Breaking News

ಸ್ಯಾಂಟ್ರೋ ರವಿ ಬಿಜೆಪಿ ಸರ್ಕಾರದ ಮುತ್ತು ರತ್ನಗಳು – ಡಿ.ಕೆ.ಶಿವಕುಮಾರ್​​

ಬೆಳಗಾವಿ:  ಸ್ಯಾಂಟ್ರೋ ರವಿ ಇಂಥವರೆಲ್ಲಾ ಬಿಜೆಪಿ ಸರ್ಕಾರದ ಮುತ್ತು ರತ್ನಗಳು,  ತನಿಖೆ ಮುಗಿಯದೇ ಬಹುತೇಕ್​ ಕೇಸ್​ಗಳನ್ನು ಕ್ಲೋಸ್ ಮಾಡ್ತಿದ್ದಾರೆ ಎಂದು ಬೆಳಗಾವಿಯಲ್ಲಿ ಬಿಜೆಪಿ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​​ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿರೋದು ಬಿ ರಿಪೋರ್ಟ್​ ಸರ್ಕಾರ ಎಂದು ಡಿಕೆಶಿ ಗುಡುಗಿದ್ದಾರೆ. ಈ ಬಗ್ಗೆ ಮಾತನಾಡಿದ ಡಿಕೆಶಿ, ಡಿಸಿಸಿ ಬ್ಯಾಂಕ್​ನಲ್ಲಿ 600 ಕೋಟಿ ಸಾಲ ಪಡೆದವರನ್ನು ಸುಮ್ಮನೆ ಬಿಟ್ಟಿದ್ದಾರೆ, ನೋಟಿಸ್​ ಕೊಟ್ಟು ನಾಟಕ ಆಡುತ್ತಿದ್ದಾರೆ ಅಷ್ಟೇ,  600 ಕೋಟಿ ಸಾಲ ಕಟ್ಟದವರ ಮೇಲೆ ಯಾಕೆ ಕ್ರಮ ಜರುಗಿಸಿಲ್ಲ..? ಸಂಪುಟ ವಿಸ್ತರಣೆ ಮಾಡಲಿ ಎಲ್ಲವನ್ನೂ ಬಹಿರಂಗ ಮಾಡ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.

Share News

About BigTv News

Check Also

ಜೇವರ್ಗಿ: ಕ್ಷುಲ್ಲಕ ಕಾರಣಕ್ಕೆ ಗಲಾಟೆ; ಹಲವರಿಗೆ ಗಂಭೀರ ಗಾಯ

ಕಲಬುರಗಿ: ಜಿಲ್ಲೆಯ ಗಂವ್ಹಾರ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಬಣಗಳ ನಡುವೆ ನಡೆದ ಗಲಾಟೆಯಲ್ಲಿ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. …

Leave a Reply

Your email address will not be published. Required fields are marked *