Breaking News

ಲೋಕೋಪಯೋಗಿ ಚರಂಡಿಗಳ ಕಾಮಗಾರಿ ಕಳಪೆ ಎಂದು ಜನರಿಂದ ಆರೋಪ

ಕುಂದಗೋಳ : ಲೋಕೋಪಯೋಗಿ ಇಲಾಖೆ ಕುಂದಗೋಳ ಪಟ್ಟಣದ ಅಭಿವೃದ್ಧಿಗಾಗಿ ನಿರ್ಮಿಸುತ್ತಿರುವ ಕಾಮಗಾರಿಯೊಂದು ಸದ್ಯ ಸ್ಥಳೀಯ ಜನರಿಗೆ ಬೇಸರ ತಂದಿದ್ದು, ಜನ ಕಾಮಗಾರಿ ಕಳಪೆ ಆಗಿದೆ ಎಂದು ಆರೋಪ ಮಾಡ್ತಾ ಇದ್ದಾರೆ.

ಕುಂದಗೋಳ ಪಟ್ಟಣದ ಮಾರ್ಕೇಟ್ ರಸ್ತೆಯ ಅಕ್ಕಪಕ್ಕದ ಚರಂಡಿಗಳು ವಾಸದ ಮನೆಗಳಿಗಿಂತ ಎತ್ತರವಾಗಿವೆ, ಇದಲ್ಲದೆ ರಸ್ತೆ ಎತ್ತರಕ್ಕೆ ತಕ್ಕಂತೆ ಚರಂಡಿ ನಿರ್ಮಿಸದೇ ಕಿರಿದಾಗಿ ಚರಂಡಿ ನಿರ್ಮಿಸಿರುವುದರಿಂದ ನಮ್ಮ ಮನೆಗಳಿಗೆ ಮಳೆಗಾಲದಲ್ಲಿ ನೀರು ನುಗ್ಗುವ ಭೀತಿ ಇದೆ ಎನ್ನುತ್ತಿದ್ದಾರೆ ಸ್ಥಳೀಯ ನಿವಾಸಿಗಳು.

ಇನ್ನೂ ರಸ್ತೆ ಅಗಲೀಕರಣ ಕಡಿಮೆಯಾದ ಕಾರಣ ಚರಂಡಿ ಹಾಗೂ ರಸ್ತೆ ಮದ್ಯದ ಖಾಲಿ ಜಾಗಕ್ಕೆ ಹಾಳಾದ ಕಟ್ಟಡದ ತ್ಯಾಜ್ಯ, ಎಲ್ಲೋ ವಿಲೇವಾರಿ ಮಾಡಬೇಕಾದ ಕಸ ಮಿಶ್ರಿತ ಕಲ್ಲನ್ನು ಹಾಕುತ್ತಿರುವುದು ಸಹ ಕಂಡು ಬಂದಿರುವದರಿಂದ ಜನ ರಸ್ತೆ ಹಾಗೂ ಚರಂಡಿ ಕಾಮಗಾರಿ ಅವೈಜ್ಞಾನಿಕವಾಗಿದೆ, ಈಗಾಗಲೇ ಚರಂಡಿ ನೀರು ಮುಂದೆ ಸಾಗದೆ ಒಂದೇಡೆ ನಿಂತು ದುರ್ನಾತ ಎಂದಿದೆ ಎನ್ನುತ್ತಿದ್ದಾರೆ.

ಒಟ್ಟಾರೆ ಲೋಕೋಪಯೋಗಿ ಅಧಿಕಾರಿಗಳೇ ನಿತ್ಯ ಕುಂದಗೋಳ ಪಟ್ಟಣ ಸೇರಿದಂತೆ ಹಲವಾರು ಹಳ್ಳಿಯ ಜನ ಓಡಾಡುವ ಕುಂದಗೋಳ ಪಟ್ಟಣದ ಮಾರ್ಕೇಟ್ ರಸ್ತೆ ಅವ್ಯವಸ್ಥೆಯ ಸರಿಪಡಿಸಿ ಎನ್ನುವುದೇ ಆಶಯ.

Share News

About BigTv News

Check Also

ಖಾಕಿ ಕಾರ್ಯಾಚರಣೆಗೆ ಜಯ..! PSI ಗುಡದರಿ ತನಿಖೆಯಲ್ಲಿ ಗಾಂಜಾ ಆರೋಪಿಗಳಿಗೆ 3 ವರ್ಷ ಜೈಲು ಶಿಕ್ಷೆ..!!

ಗಾಂಜಾ ಮಾರಾಟಗಾರರಿಗೆ ಕೋರ್ಟ್‌ನಿಂದ ಖಡಕ್ ಏಟು..! PSI ಗುಡದರಿ ತನಿಖೆಗೆ ನ್ಯಾಯಾಲಯದ ಮುದ್ರೆ..!! ಗಾಂಜಾ ದಂಧೆಕೋರರಿಗೆ ಜೈಲೇ ಗತಿ..! 3 …

Leave a Reply

Your email address will not be published. Required fields are marked *