Breaking News

ಬಾರ್ ನಲ್ಲಿ ಹಣ ಕದ್ದವರು, ಕಂಬಿ ಹಿಂದೆ ಸೇರಿದರು, ನವನಗರ ಪೋಲಿಸರ ಕಾರ್ಯಚರಣೆ

ಹುಬ್ಬಳ್ಳಿ: ನಗರದ ಬೈರಿದೇವರಕೊಪ್ಪದಲ್ಲಿರುವ ಲೋಟಸ್ ಬಾರ್ ಶಟ್ಟರ್ಸ್ ಮುರಿದು ಸುಮಾರು 20000/- ರೂ ಚಿಲ್ಲರೆ ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದ ಆರೋಪಿಯನ್ನು ಬಂಧನ ಮಾಡುವಲ್ಲಿ ನವನಗರ ಪೊಲೀಸರು ಯಶಸ್ವಿ ಆಗಿದ್ದಾರೆ.

ರಾತ್ರಿ ವೇಳೆ ಶಟ್ಟರ್ಸ್ ಮುರಿದು ಬಾರಿನ ಕ್ಯಾಶ್ ಕೌಂಟರ್ ನಲ್ಲಿ ಇದ್ದ ಇಪ್ಪತ್ತು ಸಾವಿರ ರೂಪಾಯಿ ಚಿಲ್ಲರೆ ಹಣವನ್ನು ಕದ್ದು ಪರಾರಿ ಆಗಿದ್ದ, ಬಾರ್ ಮ್ಯಾನೇಜರ್ ದೂರಿನ ಮೇರೆಗೆ ನವನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಬಾಳು ಮಂಟುರ್ ಹಾಗೂ ಅವರ ಸಿಬ್ಬಂದಿಗಳು ತನಿಖೆ ನಡೆಸಿ ಹಸನ್ ತಂದೆ ಕಾಸೀಮಸಾಬ ಬೇಗ ಅನ್ನೋ ಆರೋಪಿಯನ್ನು ಪತ್ತೆ ಹಚ್ಚಿ ಆರೋಪಿಯಿಂದ ಏಳು ಸಾವಿರ ಚಿಲ್ಲರೆ ನಗದು ವಶಪಡಿಸಿಕೊಂಡು ಆರೋಪಿಯನ್ನು ಜೈಲಿಗೆ ಅಟ್ಟಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ನವನಗರ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಬಿ.ಎಸ್. ಮಂಟೂರ ಅವರ ನೇತೃತ್ವದಲ್ಲಿ, ಎ.ಎಸ್.ಐ ಶ್ರೀ ಬಿ.ಕೆ ನೀರಲಗಿ ಮತ್ತು ಜಿ.ಟಿ ಕಂಗಾರ, ಸಿಬ್ಬಂದಿ ಜನರಾದ ಪ್ರದೀಪ್.ಎಸ್. ಕುಂದಗೋಳ, ಬಿ.ಪಿ ಧುಮಾಳ, ಎಸ್.ಎಂ ದಿಡ್ಡಿ,, ಪಿ.ಎಸ್ ಚಲವಾದಿ, ಸಿ.ವೈ ಬಕ್ಕಸದ ಹಾಗೂ ಎಂ.ಎಂ ತಳಗೇರಿ ಅವರ ಕಾರ್ಯ ವೈಖರಿಯನ್ನು ಹುಬ್ಬಳ್ಳಿ ಧಾರವಾಡ ಪೋಲಿಸ್ ಆಯುಕ್ತರಾದ ರಮಣ್ ಗುಪ್ತಾ ಅವರು ಶ್ಲಾಘಿಸಿ ಬಹುಮಾನ ಘೋಷಿಸಿದ್ದಾರೆ.

Share News

About Shaikh BigTv

Check Also

ಬಾಗಲೂರು: ವ್ಯಾಪಾರಿಯ ಕೊಂದು ಕಾರಿನಲ್ಲಿ ಶವವಿಟ್ಟ ದುರುಳರು

ಬೆಂಗಳೂರು: ಹಣಕಾಸು ಹಾಗೂ ವೈಯಕ್ತಿಕ ವಿಚಾರಕ್ಕೆ ಗುಜರಿ ವ್ಯಾಪಾರಿಯನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಬಾಗಲೂರು ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. …

Leave a Reply

Your email address will not be published. Required fields are marked *