Breaking News

ಆತ್ಮ ನಿರ್ಬರವಾಗಿ ಬದುಕಬೇಕು- ಲೂಸಿ ಸಾಲ್ದಾನಾ

ಧಾರವಾಡ: ಮಹಿಳೆ ಅಬಲೆ ಎಂದುಕೊಳ್ಳದೇ ಬಲಯುಳ್ಳ ಸಬಲೆಯೆಂದು ಆತ್ಮ ವಿಶ್ವಾಸದಿಂದ ಮುನ್ನುಗ್ಗಿ ಸ್ವಾವಲಂಬಿಯಾಗಿ ಜೀವನ ನಡೆಸಬೇಕೆಂದು ಲೂಸಿ ಸಾಲ್ದಾನಾ ಅಕ್ಷರದ ಅವ್ವ ಹೇಳಿದರು.

ನಗರದ ಕೆ.ಹೆಚ್.ಬಿ ಕಾಲೋನಿಯಲ್ಲಿ ಅಭ್ಯುದಯ ಫೌಂಡೇಶನ್, ಆಸ್ಥಾ ಮಹಿಳಾ ವೇದಿಕೆಯಿಂದ ಆಚರಿಸಲಾದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜೀವನದಲ್ಲಿ ಎಷ್ಟೇ ನೋವು ಕಷ್ಟಗಳು ಬಂದರು ಎದೆಗುಂದದೇ ಮಹಿಳೆಯರು ದಿಟ್ಟತನದಿಂದ ಮುಂದೆ ಸಾಗಬೇಕೆಂದು ತಿಳಿಸಿದರು.

ಅತಿಥಿಯಾಗಿ ಆಗಮಿಸಿದ ಉದ್ಯಮಿ ಸುಮಿತ್ರ ನವಲಗುಂದ ಮಾತನಾಡಿ, ನಾವು ಮಾಡಬಹುದಾದ ಕೆಲಸಗಳ ಸಾಧ್ಯತೆಗಳ ಅರಿವು ನಮಗಾಗ ಬೇಕಾದರೇ ನಾವು ಹೋರಾಟವೆಂಬ ಅಖಾಡದಲ್ಲಿ ಇಳಿಸಬೇಕು. ಮಹಿಳೆ ನಾಲ್ಕು ಗೋಡೆಯಿಂದ ಹೊರಗೆ ಬಂದು ಆತ್ಮ ನಿರ್ಬರವಾಗಿ ಬದುಕಬೇಕು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ.ನಯನಾ ಗಂಗಾಧರ, ಯಾವುದೇ ಸವಾಲು, ಸಮಸ್ಯೆ ಎದುರಿಸುವ ಆತ್ಮ ಸ್ಥೈರ್ಯವನ್ನು ಬೆಳೆಸಿಕೊಳ್ಳುವುದು ಈಗಿನ ಕಾಲದಲ್ಲಿ ಅತ್ಯವಶ್ಯಕ. ಮಹಿಳೆಯರು ಖುಣಾತ್ಮಕ ಚಿಂತನೆ ಹಿಂಜರಿಕೆ ಬಿಟ್ಟು ಸಕಾರಾತ್ಮಕ ಜೀವನವನ್ನು ರೂಪಿಸಿಕೊಳ್ಳಬೇಕು. ಯಾವುದೇ ಪರಿಸ್ಥಿತಿಯಲ್ಲಿಯೂ ಮಾನಸಿಕ ಸ್ಥಿರತೆಯನ್ನು ಕಾಪಾಡಿಕೊಳ್ಳುವ ಪ್ರಯತ್ನ ತಮ್ಮದಾಗಬೇಕೆಂದರು.

ಆಸ್ಥಾ ಮಹಿಳಾ ವೇದಿಕೆಯ ಕಾರ್ಯದರ್ಶಿ ಸಂಗೀತಾ ಗೋವಿಂದರಾಜು ಸ್ವಾಗತಿಸಿದರು. ಆಶಾ ಕರೋಗಲ್ ಅತಿಥಿ ಪರಿಚಯ ಮಾಡಿದರು. ಪೂರ್ಣಿಮಾ ಬೆಳವಣಿಕಿ ವಂದಣಾರ್ಪಣೆ ಮಾಡಿದರು. ರಮ್ಯಾ ಕಾರ್ಯಕ್ರಮದ ನಿರೂಪಣೆ ಮಾಡಿದರು.

ಈ ಸಂದರ್ಭದಲ್ಲಿ ಸವಿತಾ, ಲತಾ, ಜಮುನಾ, ಸೌಮ್ಯ, ಶೈಲಜ, ವಿಜಯಲಕ್ಷ್ಮಿ , ಜಯಲಲಿತಾ, ಮಾಲಾ, ಮಂಗಳ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Share News

About BigTv News

Check Also

40 ವರ್ಷಗಳ ಸಂಪ್ರದಾಯಕ್ಕೆ ಬ್ರೇಕ್..! ಡಿಸಿಸಿ ಅಧ್ಯಕ್ಷ ಸ್ಥಾನ ಕೈತಪ್ಪಿದ ಬೆನ್ನಲ್ಲೇ ಮುಸ್ಲಿಂ ಸಮುದಾಯದಲ್ಲಿ ಅಸಮಾಧಾನದ ಕಿಡಿ..!

BOYCOTT BOYCOTT DCC.. BOYCOTT DCC..! ಸದಾನಂದ ಡಂಗನವರ ವಿರುದ್ಧ ಅಸಮಾಧಾನ ಸ್ಫೋಟ..! ಮುಸ್ಲಿಂ ಸಮುದಾಯದ ಆಕ್ರೋಶಕ್ಕೆ ಕಾಂಗ್ರೆಸ್‌ನಲ್ಲಿ ಗೊಂದಲ..! …

Leave a Reply

Your email address will not be published. Required fields are marked *