Breaking News

ವಿಧ್ವಂಸಕ ಕೃತ್ಯ ಎಸಗಲು ಭಯೋತ್ಪಾದಕರು ಮಾಡಿದ್ದ ಸಂಚು ಬಯಲು

ನವದೆಹಲಿ: ಪ್ರಧಾನಿ ಹತ್ಯೆ ಸೇರಿದಂತೆ ವಿಧ್ವಂಸಕ ಕೃತ್ಯ ಎಸಗಲು ಭಯೋತ್ಪಾದಕರು ಮಾಡಿದ್ದ ಸಂಚು ಬಯಲಾಗಿದೆ.  ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ದಿಲ್ಲಿಯಲ್ಲಿ ವಿಧ್ವಂಸಕ ಕೃತ್ಯ ಎಸಗಲು ಭಯೋತ್ಪಾದಕರು ಮಾಡಿದ್ದ ಸಂಚು ಬಯಲಾಗಿದೆ. ಇತ್ತೀಚೆಗೆ ದಿಲ್ಲಿ ಪೊಲೀಸರು ಇಬ್ಬರು ಶಂಕಿತ ಉಗ್ರರನ್ನು ಬಂಧನ ಮಾಡಿದ್ದರು. ಈ ಉಗ್ರರ ವಿಚಾರಣೆ ವೇಳೆ, ದಿಲ್ಲಿಯಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದು ಬಯಲಾಗಿದೆ. ಪೊಲೀಸರ ಬಲೆಗೆ ಬಿದ್ದಿರುವ ಇಬ್ಬರು ಶಂಕಿತ ಉಗ್ರರು ಭಾರತದಲ್ಲಿ ಇರುವ ಇನ್ನೂ ನಾಲ್ವರ ಜೊತೆ ನೇರ ಸಂಪರ್ಕದಲ್ಲಿ ಇದ್ದರು ಎಂದು ತಿಳಿದು ಬಂದಿದೆ. ಈ ಉಗ್ರ ತಂಡವು ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಹರ್ಕತ್ – ಉಲ್ – ಅನ್ಸರ್ ಹಾಗೂ ಹಿಜ್ಬುಲ್ ಮುಜಾಹಿದ್ದೀನ್ ಜೊತೆಗೆ ಸಂಪರ್ಕದಲ್ಲಿವೆ ಎಂಬ ಮಾಹಿತಿಯೂ ಲಭ್ಯವಾಗಿದೆ. ಕಳೆದ ಗುರುವಾರ ಈ ಶಂಕಿತ ಉಗ್ರರನ್ನು ಬಂಧಿಸಲಾಗಿದ್ದು, ಇವರು ಹರ್ಕತ್ – ಉಲ್ – ಮುಜಾಹಿದ್ದೀನ್ ಸಂಘಟನೆಯ ನಾಝೀರ್ ಭಟ್, ನಾಸೀರ್ ಖಾನ್ ಹಾಗೂ ನಝೀರ್ ಖಾನ್ ಎಂಬುವವರ ಜೊತೆ ನೇರ ಸಂಪರ್ಕದಲ್ಲಿ ಇದ್ದರು.

Share News

About BigTv News

Check Also

Featured Video Play Icon

ಯುವತಿ ಕೊಲೆಗೆ ಪ್ರೇಮ ಪ್ರಕರಣವೇ ಕಾರಣ: ಕಮೀಷನರ್ ರೇಣುಕಾ ಸುಕುಮಾರ್..!

ಹುಬ್ಬಳ್ಳಿ: ಬಿವ್ಹಿಬಿ ‌ಕಾಲೇಜು ಕ್ಯಾಂಪಸ್ ನಲ್ಲಿ ಯುವತಿ ಕೊಲೆ ಪ್ರಕರಣದ ಕಾರಣವನ್ನು ಹು-ಧಾ ಪೊಲೀಸ್ ಕಮೀಷನರ್ ರೇಣುಕಾ ‌ಸುಕುಮಾರ ಬಿಚ್ಚಿಟ್ಟಿದ್ದಾರೆ. …

Leave a Reply

Your email address will not be published. Required fields are marked *

You cannot copy content of this page