಗ್ಗಿ ಚಿನ್ನ, ಬೆಳ್ಳಿ, ನಗದು ಕದಿಯುತ್ತಿದ್ದಾರೆ. ಯಾರೂ ಇಲ್ಲದ ಮನೆಗಳೇ ಕಳ್ಳರ ಟಾರ್ಗೆಟ್ ಆಗಿವೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮನೆಯ ಸಮೀಪದ ಮನೆಯಲ್ಲಿಯೂ ಕಳ್ಳತನ ನಡೆದಿದೆ. ಮಯೂರಿ ಎಸ್ಟೇಟ್ ನಲ್ಲಿ ಐದಕ್ಕೂ ಹೆಚ್ಚು ಮನೆಗಳಲ್ಲಿ ಕಳ್ಳತನವಾಗಿದೆ. ಶಾರದ ಎನ್ನುವವರ ಮನೆಯಲ್ಲಿ 3 ಲಕ್ಷ ಬೆಳ್ಳಿ ಆಭರಣ, 25 ಸಾವಿರ ರೂಪಾಯಿ ನಗದು ಕಳುವಾಗಿದೆ. ಮತ್ತೊಂದು ಮನೆಯಲ್ಲಿ ಚಿನ್ನಾಭರಣ, ನಗದು ಕಳ್ಳತನವಾಗಿದೆ. ಒಬ್ಬನೇ ಕಳ್ಳನಿಂದ ಸರಣಿ ಕಳ್ಳತನ ನಡೆದಿದೆ. ಬಾಗಿಲಿನ ಬೀಗ ಒಡೆದು ಒಳನುಗ್ಗಿ ಕಳ್ಳತನ ಮಾಡಲಾಗಿದೆ. ಕಳ್ಳ ಅಡ್ಡಾಡುತ್ತಿರೋ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಏಕಾಏಕಿ ಕಳ್ಳತನ ಹೆಚ್ಚಿರೋದ್ರಿಂದ ಜನತೆ ಬೆಚ್ಚಿಬಿದ್ದಿದೆ. ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

