Breaking News

ವಿದ್ಯುತ್ ತಂತಿ ತಗಲೀ ಎರಡು ಆಕಳುಗಳ ಸಾವು

ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಮದಲ ಮಟ್ಟಿ ಗ್ರಾಮದಲ್ಲಿ ದನದ ಕೊಟ್ಟಿಗೆಗೆ ವಿದ್ಯುತ್ ತಂತಿ ತಗಲೀ ಸುಟ್ಟು ಕರಕಲಾಗಿ ಎರಡು ಜರ್ಸಿ ಆಕಳು ಸಾವನ್ನಪ್ಪಿದ್ದಾವೆ. ಸುಮಾರು ಬೆಳಗ್ಗೆ 12 ಗಂಟೆಗೆ ಬರಮಪ್ಪ ಬುಜುಬಲಿ ತಬ್ಗೊಂಡ ಎಂಬುವವರ ದನದ ಕೊಟ್ಟಿಗೆಗೆ ವಿದ್ಯುತ್ ಕಂಬದಿಂದ ಕಿಡಿಹಾರಿ ಕೆಳಗಡೆ ಇದ್ದ ಕಬ್ಬಿಣ ರೌದಿಯ ಮುಖಾಂತರ ದನಕರಗಳು ಇರುವ ಶೆಡ್ಡಿಗೆ ಬೆಂಕಿ ಹತ್ತಿಕೊಂಡು ಉರಿದು ಒಳಗಡೆ ಇದ್ದ ಹತ್ತು-ಹನ್ನೆರಡು ಆಕಳು ಹಾಗೂ ಎಮ್ಮೆಗಳು ಇದ್ದವು ಮನೆಯವರಿಗೆ ಗೊತ್ತಾಗುವ ವೇಳೆಯಲ್ಲಿ ಹೊತ್ತಿಕೊಂಡು ಉರಿಯುತ್ತಿತ್ತು. ಸ್ಥಳೀಯರೆಲ್ಲರೂ ಓಡಿಬಂದು ಒಳಗಡೆ ಇದ್ದ ಎಲ್ಲ ಹಸುಗಳನ್ನು ಹೊರಗೆ ಹಗ್ಗವನ್ನು ಕೊಯ್ದು ತಂದರು. ಇನ್ನೂ ಎರಡು ಆಕಳುಗಳ ಹಗ್ಗಗಳನ್ನು ಬಿಚ್ಚುವಷ್ಟರಲ್ಲಿ ಬೆಂಕಿ ಜೋರಾಗಿ ಹತ್ತಿದ್ದರಿಂದ ಬಿಚ್ಚಲು ಆಗದೆ ಕಾರಣ ಬೆಂಕಿಯಲ್ಲಿ ಸಜೀವ ದಹನ ಹೊಂದಿದವು. ಮನೆಯವರ ಅಳಲು ಆಕ್ರಂದನ ಮುಗಿಲು ಮುಟ್ಟಿದ್ದು, ಸಾವು ಸುಮಾರು 4-5 ಲಕ್ಷದವರೆಗೂ ಅಪಾರ ಹಾನಿ ಉಂಟಾಗಿದೆ. ಜೊತೆಗೆ ಒಳಗಡೆ ಇದ್ದ ಕಟ್ಟಿಗೆ ಸಾಮಾನುಗಳು ಹಾಗೂ ಒಂದು ಮೋಟರ್ ಇನ್ನು ಅನೇಕ ವಸ್ತುಗಳು ಕೂಡ ಸುಟ್ಟು ಬೂದಿಯಾಗಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಯವರು ಬರುವ ಹೊತ್ತಿನ ವೇಳೆಗೆ ಎರಡು ಆಕಳುಗಳು ಸತ್ತಿದವು ಆಗಮಿಸಿದ ನಂತರ ಬೆಂಕಿ ಆರಿಸುವಲ್ಲಿ ಹರಸಾಹಸ ಪಟ್ಟು ಅಗ್ನಿಶಾಮಕ ದವರು ಯಶಸ್ವಿಯಾದರು.

Share News

About admin

Check Also

ಅವಳಿ ನಗರದಲ್ಲಿ ಗಾಂಜಾ ಪೆಡ್ಲರ್‌ಗಳ ಬೇಟೆ; 6 ಮಂದಿ ಅಂದರ್, 491 ಗ್ರಾಂ ಗಾಂಜಾ ಜಪ್ತಿ!

ಹುಬ್ಬಳ್ಳಿ–ಧಾರವಾಡದಲ್ಲಿ ಗಾಂಜಾ ಪೆಡ್ಲರ್‌ಗಳಿಗೆ ಖಾಕಿ ಸಿಂಹಸ್ವಪ್ನ; ಎರಡು ಕಡೆ ಏಕಕಾಲಕ್ಕೆ ಪೊಲೀಸ್ ಬೇಟೆ, 6 ಮಂದಿ ಅಂದರ್.. ಗಾಂಜಾ ದಂಧೆಗೆ …

Leave a Reply

Your email address will not be published. Required fields are marked *