Breaking News

ನನ್ನ ಕೆಲಸ ನೋಡಿ ಮತ ನೀಡಿ ಸಂತೋಷ ಲಾಡ್

ಕಲಘಟಗಿ: ಮತಕ್ಷೇತ್ರದಲ್ಲಿ ಸ್ವಂತ ನೂರಾರು ಕೋಟಿ ಖರ್ಚು ಮಾಡಿ ಅನೇಕ ಅಭಿವೃದ್ಧಿ ಕೆಲಸಮಾಡಿದ್ದೇನೆ. ನನ್ನ ಕೆಲಸ ನೋಡಿ ಮತ ನೀಡಿ ಸಂತೋಷ ಲಾಡ್.

ಕಲಘಟಗಿ ಮತಕ್ಷೇತ್ರದಲ್ಲಿ ಸ್ವಂತ ನೂರಾರು ಕೋಟಿ ಖರ್ಚು ಮಾಡಿ ಅನೇಕ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಿದ್ದೇನೆ. ವಿಶೇಷವಾಗಿ ಕರೋನ ಸಂದರ್ಭದಲ್ಲಿ 350 ಟನ್ ಅಕ್ಕಿಯನ್ನು ಪ್ರತಿ ಮನೆ ಮನೆಗೆ ನೀಡಿದ್ದೇನೆ. ಅಳ್ಳಾವರ ಭಾಗದಲ್ಲಿ ಆಹಾರದ ಕಿಟ್ಟುಗಳನ್ನು ಕೊಡುವ ಸಂದರ್ಭದಲ್ಲಿ ನಮ್ಮ ಮೇಲೆ ಕೇಸು ದಾಖಲು ಮಾಡಿದರು, ಲೆಕ್ಕಿಸದೇ ಕೂಡ ಜಾಮೀನು ಪಡೆದು ಜನರ ಸೇವೆಗೆ ಮುಂದಾಗಿದ್ದೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ಸಂತೋಷ ಲಾಡ ಹೇಳಿದರು.

ತಾಲೂಕಿನ ಮುಕ್ಕಲ್, ಹುಣಸಿಕಟ್ಟಿ, ಬಿದರಗಡ್ಡಿ ಗ್ರಾಮಗಳ ಪ್ರಚಾರ ಸಭೆಯಲ್ಲಿ ಕಾರ್ಯಕರ್ತರನ್ನ ಉದ್ದೇಶಿಸಿ ಮಾತನಾಡಿ, ಈ ಭಾಗದ ಜನರಿಗೆ ಉಚಿತ 7000 ಸಾವಿರ ಬೋರ್‌ವೆಲ್ ಕೊರೆಯಿಸಿ ರೈತರ ಆರ್ಥಿಕ ಪರಿಸ್ಥಿತಿ ಸುಧಾರಣೆ ಮಾಡಲು ಅನುಕೂಲ ಮಾಡಿದ್ದೇನೆ, ಅಷ್ಟೇ ಅಲ್ಲದೆ ವಿದ್ಯುತ್ ಕಂಬಗಳು, ಟ್ರಾನ್ಸ್ಫರ್ಮರ್ ಒದಗಿಸಿದ್ದೇನೆ. ಕಳೆದ ಹತ್ತು ವರ್ಷಗಳಲ್ಲಿ ಸಾವಿರಾರು ಕೋಟಿಗಳ ಅನುದಾನ ತಂದು ಕಾಂಕ್ರೀಟ್ ರಸ್ತೆಗಳನ್ನು ಮಾಡಿದ್ದೇನೆ ಎಂದರು.

ಮತಕ್ಷೇತ್ರದಲ್ಲಿ ಬಸ್ ಡಿಪೋ, ಬಸ್ ನಿಲ್ದಾಣ, ಬೇಡ್ತಿ ನಾಲಾ 1 80 ಕೋಟಿ ರೂಪಾಯಿಗಳ ಕೆರೆಗೆ ನೀರು ತುಂಬಿಸುವ ಯೋಜನೆ, ಮಾಡಿದ್ದೇನೆ, ಮತ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಸುಮಾರು 500 ಗುಡಿಗಳನ್ನು ಕಟ್ಟಿಸಿದ್ದೇನೆ ಎಂದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಕಳೆದ ನಾಲ್ಕು ವರ್ಷದಲ್ಲಿ ಯಾವುದೇ ಜನಪರ ಅಭಿವೃದ್ಧಿ ಕಾರ್ಯಕ್ರಮಗಳನ್ನು ನೀಡದೇ 40% ಕಮಿಷನ್ ದಂದೆಯಲ್ಲಿ ತೊಡಗಿದೆ. ಇದನ್ನ ಗುತ್ತಿಗೆದಾರ ಸಂಘದ ಅಧ್ಯಕ್ಷರಾದ ಕೆಂಪಯ್ಯ ಅವರೇ ಸ್ಪಷ್ಟಪಡಿಸಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಜನರಿಗೆ ನಮಗೆ ಅಧಿಕಾರಕ್ಕೆ ತನ್ನಿ ಕಪ್ಪು ಹಣವನ್ನು ತರುತ್ತೇವೆ. ನಮ್ಮ ಖಾತೆಗೆ 15 ಲಕ್ಷ ಹಾಕುತ್ತೇನೆ ಎಂದು ಹೇಳಿದರು. ಆದರೆ ಇಲ್ಲಿವರೆಗೂ ಎಲ್ಲಿದೆ ಕಪ್ಪು ಹಣ ಅದರ ಬಗ್ಗೆ ಮಾತನಾಡುತ್ತಿಲ್ಲ. ಕೇಂದ್ರದಲ್ಲಿರುವ ಮಾಧ್ಯಮಗಳನ್ನು ತಮ್ಮ ಹತೋಟಿಯಲ್ಲಿಟ್ಟುಕೊಂಡು ಪ್ರಚಾರ ಗಿಟ್ಟಿಸಿಕೊಳ್ಳುವ ಕೆಲಸ ಮೋದಿ ಅವರು ಮಾಡುತ್ತಿದ್ದಾರೆ. ರಾಜ್ಯದಲ್ಲಿ ಯಾವುದೇ ಚುನಾವಣೆ ಬರಲಿ ಬರೀ ಮೋದಿ ಹೆಸರು ಹೇಳಿ ಜನರಿಗೆ ದಾರಿ ತಪ್ಪಿಸುತ್ತಿದ್ದಾರೆ. ಕಳೆದ ಒಂಬತ್ತು ವರ್ಷದಲ್ಲಿ ಭಾರತ ಸರಕಾರ 25 ಲಕ್ಷ ಕೋಟಿ ಸಾಲ ಮನ್ನ ಮಾಡಿದೆ. ಆದರೆ ಯಾವ ಒಬ್ಬ ರೈತರು ಸಾಲ ಮನ್ನಾ ಕೂಡ ಆಗಿಲ್ಲ. ಕೇವಲ ಉದ್ಯಮದಾರರ ಸಾಲ ಮನ್ನಾ ಮಾಡಿದ್ದಾರೆ ಭಾರತ ದೇಶದ ಸಾಲ 165 ಕೋಟಿ ಮಾಡಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ರೈತರ 73 ಸಾವಿರ ಕೋಟಿ ಸಾಲ ಮನ್ನಾ ಮಾಡಲಾಗಿತ್ತು, ಆದರೆ ಕೇಂದ್ರದಲ್ಲಿ ಬಿಜೆಪಿ ಸರಕಾರ ಇದುವರೆಗೂ ಯಾವುದೇ ಒಬ್ಬ ರೈತರ ಒಂದು ರೂಪಾಯಿ ಸಾಲ ಮನ್ನಾ ಮಾಡಿಲ್ಲ ಎಂದರು.

ಹಳ್ಳಿಗಳ ಅಭಿವೃದ್ಧಿ ಆಗಬೇಕು ಯಾವ ಸರ್ಕಾರ ಯಾವ ಯಾವ ಕಾರ್ಯಕ್ರಮಗಳನ್ನ ಮಾಡಿದೆ ಎಂಬುದು ಮತದಾರರು ಗಮನ ಹರಿಸಬೇಕು ಮತಕ್ಷೇತ್ರದಲ್ಲಿ ಅಂಬುಲೆನ್ಸ್ ಸೇವೆ ಮಾಡಿ 3, ಲಕ್ಷ 60 ಸಾವಿರ ಕಡು ಬಡವರ ಆರೋಗ್ಯ ಸೇವೆ ಮಾಡಿದ್ದೇವೆ. ಈ ಸಲ ಖಂಡಿತವಾಗಿಯೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಪ್ರತಿ ಮನೆಗೂ ಎರಡು ನೂರು ಯುನಿಟ್ ವಿದ್ಯುತ್ ಉಚಿತ ಕುಟುಂಬದ ಪ್ರತಿ ಸದಸ್ಯರಿಗೆ ತಲಾ 10 ಕೆಜಿ ಅಕ್ಕಿ ಕುಟುಂಬದ ಮಹಿಳೆ ಪ್ರತಿ ತಿಂಗಳು 2000, ನಿರುದ್ಯೋಗ ಪದವೀಧರರಿಗೆ 3000 ಅನೇಕ ಹಲವಾರು ಕಾರ್ಯಕ್ರಮ ಕಾಂಗ್ರೆಸ್ ಪಕ್ಷ ನೀಡಲಿದೆ ಎಂದರು. ಪ್ರತಿ ಗ್ರಾಮದಲ್ಲಿ ಕೂಡ ಸಂತೋಷ ಲಾಡ್ ಅವರಿಗೆ ಗ್ರಾಮದ ಮಹಿಳೆಯರು ಆರತಿ ಎತ್ತಿ ಭರ್ಜರಿ ಸ್ವಾಗತ ಮಾಡಿದರು ಡೊಳ್ಳಿನ ಮಜಲು, ಕೋಲಾಟ ,ತಂಡಗಳ ಮೂಲಕ ಭವ್ಯ ಸ್ವಾಗತ ಮೆರವಣಿಗೆ ಕೂಡ ನಡೆಯಿತು.

ಇದೇ ಸಂದರ್ಭದಲ್ಲಿ ಜಿಪಂ ಸದಸ್ಯರಾದ ಎಸ್ ಆರ್ ಪಾಟೀಲ್ ಲಿಂಗರಡ್ಡಿ ನಡುವಿನಮನಿ ಸುಭಾಸಗೌಡ ಪಾಟೀಲ, ರಾಮನಗೌಡ ಪಾಟೀಲ್, ಬಾಬು ಅಂಚಟಗೇರಿ, ಮರೆಪ್ಪ ಏಕೂಲಿ, ನಾಗರಾಜ ತೇಗಣ್ಣವರ ಬಸವರಾಜ ನಿಂಬೋಜಿ ರಮೇಶ ಗೋರಣ್ಣವರ ನರೇಶ ಮಲೆನಾಡು, ಮಹೇಶ ಅಲಗೂರ,ಮೈನುದ್ದೀನ ಕಾಶೀಮನವರ ಬಿ ವಾಯ್ ಪಾಟೀಲ್ ಯಲ್ಲಪ್ಪ ಹುಲಮನಿ ಪಕ್ಕೀರಗೌಡ ದೊಡ್ಡಮನಿ, ಮಾಲಾ ಕಟ್ಟಿಮನಿ ಮಂಜುನಾಥ್ ಮಾದರ, ಪಕ್ಕೀರೇಶ ಅಪ್ಪಣ್ಣವರ ಯಲ್ಲಪ್ಪ ಮೇಲಿನಮನಿ ನಾಗವೇಣೆ ಬಯಕೆಯಿಂದ ಮಂಜುಳಾ ದೇವಾಲಾಪೂರ ಕವಿತಾ ಬಡಿಗೇರ ಸೇರಿದಂತೆ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಉಪಸ್ಥರಿದ್ದರು.

Share News

About BigTv News

Check Also

ಅವಳಿ ನಗರದಲ್ಲಿ ಗಾಂಜಾ ಪೆಡ್ಲರ್‌ಗಳ ಬೇಟೆ; 6 ಮಂದಿ ಅಂದರ್, 491 ಗ್ರಾಂ ಗಾಂಜಾ ಜಪ್ತಿ!

ಹುಬ್ಬಳ್ಳಿ–ಧಾರವಾಡದಲ್ಲಿ ಗಾಂಜಾ ಪೆಡ್ಲರ್‌ಗಳಿಗೆ ಖಾಕಿ ಸಿಂಹಸ್ವಪ್ನ; ಎರಡು ಕಡೆ ಏಕಕಾಲಕ್ಕೆ ಪೊಲೀಸ್ ಬೇಟೆ, 6 ಮಂದಿ ಅಂದರ್.. ಗಾಂಜಾ ದಂಧೆಗೆ …

Leave a Reply

Your email address will not be published. Required fields are marked *