ಹುಬ್ಬಳ್ಳಿ ಮೂಲದ ವಿವೇಕ್ ಎಂಬಾತನು ಫೋನ್ ಮೂಲಕ ಪರಿಚಯವಾದ್ದು,16 ವಯಸ್ಸಿನ ಹುಡಗಿ ಜೊತೆ ಎರಡು ವರ್ಷದಿಂದ ಸಂಬಂಧ ಇಟ್ಟುಕೊಂಡಿದ್ದ, ಹಲವಾರು ಬಾರಿ ಮಂಗಳೂರಿಗೆ ಹೋಗಿ ಹುಡುಗಿಯನ್ನು ಬೇಟಿಯಾಗುತ್ತಿದ್ದ. ದಿನಾಂಕ 16-01-23 ರಂದು ಆರೋಪಿ ವಿವೇಕ್ ಅಪ್ರಾಪ್ತೆಯನ್ನು ಲಾಡ್ಜ್ ಒಂದಕ್ಕೆ ಕರೆದುಕೊಂಡು ಹೋಗಿ ಅಪ್ರಾಪ್ತೆ ಮೇಲೆ ಬಲವಂತವಾಗಿ ಅತ್ಯಾಚಾರ ಎಸಗಿದ್ದಾನೆ. ಇದರಿಂದ ಅಪ್ರಾಪ್ತೆ ಐದು ವಾರದ ಗರ್ಭಿಣಿ ಆಗಿದ್ದಾಳೆ.
ಆಪ್ರಾತ್ತೆ ಬಾಲಕಿಯ ಪಾಂಡ್ಡೆಶ್ವರ್ ಮಹಿಳಾ ಪೋಲಿಸ್ ಠಾಣೆ ಮಂಗಳೂರಿನಲ್ಲಿ ಪ್ರಕರಣ ದಾಖಲಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಂದು ಆರೋಪಿಯನ್ನು ಹುಬ್ಬಳ್ಳಿಯಿಂದ ಬಂಧನ ಮಾಡಿ ಮಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ.