ಧಾರವಾಡ: ಗ್ರಾಮೀಣ ಕ್ಷೇತ್ರದ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟವಾಗಿದ್ದು, ಹಾಲಿ ಶಾಸಕ ಬಿಜೆಪಿಯ ಅಮೃತ ದೇಸಾಯಿ ವಿರುದ್ಧ ಒಂದಾಗಿದ್ದಾರೆ ಬಿಜೆಪಿ ಟಿಕೇಟ್ ಆಕಾಂಕ್ಷಿಗಳು.

ಮಾಜಿ ಶಾಸಕಿ ಸೀಮಾ ಮಸೂತಿ ಮನೆಯಲ್ಲಿ ಗುಪ್ತ ಸಭೆ ನಡೆದಿದ್ದು, ಸಭೆಯಲ್ಲಿ ನಾಲ್ವರು ಬಿಜೆಪಿ ಟಿಕೇಟ ಆಕಾಂಕ್ಷಿಗಳು ತಮ್ಮ ಒಗ್ಗಟ್ಟು ಪ್ರದರ್ಶನ ಮಾಡುವ ಮೂಲಕ ಸೀಮಾ ಮಸೂತಿಯವರಿಗೆ ಟಿಕೇಟ ನೀಡಲು ಪಕ್ಷದ ವರಿಷ್ಟರಿಗೆ ಒತ್ತಡ ಹೆರಲು ತೀರ್ಮಾನಿಸಿದ್ದಾರೆ.
ಕಳೆದ ಸಾರಿ, ಅಮೃತ ದೇಸಾಯಿ ಗೆಲುವಿಗೆ ಕಾರಣರಾಗಿದ್ದ ನಾಲ್ವರು ಮುಖಂಡರಾದ ತವನಪ್ಪ ಅಷ್ಟಗಿ, ಬಸವರಾಜ ಕೊರವರ, ಸವಿತಾ ಅಮರಶೆಟ್ಟಿ, ಹಾಲಿ ಶಾಸಕ ಅಮೃತ ದೇಸಾಯಿ ವಿರುದ್ಧ ಬಂಡಾಯ ಏಳಲು ಸಜ್ಜಾಗಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

