ಹುಬ್ಬಳ್ಳಿ: ಅಣ್ಣಿಗೇರಿ ಪಟ್ಟಣದಲ್ಲಿ ನಡೆದ ಹೋಳಿ ಹಬ್ಬದ ಸಂಭ್ರಮದಲ್ಲಿ ಮಹಿಳಾ ಪಿಎಸ್ಐ, ಉಮಾದೇವಿ ಅವರು ಹಲಗೆ ಸದ್ದಿಗೆ ಸಖತ್ ಹೆಜ್ಜೆ ಹಾಕಿದ್ದಾರೆ. ಪಟ್ಟಣದ ಕುರುಬರ ಓಣಿಯಲ್ಲಿ ನಡೆದ ಹೋಳಿ ಸಂಭ್ರಮದಲ್ಲಿ ಪಾಲ್ಗೊಂಡ ಪಿಎಸ್‌ಐ ಉಮಾದೇವಿ ಅವರು ಯುವಕರು ಬಾರಿಸುತ್ತಿದ್ದ
ಹಲಗೆ ಸದ್ದಿಗೆ ಸಖತ್ ಸ್ಟೆಪ್ ಹಾಕಿದ್ದಾರೆ. ಉಮಾದೇವಿ ಅವರು ಸ್ಟೆಪ್ ಹಾಕುತ್ತಿದ್ದಂತೆ ಅವರೊಂದಿಗೆ ಯುವಕರು ಸಹ ಹುಚ್ಚೆದ್ದು ಕುಣಿದು, ಸ್ಟೆಪ್ ಹಾಕಿ ಖುಷಿಪಟ್ಟಿದ್ದಾರೆ. ಇವರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಪರ ವಿರೋಧ ಚರ್ಚೆ ಹುಟ್ಟು ಹಾಕಿದೆ.