Breaking News

ಪ್ರಧಾನಮಂತ್ರಿ  ಮೆಚ್ಚಿಸಲು ಹಾಗೂ ಭ್ರಷ್ಟಾಚಾರ ಮುಚ್ಚಿಡಲು ತೇಪೆ ಹಚ್ಚಿದ ಹು-ಧಾ ಮಹಾ ನಗರ ಪಾಲಿಕೆ

ಹುಬ್ಬಳ್ಳಿ : ಜನೆವರಿ ೧೨ ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು  ರಾಷ್ಟ್ರೀಯ ಯುವ ಜನೋತ್ಸವ ಕಾರ್ಯಕ್ರಮಕ್ಕೆ ಹುಬ್ಬಳ್ಳಿ-ಧಾರವಾಡಕ್ಕೆ ಆಗಮಿಸಲಿದ್ದು, ಅವರು ಸಂಚರಿಸುವ ಮಾರ್ಗಗಳನ್ನು ಹಾಗೂ ರ್ಯಾಲಿ ನಡೆಸುವ ಮಾರ್ಗಗಳಲ್ಲಿ  ಸ್ಮಾರ್ಟ್ ಸಿಟಿ ಮಾಡಿದ ಕಳಪೆ ಕಾಮಗಾರಿಯನ್ನು ಮುಚ್ಚಿಡಲು ತೆಪೆ ಹಚ್ಚುವ ಕಾರ್ಯವನ್ನು ರಾತ್ರೋ ರಾತ್ರಿ ಮಹಾನಗರ ಪಾಲಿಕೆಯ ಅಧಿಕಾರಿಗಳು ನಡೆಸುತ್ತಿದ್ದಾರೆ ಎಂದು ಹು-ಧಾ ಪಾಲಿಕೆ ವಿರೋಧ ಪಕ್ಷದ ನಾಯಕ ದೊರಾಜ್ ಮನ್ನೆಕುಂಟ್ಲಾ  ಆರೋಪಿಸಿದರು.

ನಗರದ ಪಾಲಿಕೆಯ ವಿರೋಧ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಅವಳಿನಗರದಲ್ಲಿ  ಸಾಕಷ್ಟು ಗುಂಡಿಗಳಿದ್ದು,  ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಹಾಗೂ ಪಾಲಿಕೆ ಅಧಿಕಾರಿಗಳಿಗೆ  ರಸ್ತೆಯಲ್ಲಿರುವ ತೆಗ್ಗು ಗುಂಡಿಗಳನ್ನು ಮುಚ್ಚುವಂತೆ ಮನವಿ ಮಾಡಲಾಗಿತ್ತು,  ಆದರೆ ಗುಂಡಿ ಮುಚ್ಚುವಂತಹ ಕಾರ್ಯಕ್ಕೆ ಮುಂದಾಗಿರಲಿಲ್ಲ. ಆದರೇ  ಈದೀಗ ಪ್ರಧಾನಮಂತ್ರಿ ಅವರನ್ನು ಮೆಚ್ಚಿಸಲು ಹಾಗೂ ಭ್ರಷ್ಟಾಚಾರ ಮುಚ್ಚಿಡಲು ಯತ್ನಿಸಿದ್ದಾರೆ ಎಂದು ದೂರಿದರು.

ಹುಧಾ ಅವಳಿನಗರದ ಎಲ್ಲ ವಾರ್ಡ್ ಗಳಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ  ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ವಾರ್ಡ್ ಗಳಲ್ಲಿ ಬಿಡುಗಡೆ ಮಾಡಿರುವ ಅಭಿವೃದ್ಧಿ ಕಾಮಗಾರಿಗಳ  ಅನುದಾನದಲ್ಲಿ ತಾರತಮ್ಯ ಮಾಡಲಾಗುತ್ತಿದ್ದು, ಸ್ಮಾರ್ಟ್ ಸಿಟಿ ಅಧಿಕಾರಿಗಳು ಬಿಜೆಪಿ ಪಕ್ಷದ ಸದಸ್ಯರ ವಾರ್ಡ್ ಗಳಲ್ಲಿ ಹೆಚ್ಚು ಅನುದಾನ ಮಂಜೂರು ಮಾಡಿ ಕಾಂಗ್ರೆಸ್ ಪಕ್ಷದ ಸದಸ್ಯರ ಹಾಗೂ ಇತರೆ ಪಕ್ಷದ ಸದಸ್ಯರ ವಾರ್ಡ್ ಗಳಿಗೆ ಕಡಿಮೆ ಅನುದಾನ ನೀಡಿ ತಾರತಮ್ಯ ಮಾಡಲಾಗಿದ್ದು, ಅಲ್ಲದೇ ಎಲ್ಲಾ ವಾರ್ಡ್ ಗಳಲ್ಲಿ ಮಾಡಿದ ಕಾಮಗಾರಿಗಳು ಸಂಪೂರ್ಣವಾಗಿ ಕಳಪೆ ಮಾಡಿದ್ದಾರೆ ಎಂದರು.

ಸ್ಮಾರ್ಟ್ ಸಿಟಿ ಯೋಜನೆಯೆಡಿ ಇಲ್ಲಿಯವರೆಗೂ ಕೈಗೊಂಡಿರುವ ಬಹುತೇಕ ಕಾಮಗಾರಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ತಪ್ಪಿತಸ್ಥ ಭ್ರಷ್ಟ ಅಧಿಕಾರಿಗಳನ್ನು ಗುರುತಿಸಿ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಈ ಸಮಸ್ಯೆ ಬಗೆಹರಿಯದಿದ್ದರೆ ಈ  ಕುರಿತಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ  ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಮನೆಗೆ ಘೇರಾವು ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಪ್ರಕಾಶ ಕ್ಯಾರಕಟ್ಟಿ, ಮೋಹನ್ ಹಿರೇಮನಿ, ಭದ್ರಾಪೂರ ಉಪಸ್ಥಿತರಿದ್ದರು.

Share News

About BigTv News

Check Also

ಜಮೀನು ವಿವಾದ: ಯುವಕನ ಕೊಲೆ, ನಾಲೆಗೆ ಶವ ಎಸೆದ ಆರೋಪ

ಮಂಡ್ಯ: ಜಮೀನು ವಿವಾದ ಹಾಗೂ ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ 30 ವರ್ಷದ ನವೀನ್ ಎಂಬ ಯುವಕನನ್ನು ಕೊಲೆ ಮಾಡಿ ಶವವನ್ನು …

Leave a Reply

Your email address will not be published. Required fields are marked *