Breaking News

ಅಪಾರ್ಟ್ಮೆಂಟ್‌ನಲ್ಲಿ ಚಿನ್ನ ದೋಚಿಕೊಂಡು ಪರಾರಿಯಾಗಿದ್ದ ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ.

ಹುಬ್ಬಳ್ಳಿ: ದಸರಾ ಹಬ್ಬದಲ್ಲಿ
ಅಪಾರ್ಟ್ಮೆಂಟ್‌ನಲ್ಲಿ ಚಿನ್ನ ದೋಚಿಕೊಂಡು ಪರಾರಿಯಾಗಿದ್ದ ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ.

ಹುಬ್ಬಳ್ಳಿಯ ವಿದ್ಯಾನಗರ ಬಳಿಯ ಶಿರೂರ ಪಾರ್ಕ್‌ನ ಅಪಾರ್ಟ್ಮೆಂಟ್‌ನಲ್ಲಿ
ಪ್ರಿಯಾಂಕಾ ವಿಜಯ ಎಂಬುವರ ಮನೆಯಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿ ಪರಾರಿಯಾಗಿದ್ದರು.
ಪೊಲೀಸರು ಕಾರ್ಯಾಚರಣೆ ನಡೆಸಿ, ಹುಬ್ಬಳ್ಳಿ ಶೆಟ್ಟರ ಲೇಔಟ್ ಅಡ್ಡ ಹತ್ತಿರ ಇಬ್ಬರು ಆರೋಪಿಗಳನ್ನು ಬಂಧಿಸಿ 8,32,700 ಮೌಲ್ಯದ ಬಂಗಾರ, ಬೆಳ್ಳಿ ಆಭರಣಗಳು ಮತ್ತು ಮೊಬೈಲ್ ಫೋನಗಳು ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಒಂದು ಶಿಯೋ ಬೈಕ್ ಜಪ್ತಿಗೈದಿದ್ದಾರೆ. ಆರೋಪಿತರಿಗೆ ನ್ಯಾಯಾಲಯಕ್ಕೆ ಹಾಜರಪಡಿಸಿದ್ದಾರೆ.
ಆರೋಪಿತರ ಪತ್ತೆ ಕಾರ್ಯ ನಿರ್ವಹಿಸಿ ತನಿಖಾ ಕಾರ್ಯದಲ್ಲಿ ಶ್ರಮವಹಿಸಿದ ವಿದ್ಯಾನಗರ ಪೊಲೀಸ ಠಾಣೆಯ ಅಧಿಕಾರಿ, ಸಿಬ್ಬಂದಿಯವರಿಗೆ ಹುಬ್ಬಳ್ಳಿ ಧಾರವಾಡ ಪೊಲೀಸ ಆಯುಕ್ತರು ಶ್ಲಾಘಿಸಿದರು.

Share News

About admin

Check Also

ಮರಳು ಮಾಫಿಯಾದಲ್ಲಿ ಲೋಕಾಯುಕ್ತರ ದಾಳಿ ಬಳಿಕ… ಕಾಲು ಕೆತ್ತು ಓಡಿ ಹೋದ ಹುಬ್ಬಳ್ಳಿ ‘ಆನೆ ಒಂಟೆ ’!

ಮರಳು ಮಾಫಿಯಾಗೆ ಲೋಕಾಯುಕ್ತ ಶಾಕ್! ಲಂಚದ ಜಾಲದಲ್ಲಿ ಸಿಕ್ಕಿದ್ದು ಕೆಳಹಂತದವರೇನಾ, ಇನ್ನೂ ದೊಡ್ಡವರ ಸರದಿ ಬಾಕಿಯಿದೆಯಾ..? ಹುಬ್ಬಳ್ಳಿ: ಮರಳು ದಂಧೆಯ …

Leave a Reply

Your email address will not be published. Required fields are marked *