Breaking News

ಬಿಜೆಪಿ ಅಭಿನಂದನಾ ಸಮಾರಂಭದಲ್ಲಿ ಭಾಗಿಯಾದ ಕೇಂದ್ರ ಹಾಗೂ ರಾಜ್ಯ ಸಚಿವರು

ಹುಬ್ಬಳ್ಳಿ; ರಾಜ್ಯ ಪರಿಶಿಷ್ಟ ಸಮುದಾಯಗಳಿಗೆ ಮೀಸಲಾತಿ ಹೆಚ್ಚಿಸಿ ಮತ್ತು ಒಳ ಮೀಸಲಾತಿ ನೀಡಿರುವ ಹಿನ್ನೆಲೆಯಲ್ಲಿ ಬೊಮ್ಮಾಯಿ ನೇತೃತ್ವದ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುವ ಹಿನ್ನೆಲೆಯಲ್ಲಿ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿಂದು ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಯಿತು.

ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಆಯೋಜಿಸಲಾಗಿದ್ದ ಅಭಿನಂದನಾ ಕಾರ್ಯಕ್ರಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಿದ್ಯುಕ್ತವಾಗಿ ಚಾಲನೆ ನೀಡಿದರು.

ದೀಪ ಬೆಳಗಿಸಿದ ಬಳಿಕ ಹಲಗೆ ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ವೇದಿಕೆಯಲ್ಲಿ ಕೇಂದ್ರ ಸಚಿವರಾದ ನಾರಾಯಣಸ್ವಾಮಿ, ಸಚಿವ ಗೋವಿಂದ ಕಾರಜೋಳ, ಶಾಸಕ ಅರವಿಂದ ಬೆಲ್ಲದ, ಸಿ.ಎಂ ನಿಂಬಣ್ಣನವರ ಸೇರಿದಂತೆ ಇತರರು ಇದ್ದರು.

Share News

About BigTv News

Check Also

ಚಿಕನ್ ಪೀಸ್‌ಗಾಗಿ ಕಿರಿಕ್… ಮದ್ಯದ ನಶೆಯಲ್ಲಿ ಗೆಳೆಯನನ್ನೇ ಮುಗಿಸಿದ! ಒಂದು ತುಂಡಿನ ಜಗಳಕ್ಕೆ ರಕ್ತದೋಕುಳಿ!

ಚಿಕನ್ ಪೀಸ್‌ಗಾಗಿ ಗೆಳೆಯನ ಕಗ್ಗೊಲೆ! ಎಣ್ಣೆ ಏಟಿನಲ್ಲಿ ಎದೆಗೆ ಚಾಕು… ಕೊಲೆ ಮುಚ್ಚಲು ಕಟ್ಟುಕಥೆ ಕಟ್ಟಿದ ಆರೋಪಿ ಅರೆಸ್ಟ್! ಬೆಳಗಾವಿ: …

Leave a Reply

Your email address will not be published. Required fields are marked *