ಹುಬ್ಬಳ್ಳಿ:ಗಂಡನೊಬ್ಬ ಕುಡಿದ ಮತ್ತಿನಲ್ಲಿ ಹೆಂಡತಿ ಹಾಗೂ ಮಕ್ಕಳ ಮೇಲೆ ಮಾರಕಾಸ್ತ್ರಗಳಿಂದ ಭೀಕರವಾಗಿ ಹಲ್ಲೆ ಮಾಡಿ ತಾನು ಕೂಡಾ ನೇಣಿಗೆ ಶರಣಾದ ಘಟನೆ ಹುಬ್ಬಳ್ಳಿ ತಾಲ್ಲೂಕಿನ ಸುಳ್ಳ ಗ್ರಾಮದಲ್ಲಿ ಬುಧವಾರ ಬೆಳಗಿನ ಜಾವ ನಡೆದಿದೆ.
ಸುಳ್ಳ ಗ್ರಾಮದ ಪಕ್ಕೀರಪ್ಪ ಮಾದರ ಎಂಬಾತ ಇಂದು ಬೆಳಗಿನ ನಾಲ್ಕು ಗಂಟೆಯ ಸುಮಾರಿಗೆ ಮನೆಯಲ್ಲಿನ ಟಿವಿ ಯಲ್ಲಿ ಸೌಂಡ್ ಜ್ಯಾಸ್ತಿ ಇಟ್ಟು ಮಾರಕಾಸ್ತ್ರದಿಂದ ಹೆಂಡತಿಯಾದ ಮುದಕವ್ವನ ಮೇಲೆ ಹಲ್ಲೆ ನಡೆಸಿದ ಪರಿಣಾಮ ಮುದಕವ್ವ ಜೋರಾಗಿ ಕಿರುಚಿದಾಗ ಮನೆಯಲ್ಲಿ ಮಲಗಿದ್ದ ಮೂರು ಮಕ್ಕಳು ಎದ್ದು ಅಳಲು ಶುರು ಮಾಡಿದೆ.
ಇದರಿಂದ ಅಂತಕಕ್ಕೇ ಇಡಾದ ಪಕ್ಕೀರಪ್ಪ ಮೂರು ಮಕ್ಕಳ ಮೇಲೆ ಕೂಡಾ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ ಪರಿಣಾಮ ಮೂರು ಮಕ್ಕಳು ಕೂಡಾ ಸ್ಥಿತಿ ಅರೆ ಪ್ರಜ್ಞಾಸ್ಥಿತಿಯಲ್ಲಿ ಬಿದ್ದಿವೆ.ಇತ್ತ ಮಕ್ಕಳು ಹಾಗೂ ಹೆಂಡತಿ ಅರೆ ಪ್ರಜ್ಞಾ ಸ್ಥಿತಿಯಲ್ಲಿ ಬಿಳುತ್ತಿದ್ದ ಹಾಗೆ ಪಕ್ಕೀರಪ್ಪ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬೆಳ್ಳಿಗ್ಗೆ 6 ಗಂಟೆಯ ಸುಮಾರಿಗೆ ಮನೆಯ ಅಕ್ಕಪಕ್ಕದವರು ಟಿವಿ ಸೌಂಡ್ ಕೇಳಿ ಬಾಗಿಲು ಬಡೆದಾಗ ಯಾರು ಬಾಗಿಯಲು ತೆರೆಯದ ಹಿನ್ನೆಲೆ ಬಾಗಿಲು ಮುರಿದಾಗ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೂರು ಮಕ್ಕಳು ಹಾಗೂ ಮುದಕವ್ವನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕಳುಹಿಸಿದ್ದು ನಾಲ್ಕು ಜನರ ಸ್ಥಿತಿ ಗಂಭೀರವಾಗಿದೆ.
ಸದ್ಯ ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೆ ಸ್ಥಳಕ್ಕೆ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

