ಹುಬ್ಬಳ್ಳಿ: ಬಾಲಕನೋರ್ವ ರಜೆಕ್ಕೆಂದು ತನ್ನ ಅಜ್ಜಿಯ ಮನೆಗೆಬಂದು, ನಿನ್ನೆ ಸಂಜೆ ಕಾಣೆಯಾಗಿ ಇಂದು ತನ್ನ ಮನೆಯ ಕೂಗಳತೆಯ ಮುಳ್ಳು ಕಂಠಿಯಲ್ಲಿ ಶವವಾಗಿ ಪತ್ತೆಯಾದ ಘಟನೆ ಹುಬ್ಬಳಿಯಲ್ಲಿ ನಡೆದಿದೆ. ಮಿಲತ್ ನಗರದ ದೊಡ್ಡಮನಿ ಮೈದಾನದಲ್ಲಿ ಘಟನೆ ನಡೆದಿದ್ದು, ಶವವಾಗಿ ಪತ್ತೆಯಾಗಿರುವ ಬಾಲಕನ್ನು ಏಂಟು ವರ್ಷದ ನದೀಂ ಎಂದು ಗುರುತಿಸಲಾಗಿದೆ. ಹಣದಾಸೆ ತೋರಿಸಿ ದುಷ್ಕರ್ಮಿಗಳು ಬಾಲಕನ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಅನುಮಾನ ವ್ಯಕ್ತವಾಗಿದೆ.
ಮೃತ ನದೀಂ ಭೈರಿದೇವರಕೊಪ್ಪದ ನಿವಾಸಿಯಾಗಿದ್ದು, ಬೇಸಿಗೆ ರಜೆಕ್ಕೆಂದು ತನ್ನ ಅಜ್ಜಿಯ ಮನೆ ಇರುವ ದೊಡ್ಡ ಮನಿ ಮೈದಾನ ಪ್ರದೇಶಕ್ಕೆ ಬಂದಿದ್ದ. ದೊಡ್ಡ ಮನಿ ಮೈದಾನದಲ್ಲಿ ನದೀಂ ತಾತ ವ್ಯಾಚ್ ಮ್ಯಾನ ಆಗಿದ್ದು, ಹಲವಾರು ದಿನಗಳಿಂದಲೂ ತನ್ನ ಅಜ್ಜಿ ತಾತನ ಜೊತೆಯಲ್ಲೇ ನದೀಂ ವಾಸವಿದ್ದ ಎನ್ನಲಾಗಿದೆ. ಗುರುವಾರ ಮಧ್ಯಾಹ್ನದೊತ್ತಿಗೆ ಆಟವಾಡಲು ಮನೆಯಿಂದ ಹೋಗಿದ್ದ ನದೀಂ ರಾತ್ರಿಯಾದರೂ ಮನೆಗೆ ಬಂದಿರಲಿಲ್ಲ. ಹೀಗಾಗಿ ಬಾಲಕನ ಅಜ್ಜಿ ತಾತ ಎಲ್ಲ ಕಡೆ ಹುಡುಕಾಡಿದ್ದಾರೆ. ಆದರೆ ನದೀಂ ಬಗ್ಗೆ ಸುಳಿವು ಸಿಕ್ಕಿರಲಿಲ್ಲ. ಹೀಗಾಗಿ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ದೂರ ಸಹ ನೀಡಿದ್ದರು.
ಇನ್ನೂ ಬಾಲಕನ ಅಜ್ಜಿ-ತಾತನ ದೂರಿನ ಅನ್ವಯ ಪೊಲೀಸರು ಬಾಲಕನ ಶೋಧದಲ್ಲಿ ತೊಡಗಿದ್ದರು. ಆದರೆ ಇಂದು ಮಧ್ಯಾಹ್ನ ೧೨ ಗಂಟೆ ಸುಮಾರಿಗೆ ನದೀಂ ಅಜ್ಜಿ ಮನೆಯ ಕೂಗಳತೆಯಲ್ಲಿನ ಮುಳ್ಳು ಕಂಠಿಯಲ್ಲಿ ನದೀಂ ಶವ ಪತ್ತೆಯಾಗಿದೆ. ಬಾಲಕನ ಮೃತ ದೇಹದ ಮೇಲೆ ಕೆಲ ಗಾಯಗಳಾಗಿದ್ದು, ಮುಖಕ್ಕೆ ಕಲ್ಲಿನಿಂದ ಜಜ್ಜಲಾಗಿದೆ. ಬಟ್ಟೆಗಳನ್ನು ಸಹ ಬಿಚ್ಚಲಾಗಿದ್ದು, ಬಾಲಕನನ್ನು ಸಲಿಂಗಕಾಮಕ್ಕೆ ಬಳಸಿಕೊಂಡು ದುಷ್ಕರ್ಮಿಗಳು ,ಬಳಿಕ ಹತ್ಯೆ ಮಾಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಇನ್ನೂ ಗುರುವಾರ ಮೈದಾನದಲ್ಲಿ ಬಹಿರದಸೆಗೆ ಹೋದ ಸಾರ್ವಜನಿಕರು ಶವವನ್ನು ನೋಡಿ ಪೊಲೀಸರಿಗೆ ಮತ್ತು ಮನೆಯವರಿಗೆ ತಿಳಿಸಿದ್ದಾರೆ.
ಇನ್ನೂ ಬಾಲಕನ ಹತ್ಯೆ ಹಿಂದೆ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿವೆ. ಬಾಲಕನ ಸಾವಿಗೆ ಅಸಲಿ ಕಾರಣ ಏನು ಎಂಬುದರ ಬಗ್ಗೆ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ. ಸದ್ಯ ಪ್ರಕರಣ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಪೊಲೀಸರ ತನಿಖೆಯ ಬಳಿಕ ಬಾಲಕನ ಹತ್ಯೆಗೆ ನಿಕರ ಕಾರಣ ತಿಳಿದು ಬರಬೇಕಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





