Breaking News

ಒಂದೇ ಕುಟುಂಬದ ಮೂರವರು ನೇಣಿಗೆ ಶರಣು

ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ತೊಂಡೂರು ಗ್ರಾಮದಲ್ಲಿ ವಾಸವಾಗಿದ್ದ ಒಂದು ಕುಟುಂಬ ಜೀವನಕ್ಕಾಗಿ ಸಾಲಮಾಡಿ ಸಾಲಗಾರ ಕಾಟ ತಡೆಯಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರತಿ ತಂದೆ – ತಾಯಿಯ ಮಹದಾಶೆ ಅಂದ್ರೆ ಅದು ಮಕ್ಕಳ ಭವಿಷ್ಯ ರೂಪಿಸುವದಾಗಿರುತ್ತದೆ‌‌. ಮಕ್ಕಳ ಜೀವನಕ್ಕಾಗಿ ಪಾಲಕರು ಇಡೀ ತಮ್ಮ ಜೀವನವನ್ನೆ ಮೂಡಿಪಾಗಿಡುತ್ತಾರೆ. ಹೀಗೆ ಮಕ್ಕಳ ಜೀವನಕ್ಕಾಗಿ ಸಾಲಮಾಡಿದ್ದ, ತೊಂಡೂರು ಗ್ರಾಮದ ಹನುಮಂತಗೌಡ ಪಾಟೀಲ್ ಎಂಬ ಒಂದೇ ಕುಟುಂಬಸ್ಥದ ಮೂವರು ಮೃತಪಟ್ಟಿದ್ದಾರೆ. ಮನೆ ನಿರ್ಮಾಣಕ್ಕಾಗಿ ,ಮಗಳ

ವಿದ್ಯಾಭ್ಯಾಸಕ್ಕಾಗಿ ಹಾಗೂ ಅವಳ ಮದುವೆಗಾಗಿ ಸುಮಾರು 25 ಲಕ್ಷಕ್ಕೂ ಹೆಚ್ಚು ಸಾಲ ಮಾಡಿದ್ದಾರೆ. ಸಾಲವನ್ನಾ ತೀರಿಸಲಾಗದೆ ಕಂಗಾಲಾಗಿ, ಕುಟುಂಬಸ್ಥರಾದ ತಂದೆ ಹನುಮಂತಗೌಡ ಪಾಟೀಲ (54) ತಾಯಿ ಲಲಿತಾ ಪಾಟೀಲ (50) ಮನೆಯಲ್ಲಿ ನೇಣಿಗೆ ಶರಣಾನಾಗಿದ್ದಾರೆ. ಈ ಹಿನ್ನಲೆ ತನ್ನಿಂದ ತಮ್ಮ ತಂದೆ ತಾಯಿ ಸಾವನ್ನಪ್ಪಿದರು ಎಂದು ಮಗಳು ನೇತ್ರಾ ಪಾಟೀಲ (22) ಸಹ ಅದೇ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನಲಾಗುತ್ತಿದೆ.
ಒಟ್ಟಿನಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟ ಘಟನೆ ಕಂಡು ತೊಂಡುರು ಗ್ರಾಮದ ಜನ್ರು ಹೈರಾಣಾಗಿದ್ದಾರೆ. ಇನ್ನು ಮೃತರ ಸಂಬಂಧಿಕರು ಸಾಲ ಮಾಡಿದ ಹಿನ್ನಲೆ ಈ ಪರಿವಾರ ಮೃತಪಟ್ಟಿದೆ ಎನ್ನಲಾಗುತ್ತಿದೆ‌. ಇತ್ತ ಸ್ಥಳಕ್ಕೆ ಸವಣೂರ ಪೊಲೀಸರು ಹಾಗೂ ಹಾವೇರಿ ಎಸ್ಪಿ ಶಿವಕುಮಾರ್ ಗುಣಾರೆ ಸ್ಥಳಕ್ಕೆ ದಾವಿಸಿ ಪರಿಶೀಲನೆ ನಡೆಸಿದರು. ಇನ್ನು ಒಂದೇ ಕುಟುಂಬದ ಸದಸ್ಯರು ಯಾಕೆ ದೀಡಿರನೇ ನೇಣಿಗೆ ಶರಣಾದರು ಅಂತಾ ಖಾಕಿ ಪಡೆ ತನಿಖೆ ನಡೆಸುತ್ತಿದೆ.‌..

Share News

About admin

Check Also

ಮರಳು ಮಾಫಿಯಾದಲ್ಲಿ ಲೋಕಾಯುಕ್ತರ ದಾಳಿ ಬಳಿಕ… ಕಾಲು ಕೆತ್ತು ಓಡಿ ಹೋದ ಹುಬ್ಬಳ್ಳಿ ‘ಆನೆ ಒಂಟೆ ’!

ಮರಳು ಮಾಫಿಯಾಗೆ ಲೋಕಾಯುಕ್ತ ಶಾಕ್! ಲಂಚದ ಜಾಲದಲ್ಲಿ ಸಿಕ್ಕಿದ್ದು ಕೆಳಹಂತದವರೇನಾ, ಇನ್ನೂ ದೊಡ್ಡವರ ಸರದಿ ಬಾಕಿಯಿದೆಯಾ..? ಹುಬ್ಬಳ್ಳಿ: ಮರಳು ದಂಧೆಯ …

Leave a Reply

Your email address will not be published. Required fields are marked *