ಕುಂದಗೋಳ : ಕೃಷಿ ಜಮೀನಿನ ಮೇಲೆ ಮಾಡಿದ
ಸಾಲವನ್ನು ಹೇಗೆ ತೀರಿಸಿವುದು ಎಂದು ಮನನೊಂದು
ತಂದೆ ಮಗ ಇಬ್ಬರೂ ಮರಕ್ಕೆ ನೇಣು ಬಿಗಿದುಕೊಂಡು
ಸಾವನ್ನಪ್ಪಿದ ಘಟನೆ ಕುಂದಗೋಳ ಪಟ್ಟಣದಲ್ಲಿ ಜ.26
ಗುರುವಾರದಂದು ನಡೆದಿದೆ. ಹೌದು ! ಕುಂದಗೋಳ
ಪಟ್ಟಣದ ಶಿವನಗೌಡ ನಿಂಗಪ್ಪ ಹೂಲಿಕಟ್ಟಿ (60)
ಹಾಗೂ ಅನಿಲ್ ಶಿವನಗೌಡ ಹೂಲಿಕಟ್ಟಿ (30)
ಎಂಬುವವರೇ ಮೃತ ದುರ್ದೈವಿಗಳು.
ಕುಂದಗೋಳ ಪಟ್ಟಣದ ನಿವಾಸಿಯಾದ ಮೃತರು ಕಳೆದ ಮೂರ್ನಾಲ್ಕು ವರ್ಷಗಳಿಂದ ತಂದೆ ಶಿವನಗೌಡ ಹಾಗೂ ಮಗ ಅನಿಲ್ ಹೆಸರಿನಲ್ಲಿರುವ ಜಮೀನಿನ ಮೇಲೆ ಕೃಷಿ ಚಟುವಟಿಕೆ ಕೈಗೊಳ್ಳಲು ಖಾಸಗಿ ಬ್ಯಾಂಕ್, ಸಹಕಾರಿ ಸಂಘ ಸೇರಿ 9 ಲಕ್ಷಕ್ಕೂ ಅಧಿಕ ಹಣ ಸಾಲ ಪಡೆದಿದ್ದರು.
ಕಳೆದ ಮೂರ್ನಾಲ್ಕು ವರ್ಷಗಳಿಂದ ಮಳೆ ಬೆಳೆ ಸರಿಯಾಗಿ ಬಾರದ ಹಿನ್ನೆಲೆಯಲ್ಲಿ ಮಾಡಿದ ಸಾಲವನ್ನು ಹೇಗೆ ತೀರಿಸುವುದು ಎಂದು ಗುರುವಾರ ಬೆಳಗ್ಗೆ ಕುಂದಗೋಳ ಪಟ್ಟಣದ ಹೊರ ವಲಯದ ಜಮೀನಿನಲ್ಲಿ ತಂದೆ ಮಗ ಇಬ್ಬರೂ ಮರಕ್ಕೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ.
ಈ ಕುರಿತು ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.