ಹುಬ್ಬಳ್ಳಿ: ಜೆಡಿಎಸ್‌ಗೆ ಸಜ್ಜನರು ಸೇರುತ್ತಿದ್ದಾರೆ, ಈಗಾಗಲೇ ಬಿಡುಗಡೆ ಮಾಡಿರುವ 93 ಜನರ ಪಟ್ಟಿಯಲ್ಲಿ ಐದಾರು ಬದಲಾವಣೆ ಆಗಬಹುದು ಎಂದು ಹುಬ್ಬಳ್ಳಿಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಮ್ ಇಬ್ರಾಹಿಂ ಹೇಳಿಕೆ ನೀಡಿದರು. ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚರತ್ನ ರಥಯಾತ್ರೆ ಹಳ್ಳಿಹಳ್ಳಿ ತಲುಪುತ್ತಿದೆ, ಜನಸಾಗರ ಸೇರುತ್ತಿದೆ. ಹುಬ್ಬಳ್ಳಿ, ಬೆಳಗಾವಿ ಭಾಗದಲ್ಲಿ ಅನೇಕ ಪಕ್ಷಗಳ ಪ್ರಮುಖರು ಜೆಡಿಎಸ್ ಸೇರ್ಪಡೆ ಆಗುತ್ತಿದ್ದಾರೆ. ಹಿಂದೆ ನಮಗೆ ಕ್ಯಾಂಡಿಡೇಟ್ ಇಲ್ಲಾ ಅಂತಿದ್ರು, ಈಗ ಪ್ರತಿ ಕ್ಷೇತ್ರಕ್ಕೆ ಮೂರು ಜನರು ಟಿಕೆಟ್ ಕೇಳುತ್ತಿದ್ದಾರೆ. ನಮ್ಮ ಪಕ್ಷದ ಟಿಕೆಟ್‌ಗೆ ಹಣ ಕೊಡಬೇಕಿಲ್ಲ, ಎರಡು ನೂರು ರೂಪಾಯಿ ಖರ್ಚಲ್ಲಿ ಬೆಂಗಳೂರಿಗೆ ಬಂದರೆ ಜೆಡಿಎಸ್ ಸೀಟು ಸಿಗುತ್ತೆ ಎಂದರು.
ಕುಟುಂಬ ರಾಜಕಾರಣ ಮಾಡ್ತಾರೆ ಅಂತಾ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಸಹೋದರ, ಸಹೋದರಿ ಜೊತೆ ಹುಟ್ಟಿದ್ದೀರಾ ನೀವು ಜೋಶಿಯವರೇ?. ಬಿಜೆಪಿಯವರು ಮುಂಬೈನಲ್ಲಿ 13 ಜನರನ್ನು ಮಲಗಿಸಿ ಸಿಡಿ ಮಾಡಿದ್ದಾರೆ. ಅದರಲ್ಲಿ ಹನ್ನೆರಡು ಜನರು ಮಂತ್ರಿಯಾಗಿದ್ದಾರೆ, ಮಕ್ಕಳು ಕೇಳುತ್ತಿದ್ದಾರೆ ಈ ಸಿಡಿ ಅಂದರೇನು ಅಂತಾ?, ನಾಚಿಕೆ ಆಗಲ್ಲಾ ನಿಮಗೆ?, ನಿಮ್ಮ ತಮ್ಮನ ಸ್ಟೇಟ್ ಬ್ಯಾಂಕ್ ವ್ಯವಹಾರ ಮುಚ್ಚಿಕೊಂಡಿದ್ದೀರಿ. ನಮ್ಮ ತಂಟೆಗೆ ಬಂದರೆ ನಾವು ನಿಮ್ಮ ಮನೆಗೆ ಬರಬೇಕಾಗುತ್ತೆ ಹುಷಾರ್ ಎಂದು ಪ್ರಲ್ಹಾದ್ ಜೋಶಿಯವರಿಗೆ ಸಿಎಮ್ ಇಬ್ರಾಹಿಂ ದಮ್ಕಿ ಹಾಕಿದ್ದಾರೆ.
ನೀವು ಸಿಡಿ ಮಂತ್ರಿಗಳನ್ನು ಕಟ್ಟಿಕೊಂಡು ಸಿಎಮ್ ಆಗಿದ್ದೀರಿ, ರಾಜಿನಾಮೆ ಕೊಟ್ಟು ಸಜ್ಜನರ ಜೊತೆಗೆ ಬನ್ನಿ ಅಂತಾ ಸಿಎಮ್ ಬೊಮ್ಮಾಯಿಯವರನ್ನು ಜೆಡಿಎಸ್‌ಗೆ ಇಬ್ರಾಹಿಂ ಆಹ್ವಾನಿಸಿದ್ದಾರೆ. ದರಿದ್ರಗಳನ್ನು ಕರೆದುಕೊಂಡು ಮಂತ್ರಿ ಮಾಡಿದ್ರೆ ಕೊರೊನಾ ಹೋಗುತ್ತಾ?
ಜೋಶಿ ವಿರುದ್ದ ವಾಗ್ದಾಳಿ:
ಪ್ರಲ್ಲಾದ ಜೋಶಿ ತಮ್ಮಅಣ್ಣ ಭಾಗಿಯಾಗಿದ್ದ ಬ್ಯಾಂಕ್ ಹಗರಣವನ್ನು ಮುಚ್ಚಿಹಾಕಿದರು. ಶಾಸಕ ಜಗದೀಶ ಶೆಟ್ಟರ್ ಅಕ್ರಮ ಆಸ್ತಿ ಗಳಿಸಿದ್ದಾರೆ. ಇವರು ಡೂಪ್ಲಿಕೇಟ್ ಶೆಟ್ಟರ್. ಈದ್ಗಾದಲ್ಲಿ ಗಣೇಶ ಮೂರ್ತಿ ಕೂರಿಸಿದ್ದೇ ನಿಮ್ಮ ಸಾಧನೆಯೇ? ಮೇಲ್ವೇತುವೆ ನಿರ್ಮಿಸುವ ಅವಕಾಶವಿದ್ದರೂ ಬೈರಿದೇವರಕೊಪ್ಪದಲ್ಲಿ ದರ್ಗಾ ಉರುಳಿಸಿದಿರಿ. ಜೋಶಿಯವರೇ ಸಿದ್ದಾರೂಢ ಮಠಕ್ಕೆ ಹೋಗಿ ಬಸವಣ್ಣನವರ ವಚನ ಓದಿ, ಒಳ್ಳೆಯ ಬುದ್ಧಿ ಬರುತ್ತೆ , ನಮಗೆ ನವಗ್ರಹ ಅನ್ನುವ ನೀವು, ದರಿದ್ರ ಗ್ರಹಗಳು ಎಂದು ಪ್ರಲ್ಹಾದ್ ಜೋಶಿ ವಿರುದ್ಧ ವಾಗ್ದಾಳಿ ನಡೆಸಿದರು.