ಕುಂದಗೋಳ ತಾಲೂಕಿನ ಬು.ತರ್ಲಘಟ್ಟ ಹಾಗೂ ಬು.ಕೊಪ್ಪ ಗ್ರಾಮದ ರಾಯಪ್ಪಗೌಡ್ರ ಮರೆಪ್ಪನವರ ಇವರ ಮನೆಯಿಂದ ಮಲ್ಲಪ್ಪ ದಾನಮ್ಮನವರ ಇವರ ಮನೆಯವರೆವೆಗೆ, ಹಾಗೂ ಶಿವಣ್ಣ ಅತ್ತಿಗೇರಿ ಗ್ಯಾರೇಜ್ ನಿಂದ ದರ್ಗಾವರೆಗೆ, ತರ್ಲಘಟ್ಟ ಗ್ರಾಮದ ಮುಖ್ಯ ರಸ್ತೆಯಿಂದ ಬಂದಗಿಸಾಬನವರ, ಮತ್ತು ಬಂದಿಗಿಸಾಬನವರ ಮನೆಯಿಂದ ಜಿಗಳೂರ ಇವರ ಮನೆಯವರೆಗೆ ಸಿ.ಸಿ ರಸ್ತೆ ನಿರ್ಮಾಣದ ಅಂದಾಜು ಮೊತ್ತ 61 ಲಕ್ಷರುಗಳ ಭೂಮಿಯ ಪೂಜೆಯನ್ನು ಕುಂದಗೋಳ ಮತಕ್ಷೇತ್ರದ ಶಾಸಕಿ ಕುಸುಮಾವತಿ ಚ ಶಿವಳ್ಳಿಯವರು ನೆರವೇರಿಸಿದರು.
ನಂತರ ಮಾತನಾಡಿದ ಅವರು ತಮ್ಮ ಗ್ರಾಮಕ್ಕೆ ಸಿ.ಸಿ ರಸ್ತೆ ನಿರ್ಮಾಣದ ಕಾಮಗಾರಿಯು ಅತಿ ಅವಶ್ಯವಾಗಿತ್ತು, ಗ್ರಾಮದ ನಿಮ್ಮೆಲ್ಲರ ಬೇಡಿಕೆಯಂತೆ 60 ಲಕ್ಷರುಗಳ ಮೊತ್ತದ ರಸ್ತೆ ನಿರ್ಮಣದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿದೆ, ಅದರ ಸದುಪಯೋಗವನ್ನು ತಾವೆಲ್ಲ ಪಡೆದುಕೊಳ್ಳಬೇಕು ತಮ್ಮ ಸಹಕಾರ ಹೀಗೆಯೇ ನಮ್ಮ ಮೇಲೆ ಇರಲಿ ಎಂದು ಅವರು ಹೇಳಿದರು.ಈ ಸಂದರ್ಭದಲ್ಲಿ ಗ್ರಾಪಂ ಅದ್ಯಕ್ಷರು ಶ್ರೀ ಶಂಭುಲಿಂಗಪ್ಪ ನಂದೇಪ್ಪನವರ ಗಂಗವ್ವ,ಕುಬಿಹಾಳ,ಮಕ್ತುಮಸಾಬ ಹುಲಗುರ,ಕುಂದುರಮಠ,ಮಲ್ಲವ್ವ ಕಾಳಿ, ಕಾಳಮ್ಮ ಬಡಿಗೇರ,ಪಾರ್ವತೆವ್ವ ಸಂಶಿ, ಶೇಖಪ್ಪ ಕುರಟ್ಟಿ,ಪರಮೇಶಪ್ಪ ಹಸಬಿ,ಇರವ್ವ ಮಾವನುರಮಠ, ಅನುಸೂಯಾ ಬಡಿಗೇರ,ಚಿದಾನಂದ ಕಮ್ಮಾರ,ಲಕ್ಸ್ಮವ್ವ ರೊಟ್ಟಿ,ಬಸವರಾಜ ಅಂಗಡಿ, ಇಂದ್ರಗೌಡ ಪಾಟೀಲ,ಸೇರಿದಂತೆ ಗುಳಪ್ಪ ವಿರಶೆಟ್ಟಿ, ಪ್ರಧಾನೇಪ್ಪ ಗೋರವರ,ರಾಜು ನಾವಿ,ಈರಣ್ಣ ವಿರಶೆಟ್ಟಿ,ದಾದಾಪಿರ ಮುಲ್ಲಾ ಫಕ್ಕೀರಪ್ಪ ಅಂಗಡಿ,ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
