Breaking News

ಮತದಾನ ನಮ್ಮೆಲ್ಲರ ಹಕ್ಕು,ಮತದಾನ ಮಾಡುವುದು ಪವಿತ್ರ ಕೆಲಸ

ಗದಗ ಬೆಟಗೇರಿ ನಗರದ ರೇಲ್ವೆ ನಿಲ್ದಾಣದಲ್ಲಿ ಬುಧವಾರದಂದು ವಿದ್ಯುನ್ಮಾನ ಮತ ಯಂತ್ರದ ಬಗ್ಗೆ ಪ್ರಯಾಣಿಕರು ಸೇರಿದಂತೆ ಸಾರ್ವಜನಿಕರಿಗೆ ತಿಳುವಳಿಕೆ ನೀಡುತ್ತಾ ಸಾರ್ವಜನಿಕರು ಕಡ್ಡಾಯವಾಗಿ ಮತದಾನ ಮಾಡುವಂತೆ ಪ್ರೇರೇಪಿಸಿ ಚುನಾವಣಾ ಸೆಕ್ಟರ್ ಅಧಿಕಾರಿ ಶಿವಕುಮಾರ್ ಕುರಿಯವರು ದೇಶದ ಪ್ರಜಾಪ್ರಭುತ್ವ ಬಲಿಷ್ಟಗೊಳಿಸಲು ಎಲ್ಲರೂ ಮತದಾನ ಮಾಡುವುದು ಅವಶ್ಯವಾಗಿದೆ ಎಂದು ತಿಳಿಸಿದರು. ಮತದಾನ ನಮ್ಮೆಲ್ಲರ ಹಕ್ಕು ಹಾಗೂ ಮತದಾನ ಮಾಡುವುದು ಪವಿತ್ರ ಕೆಲಸವಾಗಿದೆ. ಅರ್ಹ ಮತದಾರರು ಮತದಾನದಿಂದ ವಂಚಿತರಾಗದೇ ಮತ ಚಲಾಯಿಸಬೇಕು. ಇ.ವಿ.ಎಂ. ಹಾಗೂ ವಿ.ವಿ.ಪ್ಯಾಟ್ ಯಂತ್ರಗಳ ಕಾರ್ಯ, ಮತ ಚಲಾಯಿಸುವ ಪ್ರತಿ ಹಂತದಲ್ಲೂ ಸಾರ್ವಜನಿಕರು ಗಮನಿಸಬೇಕಾದ ಅಂಶ ,ಹಾಗೂ ಮತಚಲಾಯಿಸಿದ್ದರ ಬಗ್ಗೆ ಖಚಿತಪಡಿಸಿಕೊಳ್ಳುವ ಕುರಿತು ಸಾರ್ವಜನಿಕರಿಗೆ ವಿವರಿಸಿದರು. ಪ್ರಯಾಣಿಕರು ಸೇರಿದಂತೆ ಸಾರ್ವಜನಿಕರೂ ಸಹ ಆಸಕ್ತಿಯಿಂದ ವಿದ್ಯುನ್ಮಾನ ಮತ ಯಂತ್ರ ಮೂಲಕ ಮತ ಚಲಾಯಿಸುವ ಹಾಗೂ ಚಲಾಯಿಸಿದ ಮತ ನಿರ್ದಿಷ್ಟ ವ್ಯಕ್ತಿ , ಪಕ್ಷ , ಚಿಹ್ನೆಗೆ ದಾಖಲಾಗಿರುವ ಬಗ್ಗೆ ವಿ.ವಿ.ಪ್ಯಾಟ್ ಯಂತ್ರದ ಮೂಲಕ ಖಚಿತಪಡಿಸಿಕೊಳ್ಳುವುದು ಕಂಡು ಬಂದಿತು. ಬಿ.ಎಲ್.ಓ ಮೇಲ್ವಿಚಾರಕರಾದ ಚಿದಾನಂದ ಹಿರೇಮಠ , ಆರಾಧ್ಯಮಠ ಸೇರಿದಂತೆ ಇತರರು ಭಾಗಿಯಾಗಿದ್ದರು.

Share News

About admin

Check Also

ಡಿಸಿಸಿ ಅಧ್ಯಕ್ಷರ ಆಯ್ಕೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಎಚ್ಚರ! ತಪ್ಪು ನಿರ್ಧಾರ ಜಿಲ್ಲೆಯ ಕಾಂಗ್ರೆಸ್‌ಗೆ ಭಾರೀ ಹೊಡೆತ..?

ಫೋಟೋ ಪಾಲಿಟಿಕ್ಸ್‌ಗೆ ಮಣೆ ಬೇಡ, ಸಂಘಟನೆಯ ನಾಯಕರಿಗೆ ಮನ್ನಣೆ ಕೊಡಿ! ಡಿಸಿಸಿ ಆಯ್ಕೆ ಕಾಂಗ್ರೆಸ್‌ಗೆ ಅಗ್ನಿಪರೀಕ್ಷೆ… ಡಿಸಿಸಿ ಅಧ್ಯಕ್ಷ ಸ್ಥಾನ: …

Leave a Reply

Your email address will not be published. Required fields are marked *