ಹುಬ್ಬಳ್ಳಿ
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಕುಂದಗೋಳ ಪಟ್ಟಣದಲ್ಲಿ ಅದ್ದೂರಿ ರೋಡ್ ಶೋ ನಡೆಸಿ ಮನೆಯೊಂದರ ಗೋಡೆಯಲ್ಲಿ ಬರೆದ ಕಮಲ ಚಿತ್ರಕ್ಕೆ ಬಣ್ಣ ಬಳೆದಿ ಚಾಲನೆ ನೀಡಿದರು.
ಕುಂದಗೋಳ ಪಟ್ಟಣದ ಬಸವರಾಜ ಹಂಚಿನಮನಿ ಅವರ ಮನೆ ಗೋಡೆಯ ಮೇಲೆ ಕಮಲ ಚಿತ್ರಕ್ಕೆ ಬಣ್ಣ ತುಂಬುವ ಮೂಲಕ ಗೋಡೆ ಬರಹಕ್ಕೆ ಚಾಲನೆ ನೀಡಿದರು.
ಕಮಲ ಚಿಹ್ನೆಗೆ ಕೇಸರಿ ಬಣ್ಣ ಬರೆದು ಚಾಲನೆ ನೀಡಿದರು. ಬಳಿಜ ಬಸವರಾಜ್ ಹಂಚಿನಮನಿ ಅವರ. ಮೊಮ್ಮಗಳು ತ್ರಿವೇಣಿ ಅಮಿತ್ ಶಾ ಗೆ ಮಾಲೆ ಹಾಕಿ ಸನ್ಮಾನಿಸಿದರು. ಬಳಿಕ ಹಾಕಿದ ಮಾಲೆಯನ್ನು ಬಾಲಕಿಗೆ ಹಾಕಿದರು. ಈ ಸಂದರ್ಭದಲ್ಲಿ ನಳೀನಕುಮಾರ ಕಟೀಲು, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಿಎಂ ಬಸವರಾಜ ಬೊಮ್ಮಾಯಿ, ಬಣ್ಣ ಬರೆಯುದಕ್ಕೆ ಸಾಥ್ ನೀಡಿದರು.