ಹುಬ್ಬಳ್ಳಿ: ಆಯೋದ್ಯದಲ್ಲಿ ರಾಮ ಮಂದಿರ ಕಟ್ಟಲು ನಮ್ಮ ವಿರೋಧವಿಲ್ಲ. ಅದನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಇನ್ನೊಂದು ಧರ್ಮದ ವಿರುದ್ಧ ಎತ್ತಿಕಟ್ಟಲು ಅದನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು ಎಂಬುದೆ ನಮ್ಮ ವಿರೋಧವಾಗಿದೆ. ಪ್ರತಿ ಹಳ್ಳಿಯಲ್ಲಿ ರಾಮ ಹಾಗೂ ಆಂಜನೇಯ ಮಂದಿರಗಳಿವೆ. ನಾವು ಅವನ್ನು ಕಟ್ಟಿಲ್ಲವೇ ಆದರೆ ರಾಜಕೀರಣ ಮಾಡಬಾರದು ಎಂದರು. ಕೋಮುವಾದ ಮಾಡುವ ಯಾವುದೇ ಪಕ್ಷಗಳು ಜನರನ್ನು ಆಳಲು ಯೋಗ್ಯವಲ್ಲ. ಧರ್ಮ ಹಾಗೂ ಜಾತಿ ಹೆಸರಲ್ಲಿ ರಾಜಕೀಯ ಮಾಡಿದರೇ ಅದು ತಪ್ಪು ಎಂದು ತಿಳಿಸಿದರು.
ಸಮಾಜದಲ್ಲಿ ಹಿಂದೂ, ಮುಸ್ಲಿಮ್, ಕ್ರೈಸ್ತ ಸೇರಿದಂತೆ ಎಲ್ಲ ಧರ್ಮಗಳು ಸಮಾವಾಗಿವೆ. ಇವುಗಳ ಹೆಸರಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ. ನಾನು ಹಿಂದೂ ವಿರೋಧಿಯಲ್ಲಿ ಹಿಂದೂತ್ವದ ವಿರೋಧಿಯಾಗಿದ್ದೇನೆ ಎಂದರು.
೧೯೨೫ ರಿಂದ ೪೭ ರವೆಗೆ ಸ್ವಾತಂತ್ರ್ಯ ಹೋರಾಟದಲ್ಲಿ ಯಾವೊಬ್ಬ ಆರ್ ಎಸ್ ಎಸ್ ಹಾಗೂ ಹಿಂದೂ ಮಹಾಸಭಾಗಳು ಭಾಗವಹಿಸಿಲ್ಲ. ಆ ಸಮಯದಲ್ಲಿ ಸ್ವಾತಂತ್ರ್ಯ ಹೋರಾಟ ಗಂಭೀರ ಸ್ವರೂಪದಲ್ಲಿತ್ತು. ಆಗ ಆರ್ ಎಸ್ಎಸ್ ಸಂಸ್ಥಾಪಕರಾಗಲಿ, ಪದಾಧಿಕಾರಿಗಳಾಗಲಿ ಯಾರಾದರೂ ಅದರಲ್ಲಿ ಭಾಗಿಯಾಗಿದ್ದರೇ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಅವಹೇಳನ ಮಾಡಲೆಂದು ನಾಯಿ ಮರಿ ಎಂದು ಹೇಳಿಲ್ಲ. ರಾಜ್ಯದ ಹಿತದೃಷ್ಟಿಯಿಂದ ಪ್ರಧಾನಿ ಬಳಿ ಅನುದಾನ ಧೈರ್ಯವಾಗಿ ಕೇಳಿ ಎಂದು ಹಳ್ಳಿಯ ಭಾಷೆಯಲ್ಲಿ ಹಾಗೇ ಹೇಳಿದ್ದೇನೆ. ಹಾಗಾದರೆ ಬಿ.ಎಸ್. ಯಡಿಯೂರಪ್ಪ ಅವರಿಗೆ ರಾಜಾಹುಲಿ ಅನ್ನುತ್ತಾರೆ ನನಗೆ ಟಗರು ಮತ್ತು ಹೌದ ಹೂಲಿಯಾ ಅನ್ನುತ್ತಾರೆ ಅದನ್ನು ತಪ್ಪಾಗಿ ಅರ್ಥೈಸಿ ಕೊಂಡರೇ ಹೇಗೆ ಎಂದು ಪ್ರಶ್ನಿಸಿದರು.
ವಿಧಾನಸೌಧಕ್ಕೆ ಎಂಜಿನಿಯರ್ ವೊಬ್ಬರು ಅಲ್ಲಿಗೆ ಏಕೆ ಹಣ ತಂದಿದ್ದರು. ಸಿಎಂ ಅಥವಾ ಯಾವುದಾದರೂ ಮಂತ್ರಿಗೆ ಕೊಡಲು ಲಂಚ ನೀಡಲು ಹೋದರು ಹೋಗಿರಬಹುದು. ಆ ಬಗ್ಗೆ ಸಮಗ್ರ ತನಿಖೆ ನಡೆಸಲಿ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

