Breaking News

ಬಿಜೆಪಿ ಸರ್ಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದೆ – ನಲಪಾಡ ಆಕ್ರೋಶ

ಹುಬ್ಬಳ್ಳಿ: ಬಿಜೆಪಿ ಸರ್ಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜನಪರವಾದ ಸರ್ಕಾರ ಬಂದೆ ಬರುತ್ತದೆ ಎಂದು ಯೂಥ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಹಮ್ಮದ್ ನಲಪಾಡ ಹೇಳಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2013 ರಿಂದ 2018 ರ ವರೆಗೆ ಕಾಂಗ್ರೆಸ್ ಉತ್ತಮ ಆಡಳಿತ ಮಾಡಿದೆ‌. ಈಗಿನ‌ ಸರ್ಕಾರ ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ಮುಳುಗಿದೆ. ಜನಪರವಾದ ಸರ್ಕಾರ 2023 ಕ್ಕೆ ಬಂದೆ ಬರುತ್ತದೆ ಎಂದರು.

ಪಕ್ಷಾಂತರ ಮಾಡುವವರೆಗೆ ಬಿ.ಕೆ.ಹರಿಪ್ರಸಾದ ಸರಿಯಾಗಿ ಹೇಳಿದ್ದಾರೆ. ನಾನೂ ಸಹ ಅದೇ ವೇದಿಕೆಯಲ್ಲಿ ಇದ್ದೆ. ಬಿ.ಕೆ.ಹರಿಪ್ರಸಾದ ವೈಶ್ಯರ ಬಗ್ಗೆ ತಪ್ಪು ಮಾತನಾಡಿಲ್ಲ, ಅವರು ಕ್ಷಮೆ ಕೇಳಿದ್ದು, ವೈಶ್ಯರಿಗೆ ಬೇಜಾರ ಆಗಿದ್ದಕ್ಕೆ. ಪಕ್ಷದ ಚಿಹ್ನೆ ಮೇಲೆ ಗೆದ್ದು, ಬೇರೆ ಕಡೆ ಹೋದ್ರೆ ಅವರ ನಡತೆಯನ್ನ ಸ್ಪಷ್ಟ ಪಡಿಸುತ್ತದೆ ಎಂದರು.

ಜನರನ್ನ ಮಾರಿಕೊಂಡವರು, ಜನರು ಮತ್ತೆ ಗೆಲ್ಲಿಸುತ್ತಾರೆನ್ನವುದನ್ನ ಅವರು ಅರಿತುಕೊಳ್ಳಬೇಕು. ಇನ್ನೊಂದು ಪಕ್ಷಕ್ಕೆ ದುಡ್ಡಿಗೆ ಮಾರಾಟ ಆದವರನ್ನ ಏನೂ ಅಂತ ಕರಿಯಬೇಕು ಎಂದು ನಲಪಾಡ ಹೇಳಿದರು.

Share News

About BigTv News

Check Also

ಮಂಡ್ಯ| ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ, ಕೊಲೆ: ಅಪರಾಧಿಗೆ ಜೀವಾವಧಿ ಶಿಕ್ಷೆ

ಪಾಂಡವಪುರದ ಪ್ರಕಾಶ ಬಿನ್‌ ಮುದ್ದೇಗೌಡ ಎಂಬಾತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಿದ್ದ ಪ್ರಕರಣದಲ್ಲಿ ನಗರದ 2ನೇ …

Leave a Reply

Your email address will not be published. Required fields are marked *