Breaking News

ಅಮಿತ್ ಶಾ ಅವರು ನಮ್ಮ ಕರ್ನಾಟಕಕ್ಕೆ ಏನು ಕೊಟ್ಟಿದ್ದಾರೆ?ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಬಿಜೆಪಿ ವಿರುದ್ಧ ಧಾರವಾಡದಲ್ಲಿ ವಾಗ್ದಾಳಿ………….

ಧಾರವಾಡ: ಅಮಿತ್ ಶಾ ಅವರು ನಮ್ಮ ಕರ್ನಾಟಕಕ್ಕೆ ಏನು ಕೊಟ್ಟಿದ್ದಾರೆ? ಕರ್ನಾಟಕಕ್ಕೆ ಅವರು ಕೊಟ್ಟ ಕೊಡುಗೆ ಏನು? ಇಲ್ಲಿ ಬಂದು ಭಾಷಣ ಮಾಡ್ತಾರೆ. ಹುಬ್ಬಳ್ಳಿಗೆ ಅವರು ಎಷ್ಟು ಬಾರಿ ಬಂದಿದ್ದಾರೆ? ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದರು.

ಧಾರವಾಡ ನಗರದ ಮಹಾನಗರ ಪಾಲಿಕೆ ಆವರಣದಲ್ಲಿ ನಡೆದ ನೀರು ಸರಬರಾಜು ಧರಣಿ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ನಾವು ನರಹತ್ಯೆ ಮಾಡಿದ್ದೆವಾ? ನರಹತ್‌ ಮಾಡಿ ರಾಜಕೀಯ ಮಾಡಿದ್ದೀವಾ? ನಾವು ಪ್ರಾಮಾಣಿಕವಾಗಿ ಜನರ ನೋವಿಗೆ ಸ್ಪಂದಿಸಿ ಕೆಲಸ ಮಾಡಿದ್ದೇವೆ. ಅಮಾಯಕರನ್ನು ಬಲಿ ತೆಗೆದುಕೊಂಡು ನಾವು ರಾಜಕೀಯ ಮಾಡಿಲ್ಲ. ಅದು ಅವರು ಮಾಡ್ತಾ ಇದ್ದಾರೆ. ಮುಂದೆ ರಾಜ್ಯ ಹಾಗೂ ದೇಶದಲ್ಲಿ ಜನ ಏನು ತೀರ್ಮಾನ ಕೈಗೊಳ್ಳುತ್ತಾರೆ ಎಂದು ಕಾಯ್ದು ನೋಡಿ ಎಂದರು.

ಬಿಜೆಪಿಯವರ ದುರಹಂಕಾರ, ಪರ್ಮನೆಂಟ್ ಆಗಿ ನಾವೇ ಇರ್ತೀವಿ ಅಂತ ತಿಳ್ಕೊಂಡಿದ್ದಾರಾ? ಇದು ಕರ್ನಾಟಕ ಉತ್ತರ ಪ್ರದೇಶ ಆಗಲಿಕೆ ಸಾಧ್ಯವಿಲ್ಲ, ಗುಜರಾತ್ ಆಗಲಿಕ್ಕೆ ಸಾಧ್ಯವಿಲ್ಲ. ನಮ್ಮ ಮುಂದೆ ಯಾರು ಇಲ್ಲ ಎನ್ನುವ ದುರಹಂಕಾರದಲ್ಲಿದ್ದಾರೆ. ಅಮಿತ್ ಶಾ ಅವರು ನಮ್ಮ ಕರ್ನಾಟಕಕ್ಕೆ ಏನು ಕೊಟ್ಟಿದ್ದಾರೆ? ಕರ್ನಾಟಕಕ್ಕೆ ಅವರು ಕೊಟ್ಟ ಕೊಡುಗೆ ಏನು? ಎಂದು ಕಿಡಿಕಾರಿದರು.

ಅಮಿತ್ ಶಾ ಅವರು ಇಲ್ಲಿ ಬಂದು ಭಾಷಣ ಮಾಡ್ತಾರೆ. ಹುಬ್ಬಳ್ಳಿಗೆ ಎಷ್ಟು ಬಾರಿ ಬಂದಿದ್ದಾರೆ? ಇವರು ಮಹದಾಯಿ ಸಮಸ್ಯೆ ಬಗೆಹರಿಸಿದ್ದಾರಾ? ಚುನಾವಣೆಗೋಸ್ಕರ ಸುಮ್ಮನೆ ಕಾಟಾಚಾರಕ್ಕೆ ಘೋಷಣೆ ಮಾಡಿಕೊಂಡ್ರು. ಅಲ್ಲಿ ಗೋವಾ ಕಡೆಯಿಂದ ತಕರಾರು ತೆಗೆಸಿಕೊಂಡು ಕೂತಿದ್ದಾರೆ. ಚುನಾವಣೆಗೂ ಮುಂಚೆ ಇವರು ಕೆಲಸ ಮಾಡ್ತಾರಾ? ಮಾಡೋಕೆ ಸಾಧ್ಯನಾ? ಎಂದರು

ಇದು ಡಬಲ್ ಇಂಜಿನ್ ಸರ್ಕಾರ ಅಲ್ಲ, ತ್ರಿಪಲ್ ಇಂಜಿನ್ ಸರ್ಕಾರ, ಇವರು ಏನು ಮಾಡದೇ ಕೂತಿದ್ದಾರೆ. ಇವತ್ತು ಜನ ಸಾಯ್ತಾ ಇದ್ದಾರೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅದರ ಬಗ್ಗೆ ಧ್ವನಿ ಇಲ್ಲ ಇವರದ್ದು, ಅವರ ನೆರವಿಗೆ ಬರಲಿಲ್ಲ. ಇವರು ದೇಶ ಉಳಿಸ್ತಾರಾ? ಕರ್ನಾಟಕ ಉಳಿಸ್ತಾರಾ? ಅದಕ್ಕೆ ನಾವು ಜನರ ಹಾಗೂ ರೈತರ ಪರವಾಗಿ ಧ್ವನಿ ಎತ್ತಿದ್ದೇವೆ. ರೈತರ ಸಾಲ ಮನ್ನಾ ಮಾಡಿದ್ದೇವಲ್ಲ ಅದಕ್ಕೆ ನಮ್ಮ ಕುಟುಂಬವನ್ನು ಹೊರ ಹಾಕ್ತಾರಾ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು

Share News

About admin

Check Also

ಅವಳಿ ನಗರದಲ್ಲಿ ಗಾಂಜಾ ಪೆಡ್ಲರ್‌ಗಳ ಬೇಟೆ; 6 ಮಂದಿ ಅಂದರ್, 491 ಗ್ರಾಂ ಗಾಂಜಾ ಜಪ್ತಿ!

ಹುಬ್ಬಳ್ಳಿ–ಧಾರವಾಡದಲ್ಲಿ ಗಾಂಜಾ ಪೆಡ್ಲರ್‌ಗಳಿಗೆ ಖಾಕಿ ಸಿಂಹಸ್ವಪ್ನ; ಎರಡು ಕಡೆ ಏಕಕಾಲಕ್ಕೆ ಪೊಲೀಸ್ ಬೇಟೆ, 6 ಮಂದಿ ಅಂದರ್.. ಗಾಂಜಾ ದಂಧೆಗೆ …

Leave a Reply

Your email address will not be published. Required fields are marked *