ನವಲಗುಂದ: ವಿಧಾನಸಭಾ ಕ್ಷೇತ್ರದ ಅಣ್ಣಿಗೇರಿ ಪಟ್ಟಣದ ಶ್ರೀ ಸಿದ್ದಲಿಂಗೇಶ್ವರ ದೇವಸ್ಥಾನದ ಬಯಲಿನಲ್ಲಿ ನೂತನವಾಗಿ ಶ್ರೀ ಅಮ್ರತೇಶ್ವರ ಪೇಂಟರ್ಸ ಕಾರ್ಮಿಕರ ಬಳಗ ಸಂಘದ ಉದ್ಘಾಟನಾ ಸಮಾರಂಭವನ್ನು ಮಾಜಿಶಾಸಕ, ಕಾಂಗ್ರೆಸ್ ಮುಖಂಡ ಎನ್ ಎಚ್ ಕೋನರಡ್ಡಿಯವರು ಶ್ರೀ ಶಿವಕುಮಾರ ಮಹಾಸ್ವಾಮಿಗಳು ಹಾಗೂ ಜನಾಬ ಸೈಯ್ಯದ ಸಜ್ಜಾದಹುಸೇನ ಖಾದ್ರಿ ಕಮಲಾಪೂರ ದರ್ಗಾ ಇವರುಗಳ ದಿವ್ಯ ಸಾನಿಧ್ಯದಲ್ಲಿ ಸಂಘದ ಉದ್ಘಾಟನೆಯನ್ನು ನೆರವೇರಿಸಿಸುವುದರ ಜೊತೆಗೆ ಸಂಘದ ನೂತನ ಸರ್ವಸದಸ್ಯರಯಗಳಿಗೆ ಪದಗ್ರಹ ಭೋದನೆ ಮಾಡಿ ನಂತರ ಮಾತನಾಡಿದ ಕೋನರಡ್ಡಿಯವರು, ಎಲ್ಲರ ಮನೆಯನ್ನು ಸುಂದರವಾಗಿ ಬಣ್ಣಗಳ ಮೂಲಕ ಮನೆ ಮತ್ತು ಮನಗಳನ್ನು ಸಂತೋಷಗೊಳಿಸುವ ಕಾರ್ಯವನ್ನು ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು. ಈ ಸಂದರ್ಬದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಬ್ದುಲಖಾದರಸಾಬ ನಡಕಟ್ಟಿನ, ಶಿವಾನಂದ ಕರಿಗಾರ, ಷಣ್ಮುಖ ಗುರಿಕಾರ, ಶ್ರೀ ಶೈಲ ಮೂಲಿಮನಿ, ಪುರಸಭೆ ಸದಸ್ಯ ರೆಹಮಾನ ಹೊರಗಿನಮನಿ, ಸಿ.ಜಿ.ನಾವಳ್ಳಿ, ಹಿರಿಯರಾದ ಅರ್ಜುನ ಕಲಾಲ, ಶಶಿಧರ ಮುಖಂಡಮಠ, ಧನರಾಜ ನಾವಳ್ಳಿ, ಭಗವಂತ ಪುಟ್ಟಣ್ಣವರ, ಮಹಾಬಲೇಶ್ವರ ಹೆಬಸೂರ, ನಿಂಗಪ್ಪ ಬಡೇಪ್ಪನವರ, ರವಿರಾಜ ವೇರ್ಣೆಕರ, ಸಂಘದ ಅಧ್ಯಕ್ಷರಾದ ಎಸ್.ಎ ಖಾಜಿ ಹಾಗೂ ಸರ್ವಸದಸ್ಯರು ಈ ಸಭೆಯಲ್ಲಿ ಭಾಗವಹಿಸಿದ್ದರು.
