ಧಾರವಾಡ: ಹುಬ್ಬಳ್ಳಿ -ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಲು ಈಗಾಗಲೇ 10 ಜನ ನಿಷ್ಠಾವಂತ ಕಾಂಗ್ರೆಸ್ ಗರು ಅಜಿ೯ಸಲ್ಲಿಸಿದ್ದೆವೆ ನಮ್ಮಲ್ಲಿ ಯಾರಿಗಾದರೂ ಟಿಕೇಟ್ ಕೊಡಲಿ ಆದರೆ ನಮ್ಮನ್ನು ಬಿಟ್ಟು ಬೇರೆ ಯಾರಿಗಾದರೂ ಟಿಕೆಟ್ ಕೊಟ್ಟಿದ್ದೆ ಆದರೆ ನಾವು ಬಂಡಾಯದ ಭಾವುಟ ಹಾರಿಸಿ ನಮ್ಮಲ್ಲಿಯ 10 ಜನ ಆಕಾಂಕ್ಷೆಗಳಲ್ಲಿ ಒಬ್ಬರನ್ನು ಚುನಾವಣಾ ಕಣಕ್ಕೆ ಇಳಿಸಿ ಕಾಂಗ್ರೆಸ್ ಗೆ ತಕ್ಕಪಾಠ ಕಲಿಸುತ್ತೆವೆ ಎಂದು ಕಾಂಗ್ರೆಸ್ ಪಕ್ಷದ ವಕ್ತಾರರಾದ ಹಾಗೂ ಅಭ್ಯಥಿ೯ ಆಕಾಂಕ್ಷಿಯಾದ ಪಿ.ಎಚ್. ನೀರಲಕೇರಿ ತಿಳಿಸಿದರು.
10 ಆಕಾಂಕ್ಷಿಗಳ ಪರವಾಗಿ ಜಂಟಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ನಿಧಾ೯ರದಂತೆ ನಾವು 10 ಜನ ಆಕಾಂಕ್ಷೆಗಳು ಹಣ ತುಂಬಿದ್ದೆವೆ, ಯಾರು ಪಕ್ಷಕ್ಕೆ ನಿಷ್ಠರಗಾಗಿ ಪಕ್ಷದ ಏಳ್ಗೆಗಾಗಿ 4 ವಷ೯ದಿಂದ ಕೆಲಸ ಮಾಡಿದ್ದಾರೆ ಅವರನ್ನು ಬಿಟ್ಟು ವಲಸಿಗರಿಗೆ ಅಥವಾ ಇನ್ನಾರಿಗಾದರೂ ಟಿಕೆಟ್ ನೀಡಿದರೆ ನಾವು ತಕ್ಕಪಾಠ ಕಲಿಸುತ್ತೆವೆ ಇದನ್ನು ಕೆಪಿಸಿಸಿ ಅಧ್ಯಕ್ಷರು ಹಾಗೂ ವಿರೋಧ ಪಕ್ಷದ ನಾಯಕರು ಗಮನಿಸಬೇಕೆಂದರು. ನಾವು 10 ಜನ ಆಕಾಂ ಕ್ಷಿಗಳು ಮೂಲ ಕಾಂಗ್ರೆಸ್ ಪಕ್ಷದವರು ಪಕ್ಷದ ಸಂಘಟನೆಗಾಗಿ ತನು-ಮನ -ಧನದೊಂದಿಗೆ ಟೊಕ್ಕ ಕಟ್ಟಿಕೊಂಡು ಜೀವನಪರ್ಯತ ದುಡಿಯುತ್ತಿದ್ದೆವೆ ಎಂದ ಅವರು ಪಕ್ಷದ ನಾಯಕರು ನಿಷ್ಠರಿಗೆ ಬೆಲೆ ಕೊಡಬೇಕು ಇಲ್ಲದಿದ್ದರೆ ಪಶ್ಚಿಮ ಕ್ಷೇತ್ರದಲ್ಲಿ ನಮನ್ನು ಕಡೆಗನಿಸಿದರೆ ತಕ್ಕ ಬೆಲೆ ತೆರಬೇಕಾದಿತು ಎಂದರು.
ಪತ್ರಿಕಾಗೋಷ್ಟಿಯಲ್ಲಿ ಆಕಾಂಕ್ಷಿಗಳಾದ ದೀಪಕ್ ಚಿಂಚೂರೆ, ಬಸವರಾಜ್ ಮಲಕಾರಿ, ಮಯೂರ ಮೊರೆ, ಶ್ರಿಮತಿ ಕೀರ್ತಿ ಮೊರೆ, ಅಬ್ದುಲ್ ರಫೀಕ್ ಸಾವಂತನವರ, ಆರ್ ಕೆ ಪಾಟೀಲ್ , ಅಲ್ತಾಫ್ ಕಿತ್ತೂರ , ಘೋಡಕೆ, ನಾಗರಾಜ್ ಗೌರಿ, ಶರಣ ಪ್ಪ ಕೊಟಗಿ ಉಪಸ್ಥಿತರಿದ್ದರು.