ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಪಾರ್ಕಿಂಗ್ ಸಮಸ್ಯೆ ಸಾರ್ವಜನಿಕರನ್ನು ಹೈರಾಣ ಮಾಡಿದೆ. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ನಿಗದಿ ಮಾಡಿರುವ ದರ ಒಂದಾದರೇ ವಸೂಲಿ ಮಾಡುವ ದರವೇ ಬೇರೆಯಾಗಿದ್ದು, ಸಾರ್ವಜನಿಕರೇ ಸ್ಪೋಟಕ ಮಾಹಿತಿ ಹೊರಹಾಕಿದ್ದು, ಹಾಡಹಗಲೇ ನಡೆಯುತ್ತಿರುವ ಪಾರ್ಕಿಂಗ್ ಮಾಫಿಯಾ ಬಯಲಿಗೆ ಎಳೆದಿದ್ದಾರೆ.
ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಸಾಕಷ್ಟು ಕಟ್ಟಡಗಳು ಪಾರ್ಕಿಂಗ್ ಜಾಗೆಯನ್ನು ನುಂಗಿ ನೀರು ಕುಡಿದಿವೆ. ಅಲ್ಲದೇ ವಾಹನ ಸವಾರರಿಗೆ ರಸ್ತೆಯಲ್ಲಿ ಕರವನ್ನು ವಸೂಲಿ ಮಾಡಿ ಪಾರ್ಕಿಂಗ್ ಮಾಡಲು ಟೆಂಡರ್ ಕೂಡ ನೀಡಿದೆ.
ಆದರೆ ಮಹಾನಗರ ಪಾಲಿಕೆ ಒಂದು ದರ ನಿಗದಿ ಮಾಡಿದೆ. ಆದರೆ ಕೊಪ್ಪಿಕರ ರಸ್ತೆಯಲ್ಲಿರುವ ಪಾರ್ಕಿಂಗ್ ಹಣವನ್ನು ವಸೂಲಿ ಮಾಡುವವರು ಬೇರೆ ರೀತಿಯಲ್ಲಿ ಜನರನ್ನು ಸುಲಿಗೆ ಮಾಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನೂ ಪಾರ್ಕಿಂಗ್ ರಸೀದಿಯಲ್ಲಿ 20 ರೂಪಾಯಿ ಪ್ರಿಂಟ್ ಮಾಡಿದ್ದಾರೆ. ಆದರೆ ಅದನ್ನು ಕಟ್ ಮಾಡಿ ತಾವೇ 30 ರೂಪಾಯಿ ಬರೆದು ದ್ವಿಚಕ್ರ ಹಾಗೂ ಕಾ ಗಳಿಗೆ ಹೆಚ್ಚಿನ ಹಣವನ್ನು ವಸೂಲಿ ಮಾಡುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳ ಗಮನದಲ್ಲಿದ್ದರೂ ಕೂಡ ಯಾವುದೇ ಕ್ರಮಗಳನ್ನು ಜರುಗಿಸದೇ ಇರುವುದು ಸಾರ್ವಜನಿಕರ ಆಕ್ರೋಶ ಕಾರಣವಾಗಿದೆ.