Breaking News

ಧಾರವಾಡ

ಬೋಗಸ ಗ್ಯಾರಂಟಿ ಕಾರ್ಡಗಳ ಬಿಡುಗಡೆ- ಕಾಂಗ್ರೆಸ್ ವಿರುದ್ಧ ಸಿಎಂ ವ್ಯಂಗ್ಯ

ಹುಬ್ಬಳ್ಳಿ: ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಬೋಗಸ ಕಾರ್ಡಗಳ ಬಿಡುಗಡೆ ಸರಣಿ ಆರಂಭಿಸಿದೆ. ಈಗಾಗಲೇ ಮೂರನ್ನು ಬಿಟ್ಟಿದೆ ಈಗ ನಾಲ್ಕನೇಯ ಬೋಗಸ್ ಕಾರ್ಡ್ ಬಿಡುಗಡೆ ಮಾಡಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದರು. ನಗರದ ವಿಮಾನ ನಿಲ್ದಾಣದಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಸಿಎಂ, ಕಾಂಗ್ರೆಸ್ಸಿಗರು ತಮ್ಮ ಆಡಳಿತ ರಾಜ್ಯಗಳಲ್ಲಿ ಎಲ್ಲೆಲ್ಲಿ ಆಶ್ವಾಸನೆ ನೀಡಿದಂತೆ ಯೋಜನೆ ಅನುಷ್ಠಾನಗೊಳಿಸಿದ್ದಾರೆ ಎಂಬುವದರ ಬಗ್ಗೆ ಶೀಘ್ರವೇ ಪಟ್ಟಿ ಬಿಡುಗಡೆ ಮಾಡುತ್ತೇನೆ. ಅಧಿಕಾರದ ಹತಾಶೆಯಿಂದ ಆಗಲಾರದ ಬೋಗಸ …

Read More »

ಶ್ರೀ ಅಮ್ರತೇಶ್ವರ ಪೇಂಟರ್ಸ ಕಾರ್ಮಿಕರ ಬಳಗ ಸಂಘದ ಉದ್ಘಾಟನೆ

ನವಲಗುಂದ: ವಿಧಾನಸಭಾ ಕ್ಷೇತ್ರದ ಅಣ್ಣಿಗೇರಿ ಪಟ್ಟಣದ ಶ್ರೀ ಸಿದ್ದಲಿಂಗೇಶ್ವರ ದೇವಸ್ಥಾನದ ಬಯಲಿನಲ್ಲಿ ನೂತನವಾಗಿ ಶ್ರೀ ಅಮ್ರತೇಶ್ವರ ಪೇಂಟರ್ಸ ಕಾರ್ಮಿಕರ ಬಳಗ ಸಂಘದ ಉದ್ಘಾಟನಾ ಸಮಾರಂಭವನ್ನು ಮಾಜಿಶಾಸಕ, ಕಾಂಗ್ರೆಸ್ ಮುಖಂಡ ಎನ್ ಎಚ್ ಕೋನರಡ್ಡಿಯವರು ಶ್ರೀ ಶಿವಕುಮಾರ ಮಹಾಸ್ವಾಮಿಗಳು ಹಾಗೂ ಜನಾಬ ಸೈಯ್ಯದ ಸಜ್ಜಾದಹುಸೇನ ಖಾದ್ರಿ ಕಮಲಾಪೂರ ದರ್ಗಾ ಇವರುಗಳ ದಿವ್ಯ ಸಾನಿಧ್ಯದಲ್ಲಿ ಸಂಘದ ಉದ್ಘಾಟನೆಯನ್ನು ನೆರವೇರಿಸಿಸುವುದರ ಜೊತೆಗೆ ಸಂಘದ ನೂತನ ಸರ್ವಸದಸ್ಯರಯಗಳಿಗೆ ಪದಗ್ರಹ ಭೋದನೆ ಮಾಡಿ ನಂತರ ಮಾತನಾಡಿದ ಕೋನರಡ್ಡಿಯವರು, …

Read More »

ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತೇನೆ- ಲಿಂಬಿಕಾಯಿ

ಹುಬ್ಬಳ್ಳಿ: ನಗರದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ್ದು, ನಾನು ಯಾವುದೇ ಕರಾರು ಇಲ್ಲದೇ ಕಾಂಗ್ರೆಸ್ ಸೇರಿದ್ದೇನೆ. ರಾಜ್ಯದಲ್ಲಿ ಮೂರು ವರ್ಷದಿಂದ ಜನ ವಿರೋಧಿ ಸರ್ಕಾರ ಇದೆ. ನನಗೆ ಬಹಳ ನೋವಾಗಿದೆ ಈ ನಿಟ್ಟಿನಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದೇನೆ ಎಂದು ಮೋಹನ್ ಲಿಂಬಿಕಾಯಿ ಹೇಳಿದರು. 2008 ರಲ್ಲಿ ನಾನು ಪದವೀಧರ ಕ್ಷೇತ್ರದಿಂದ ಗೆದ್ದಿದ್ದೆ. ಭಾರತೀಯ ಜನತಾ ಪಾರ್ಟಿ ಮುಖಂಡರು ಎಲ್ಲರೂ ಸೇರಿ ನನ್ನ ಚುನಾವಣೆಗೆ ನಿಲ್ಲಿಸಿದ್ದರು. 2013 ರಲ್ಲಿ ಯಡಿಯೂರಪ್ಪ ಕೆಜೆಪಿ …

Read More »

ಸಿಎಂ ಬೊಮ್ಮಾಯಿ ವಿರುದ್ಧ ಸ್ಪರ್ಧಿಸಲು, ವಿನಯ್ ಕುಲಕರ್ಣಿಗೆ ಎಐಸಿಸಿ ಸಮ್ಮತಿ

ನವದೆಹಲಿ: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ವಿರುದ್ಧ ಸ್ಪರ್ಧಿಸಲು ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಎಐಸಿಸಿ ಚುನಾವಣಾ ಸಮಿತಿ ಸಭೆ ಒಪ್ಪಿಗೆ ಸೂಚಿಸಿದೆ. ನವದೆಹಲಿಯ ಎಐಸಿಸಿ ಕಚೇರಿಯಲ್ಲಿ ನಡೆದ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ವಿನಯ್ ಕುಲಕರ್ಣಿ, ಸಿಎಂ ಬಸವರಾಜ್ ಬೊಮ್ಮಾಯಿ ವಿರುದ್ಧ ಶಿಗ್ಗಾಂವಿ ಕ್ಷೇತ್ರದಿಂದ ಸ್ಪರ್ಧಿಸಲು ಗ್ರೀನ್ ಸಿಗ್ನಲ್ ನೀಡಲಾಗಿದೆ. ಇದೇ ವಿಚಾರವಾಗಿ ಹೈಕಮಾಂಡ್ ಜೊತೆ ಚರ್ಚಿಸಲು ವಿನಯ್ ಕುಲಕರ್ಣಿ ಇಂದು ದೆಹಲಿಗೆ ತೆರಳಿದ್ದರು

Read More »

ಬಿಜೆಪಿ ಸರ್ಕಾರದ ಆಯುಷ್ಯ ಮುಗಿತಾ ಬಂದಿದೆ-ಸಲೀಂ ಅಹಮ್ಮದ್

ಹುಬ್ಬಳ್ಳಿ: ಬಿಜೆಪಿ ಸರ್ಕಾರದಿಂದ ರಾಜ್ಯದ ಜನ ನೊಂದಿದ್ದಾರೆ, ಬೆಂದಿದ್ದಾರೆ. ಇದು ಲಂಚಾವತರಾದ ಸರ್ಕಾರ. ಈ ಸರ್ಕಾರದ ಆಯುಷ್ಯ ಮುಗಿತಾ ಬಂದಿದೆ. ಇನ್ನು 40 ದಿನ ಈ ಸರ್ಕಾರದ ಆಯುಷ್ಯ. ಇವತ್ತಿನ‌ ಮಾಹಿತಿ ಪ್ರಕಾರ ಬಿಜೆಪಿ ಗೆಲ್ಲೋದು 40 ರಿಂದ 45 ಸೀಟ್ ಎಂದು ಸಲೀಂ ಅಹಮ್ಮದ್ ಹೇಳಿದ್ದಾರೆ. ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ಮಾಡದಂತೆ ಸಲಹೆ ನೀಡಿರೊ ವಿಚಾರವಾಗಿ ಮಾತನಾಡಿದ್ದು, ರಾಹುಲ್ ಗಾಂಧಿ ಸಲಹೆ ನೀಡಿರೋದು ನನಗೆ ಗೊತ್ತಿಲ್ಲ. ಸಿದ್ದರಾಮಯ್ಯ ಕೋಲಾರದಲ್ಲಿ …

Read More »

ಡಿಮಾನ್ಸ್‌ನಲ್ಲಿ ಸಾವಿಗೀಡಾದ ವಿಚಾರಣಾಧೀನ ಕೈದಿ

ಧಾರವಾಡ: ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಇಂಗಳಗುಂದಿ ಗ್ರಾಮದ ವಿಚಾರಣಾಧೀನ ಕೈದಿ ವಸಂತ ತಂಬಾಕದ (40) ಎಂಬಾತ ಧಾರವಾಡದ ಡಿಮಾನ್ಸ್‌ನಲ್ಲಿ ಸಾವಿಗೀಡಾಗಿದ್ದಾನೆ. ಸುಮಾರು 17 ಕಳ್ಳತನ ಪ್ರಕರಣದಡಿ ವಸಂತನನ್ನು ಯಲ್ಲಾಪುರ ಠಾಣೆ ಪೊಲೀಸರು ಬಂಧಿಸಿ, ಹಳಿಯಾಳ ಕಾರಾಗೃಹದಲ್ಲಿಟ್ಟಿದ್ದರು. ಎಲ್ಲಾ ಪ್ರಕರಣಗಳಲ್ಲೂ ಜಾಮೀನು ಪಡೆದುಕೊಂಡಿದ್ದ ವಸಂತನನ್ನು ಪೊಲೀಸರು ಕೇವಲ ಒಂದು ಪ್ರಕರಣದಡಿ ಬಂಧಿಸಿದ್ದರು. ಮಾ.6 ರಂದು ಕೈದಿ ವಸಂತನನ್ನು ಪೊಲೀಸರು ಚಿಕಿತ್ಸೆಗೆಂದು ಧಾರವಾಡದ ಡಿಮಾನ್ಸ್ಗೆ ಕರೆದುಕೊಂಡು ಬಂದಿದ್ದರು. ಆದರೆ,ಇದೀಗ ವಸಂತ ಆಸ್ಪತ್ರೆಯಲ್ಲೇ …

Read More »

ಪ್ರೌಢಶಾಲೆಯ ಮಕ್ಕಳೊಂದಿಗೆ ನ್ಯಾಯಾಧೀಶೆ ಸಂವಾದ

ಧಾರವಾಡ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆಗಿರುವ ಹಿರಿಯ ಸಿವಿಲ್ ನ್ಯಾಯಾಧೀಶೆ ಸಿ.ಎಂ.ಪುಷ್ಪಲತ ಅವರು ಧಾರವಾಡದ ವಿವಿಧ ಪ್ರೌಢಶಾಲೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ, ಮಕ್ಕಳ ಕಲಿಕೆ, ಪರೀಕ್ಷೆ ಎದುರಿಸುವ ಆತ್ಮ ಸ್ಟೈರ್ಯ ಕುರಿತು ಮಕ್ಕಳೊಂದಿಗೆ ಸಂವಾದ ನಡೆಸಿದರು. ಪ್ರಸಕ್ತ ಸಾಲಿನ ಪಠ್ಯ ಬೋಧನೆ, ಪಠ್ಯ ಪೂರ್ಣಗೊಳಿಸಿರುವುದು, ಪರೀಕ್ಷೆಗೆ ಸಿದ್ಧಗೊಳಿಸಿರುವುದು ಮತ್ತು ಮಕ್ಕಳಿಗೆ ನೈತಿಕ ಶಿಕ್ಷಣ ಪಾಠ ಮಾಡಿರುವ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ಮಾಡಿ, ನ್ಯಾಯಾಧೀಶರು ತಿಳಿದುಕೊಂಡರು. ಪರೀಕ್ಷೆಯನ್ನು …

Read More »

ಐಐಟಿ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ

ಧಾರವಾಡ: ಉತ್ತಮ ಶಿಕ್ಷಣವು ಪ್ರತಿಯೊಬ್ಬರಿಗೆ ದೊರಕಬೇಕಿದೆ. ಉತ್ತಮ ಶಿಕ್ಷಣ ಸಂಸ್ಥೆ ಆರಂಭಿಸಿದಷ್ಟು ಉತ್ತಮ ಶಿಕ್ಷಣ ದೊರಕುವುದು ಸಾಧ್ಯವಾಗಲಿದೆ. ಆದ್ದರಿಂದ ಉತ್ತಮ ಶಿಕ್ಷಣ ಸಂಸ್ಥೆ ಸ್ಥಾಪನೆಗೆ ಸರಕಾರ ಆದ್ಯತೆ ನೀಡಿದೆ. ದೇಶದಲ್ಲಿ ಕಳೆದ 9 ವರ್ಷಗಳಿಂದ ಆಧುನೀಕರಣಕ್ಕೆ ಒತ್ತು ನೀಡಲಾಗಿದೆ. ಗ್ರಾಮೀಣ ರಸ್ತೆ ಮಾತ್ರವಲ್ಲದೆ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ, ರೈಲು ಮಾರ್ಗಗಳ ವಿಸ್ತರಣೆ ಹಾಗೂ ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗಿದೆ .ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು. ಇಲ್ಲಿನ ಚಿಕ್ಕಮಲ್ಲಿಗವಾಡದಲ್ಲಿ ನಿರ್ಮಾಣವಾಗಿರುವ ಭಾರತೀಯ …

Read More »

ಮೋದಿ ಕಟೌಟ್ ಗಾಗಿ ಮುಗ್ಗಿಬಿದ್ದ ಜನ

ಧಾರವಾಡ: ನಮ್ಮ ಜನರಿಗೆ ಮೋದಿಯವರ ಮೇಲಿನ ಅಭಿಮಾನವೋ ಅಥವಾ ಕಟೌಟ್ ಮೇಲಿನ ಪ್ರೀತಿಯೋ ಗೊತ್ತಿಲ್ಲ.ಯಾವುದೇ ಸಭೆ ಸಮಾರಂಭಕ್ಕೆ ಹೋದರೂ ಕಟೌಟ್ ಬ್ಯಾನರ್ ಗಳಿಗೆ ಮುಗಿ ಬಿಳುವುದು ಸರ್ವೇ ಸಾಮಾನ್ಯವಾಗಿದೆ. ಧಾರವಾಡದ ಐಐಟಿ ಮುಂದೆ ಜನರು ಮೋದಿ ಕಟೌಟ್ ಗೆ ಮುಗಿಬಿದ್ದಿದ್ದಾರೆ. ಧಾರವಾಡ ಐಐಟಿ ಬಳಿಯ ಮೋದಿ ಕಟೌಟ್ ತಂದಿರೋ ಬಿಜೆಪಿ ಕಾರ್ಯಕರ್ತರು ಕೆಳಗೆ ಇಳಿಸುತ್ತಿದ್ದಂತೆಯೇ ಜನರು ಮುಗಿಬಿದ್ದಿದ್ದಾರೆ. ಕಟೌಟ್ ನೋಡುತ್ತಿದ್ದಂತೆಯೇ ಜನರಿಂದ ಜನರಿಂದ ನೂಕುನುಗ್ಗಲಾಗಿದ್ದಾರೆ.ಇನ್ನೂ ಐಐಟಿ ಮುಂಭಾಗದ ಬೃಹತ್ ವೇದಿಕೆ …

Read More »

ಚಾಂಗದೇವರ ಜಾತ್ರೆಯಲ್ಲಿ ಕಾಂಗ್ರೆಸ್ ಮುಖಂಡ ವಿನೋದ ಅಸೂಟಿ

ನವಲಗುಂದ : ತಾಲೂಕಿನ ಯಮನೂರ ಗ್ರಾಮದ ಶ್ರೀ ಚಾಂಗದೇವ ಮಹಾರಾಜರ ಜಾತ್ರಾ ಮಹೋತ್ಸವ ಅಂಗವಾಗಿ ಗಂಧ ಹಾಗೂ ಉರುಸು ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ವಿನೋದ ಅಸೂಟಿ ಭಾಗಿಯಾಗಿದ್ದರು. ಗಂಧದ ದಿನವಾದ ಇಂದು ಬೆಣ್ಣೆ ಹಳ್ಳದ ಗಂಧಕ್ಕೆ ನೀರು ತೆಗೆದುಕೊಂಡು, ದರ್ಶನ ಪಡೆದುಕೊಂಡರು. ಈ ಸಂದರ್ಭದಲ್ಲಿ ಮಂಜುನಾಥ್‌ ಜಾಧವ್ ಮಾಜಿ ಅಧ್ಯಕ್ಷರು ಪುರಸಭೆ ನವಲಗುಂದ, ಹನಮಂತಪ್ಪ ಚಿಕ್ಕಣ್ಣವರ,ಅಪ್ಪಣ್ಣ ಚುಳಕಿ, ಮೌನೇಶ್ ರೇವಣ್ಣವರ, ಆಕಾಶ್ ಸೋಮನಗೌಡ್ರ, ಪ್ರಕಾಶ ಸಾರಾವರಿ, ಉಪಸ್ಥಿತರಿದ್ದರು.

Read More »

You cannot copy content of this page