Breaking News

ಹೊಸ ಮೈಲಿಗಲ್ಲು ಸ್ಥಾಪಿಸುವ ಸೂಚನೆ ನೀಡಿದ ಕಾಂತಾರ

ಬೆಂಗಳೂರು: ರಿಷಬ್ ಶೆಟ್ಟಿ ನಟನೆಯ ‘ಕಾಂತಾರ’ ಸಿನಿಮಾ ಸೂಪರ್ ಹಿಟ್ ಆಗಿದ್ದು ಆಯ್ತು. ಈ ಚಿತ್ರ ಈಗ ಹೊಸ ಮೈಲಿಗಲ್ಲು ಸ್ಥಾಪಿಸುವ ಸೂಚನೆಯನ್ನು ಸಹ ನೀಡಿದೆ. ಆಸ್ಕರ್​ ಅಂಗಳಕ್ಕೆ ಕಾಂತಾರ ಸಿನಿಮಾ ಕಾಲಿಟ್ಟಿದ್ದು,  ಕಾಂತಾರ 2023ನೇ ಸಾಲಿನ ಆಸ್ಕರ್​​​​​ ಪ್ರಶಸ್ತಿ ಸ್ಪರ್ಧೆಯಲ್ಲಿದೆ. ಎರಡು ವಿಭಾಗದಲ್ಲಿ ಕಾಂತಾರ ಸಿನಿಮಾಗೆ ನಾಮ ನಿರ್ದೇಶನವಾಗಿದೆ. ಈ ಬಗ್ಗೆ ಹೊಂಬಾಳೆ ಫಿಲಂಸ್​  ಟ್ವೀಟ್​ನಲ್ಲಿ ಸಂತಸ ಹಂಚಿಕೊಂಡಿದೆ. ಆಸ್ಕರ್ ಸದಸ್ಯರು​ ಮತ ಚಲಾಯಿಸಿದರೆ  ‘ಕಾಂತಾರ’ ಸಿನಿಮಾ ಮುಖ್ಯ ನಾಮಿನೇಷನ್​ಗೆ ಎಂಟ್ರಿ ಕೊಡಲಿದೆ. 301 ಸಿನಿಮಾಗಳು ಅರ್ಹತೆ ಸುತ್ತನ್ನು ಪಾಸ್ ಮಾಡಿವೆ.

ಹೊಂಬಾಳೆ ಫಿಲಂಸ್​  ಟ್ವೀಟ್​ನಲ್ಲಿ ನಮ್ಮನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇವೆ, ನಿಮ್ಮ ಜತೆ ಈ ವಿಚಾರವನ್ನು ಹಂಚಿಕೊಳ್ಳಲು ಸಂತಸ ಆಗುತ್ತಿದೆ ಎಂದು  ಹೇಳಿಕೊಂಡಿದ್ದಾರೆ.

Share News

About BigTv News

Check Also

ಗೃಹಪ್ರವೇಶವಾಗಿ ಒಂದೇ ತಿಂಗಳಿಗೆ ಹೊಸ ಮನೆಗೆ ಕನ್ನ! ದಂಪತಿಗೆ ಲಾಂಗ್‌, ಮಚ್ಚು ತೋರಿಸಿ ದರೋಡೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಪುರ ಗ್ರಾಮದಲ್ಲಿ ಗೃಹಪ್ರವೇಶವಾಗಿ ಒಂದು ತಿಂಗಳಷ್ಟೇ ಕಳೆದಿದ್ದ ನೂತನ ಮನೆಗೆ ನುಗ್ಗಿದ ಮೂವರು …

Leave a Reply

Your email address will not be published. Required fields are marked *