ಹುಬ್ಬಳ್ಳಿ: ದೇವರ ದರ್ಶನಕ್ಕೆ ಹೋಗಿದ್ದ ಭಕ್ತರಿಗೆ ಬೆಂಕಿಯ ಅವಘಡದಿಂದ ಆಸ್ಪತ್ರೆ ಪಾಲಾದ ಘಟನೆ ಇಂದು ಬೆಳ್ಳಿಗ್ಗೆ ವಾಣಿಜ್ಯ ನಗರೀ ಹುಬ್ಬಳ್ಳಿಯಲ್ಲಿ ಜರುಗಿದೆ. ನಗರದ ವೀರಪೂರ ಓಣಿಯಲ್ಲಿನ ಗಣಪತಿ ದೇವಸ್ಥಾನದ ಕೊಠಡಿಯಲ್ಲಿ ಅನಿಲ ಸೋರಿಕೆಯಾಗಿದೆ. ಕೊಠಡಿಯ ಬಾಗಿಲು ತೆಗೆದ ಕೂಡಲೇ ದೇವರ ಮುಂದೆ ಇದ್ದ ದೀಪದ ಬೆಂಕಿ ಅನಿಲ ಸ್ಪರ್ಶವಾಗಿ ದೊಡ್ಡ ಮಟ್ಟದಲ್ಲಿ ಬೆಂಕಿ ಆವರಿಸಿದೆ.ಅಲ್ಲೇ ಇದ್ದ ಕೆಲ ಭಕ್ತರಿಗೆ ಹತ್ತಿದ್ದು, ಅದರಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಓರ್ವ ಮಗುವಿಗೆ ಬೆಂಕಿ ತಗುಲಿದೆ. ಇದರಿಂದ ಐಶ್ವರ್ಯ ಮತ್ತು ಮತ್ತೋರ್ವ ಮಹಿಳೆಯನ್ನು ಕೂಡಲೇ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಅತೀ ಹೆಚ್ಚಿನ ಮಟ್ಟದಲ್ಲಿ ಬೆಂಕಿ ತಗುಲಿದ ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಎಸ್ ಡಿ ಎಮ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಮಗುವಿನ ದೇಹವೂ ಸುಮಾರು ಶೇಕಡಾ 60 ಸುಟ್ಟಿದೆ ಎಂದು ಹೇಳಲಾಗಿದ್ದು, ಸಾವು-ಬದುಕಿನ ಹೋರಾಟ ನಡೆಸಿದೆ.
