Breaking News

ಇಂದಿನಿಂದ ಬೆಳಗಾವಿ – ಸಿಕಂದರಾಬಾದ್ ನಡುವೆ ನಿತ್ಯ ರೈಲು ಸೇವೆ : ಸಚಿವ ಜೋಶಿ

ನವದೆಹಲಿ : ಬೆಳಗಾವಿ ಹಾಗೂ ಸಿಕಂದರಾಬಾದ್ ಮಾರ್ಗದಲ್ಲಿ ನಿತ್ಯ ರೈಲು ಸೇವೆ ಇಂದಿನಿಂದ (ಜನವರಿ 17) ಆರಂಭವಾಗಿದೆ. ಬಹು ಬೇಡಿಕೆಯ ಮಾರ್ಗ ಇದಾಗಿದ್ದು ಈ ಮಾರ್ಗ ಮಧ್ಯ ಓಡಾಡುವ ಪ್ರಯಾಣಿಕರಿಗೆ ಅತ್ಯಂತ ಅನುಕೂಲವಾಗಲಿದೆ ಎಂದು ಕೇಂದ್ರ ಸಚಿವ ಶ್ರೀ ಪ್ರಲ್ಹಾದ ಜೋಶಿಯವರು ಹೇಳಿದ್ದಾರೆ.

ಬೆಳಗಾವಿಯಿಂದ ಹೊರಡುವ ಈ ರೈಲು ಖಾನಪುರ, ಲೋಂಡಾ, ಧಾರವಾಡ, ಹುಬ್ಬಳ್ಳಿ, ಕೊಪ್ಪಳ, ಬಳ್ಳಾರಿ, ಗುಂತಕಲ್ಲ, ಆದೋನಿ, ಮಂತ್ರಾಲಯಂ ರೋಡ್, ರಾಯಚೂರು, ಚಿತ್ತಾಪುರ, ಮಳಖೇಡ ರೋಡ್, ವಿಕಾರಬಾದ್, ಬೇಗಂಪೇಟ ಮಾರ್ಗದ ಮೂಲಕ ಸಿಕಂದರಾಬಾದ್ ತಲುಪಲಿದೆ.

ಈ ರೈಲು ಸೇವೆ ಆರಂಭಕ್ಕೆ ಅನುಮೋದನೆ ನೀಡಿದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ಹಾಗೂ ಈ ವಿಶೇಷ ರೈಲು ಆರಂಭಿಸುವ ನಿರ್ಧಾರ ಕೈಗೊಂಡು, ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಿದ ರೈಲ್ವೆ ಸಚಿವರಾದ ಶ್ರೀ ಆಶ್ವಿನಿ ವೈಷ್ಣವ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಸಚಿವ ಜೋಶಿಯವರು ಹೇಳಿದ್ದಾರೆ.

Share News

About BigTv News

Check Also

ಬುದ್ಧಿಮಾಂದ್ಯ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಕಾಮುಕನಿಗೆ 20 ವರ್ಷ ಜೈಲು!

ರಾಮನಗರ: ವಿಶೇಷಚೇತನ ಬಾಲಕಿಯ ಮೇಲೆ ಅತ್ಯಾಚಾರವೆಸಗಿ, ಕೃತ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದ ಇಬ್ಬರು ಆರೋಪಿಗಳಿಗೆ ಬೆಂಗಳೂರು ದಕ್ಷಿಣ ಜಿಲ್ಲೆಯ 1ನೇ ಅಪರ …

Leave a Reply

Your email address will not be published. Required fields are marked *