Breaking News

ಮಂಡ್ಯ

ಅಮಿತ್‌ ಶಾ ಕಾಲಿಟ್ಟ ಮೇಲೆ ಸುನಾಮಿಯಾಗಿ ಪರಿವರ್ತನೆಯಾಗಿದೆ : ಬೊಮ್ಮಾಯಿ

ಮಂಡ್ಯ : ಬಿಜೆಪಿಯ ಗಾಳಿ ಎಲ್ಲೆಡೆ ಬೀಸುತ್ತಿದೆ. ಅಮಿತ್‌ ಶಾ ಕಾಲಿಟ್ಟಮೇಲೆ ಸುನಾಮಿಯಾಗಿ ಪರಿವರ್ತನೆಯಾಗಿದೆ. ಅಮಿತ್‌ ಶಾ ಅವರ ತಂತ್ರಗಳಿಗೆಲ್ಲಾ ಯಶಸ್ಸು ಸಿಗುತ್ತಿದ್ದು, 2023ರ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಸೂರ‍್ಯ ಚಂದ್ರರಿರುವಷ್ಟೇ ಸತ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ನಗರದ ವಿವಿ ಆವರಣದಲ್ಲಿ ಶುಕ್ರವಾರ ನಡೆದ ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕಾಂಗ್ರೆಸ್‌, ಜೆಡಿಎಸ್‌ ಆಡಳಿತದಿಂದ ಈ ಭಾಗದ ಜನರು ಬೇಸತ್ತಿದ್ದಾರೆ. ಈ …

Read More »

ಕೌಟುಂಬಿಕ ಕಲಹ : 3 ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆಗೆ ಶರಣು

ಮಂಡ್ಯ: ಕೌಟುಂಬಿಕ ಕಲಹದಿಂದ ಮಹಿಳೆ ತನ್ನ ಮೂವರು ಮಕ್ಕಳನ್ನು ಕೊಂದು ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮದ್ದೂರು ತಾಲೂಕಿನ ಮದೊದೂರಿನ ಗ್ರಾಮದಲ್ಲಿ ನಡೆದಿದೆ. ಉಷ್ನಾ ಬಾನು, ಮಕ್ಕಳಾದ ಹ್ಯಾರಿಸ್ (7), ಆಲಿಸಾ (4), ಫಾತಿಮಾ (2)ಗೆ ವಿಷಬೆರೆಸಿ ಊಟ ಮಾಡಿಸಿ ಕೊಲೆಮಾಡಿದ್ದಾಳೆ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಉಷ್ನಾ ಬಾನು ನರ್ಸಿಂಗ್ ಕೆಲಸಕ್ಕೆ ಹೋಗುತ್ತಿದ್ದಳು. ಪತಿ ಅಖಿಲ್ ಅಹ್ಮದ್ ಮತ್ತು ಉಷ್ನಾ ನಡುವೆ ಆಗಾಗಾ ಜಗಳವಾಗುತ್ತಿತ್ತು ಹಾಗಾಗಿ …

Read More »

ಪುನೀತ್ ಪುಣ್ಯಸ್ಮರಣೆ ದಿನವೇ ಯುವ ಅಭಿಮಾನಿಯೊಬ್ಬ ಆತ್ಮಹತ್ಯೆ

ಮಂಡ್ಯ: ಕರುನಾಡ ರತ್ನ, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಪುಣ್ಯಸ್ಮರಣೆ ದಿನವೇ ಯುವ ಅಭಿಮಾನಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ‘ಅಪ್ಪು’ ಇಲ್ಲದ ಜೀವನ ಬೇಡವೆಂದು ನೇಣು ಬಿಗಿದುಕೊಂಡು ಅಭಿಮಾನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಹೊಸ ಆನಂದೂರು ಗ್ರಾಮದಲ್ಲಿ ನಡೆದಿದೆ. ಹೊಸ ಆನಂದೂರು ಗ್ರಾಮದ ಕಿರಣ್(22) ಮೃತ ಅಪ್ಪು ಅಭಿಮಾನಿಯಾಗಿದ್ದಾನೆ. ಶನಿವಾರ ಗ್ರಾಮದಲ್ಲಿ ನಡೆದ ಅಪ್ಪು ಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕರಿಣ್ ಪೂಜೆ ಸಲ್ಲಿಸಿದ್ದ. ಅಪ್ಪು ಪುಣ್ಯಸ್ಮರಣೆ …

Read More »

ಮಾಜಿ ಶಾಸಕ ಡಾ.ಹೆಚ್.ಡಿ.ಚೌಡಯ್ಯ ನಿಧನ

ಮಂಡ್ಯ: ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಕಾಂಗ್ರೆಸ್​ ನಾಯಕ ಹಾಗೂ ಮಾಜಿ ಶಾಸಕ ಡಾ.ಹೆಚ್.ಡಿ.ಚೌಡಯ್ಯ (94) ಅವರು ತಡರಾತ್ರಿ 2.15ರ ವೇಳೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮಂಡ್ಯ ತಾಲೂಕಿನ ಹೊಳಲು ಗ್ರಾಮದ ತಮ್ಮ ನಿವಾಸದಲ್ಲಿ ಚೌಡಯ್ಯ ಅವರು ನಿಧನರಾಗಿದ್ದಾರೆ.1928ರಲ್ಲಿ ಜನಿಸಿದ ಚೌಡಯ್ಯ ಅವರು ಕೃಷಿ ವಿಭಾಗದಲ್ಲಿ ಬಿಎಸ್​ಸಿ ಪದವಿ ಶಿಕ್ಷಣ ಪಡೆದಿದ್ದರು. ಇವರು 4 ಬಾರಿ ಕೆರಗೋಡು ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಅಲ್ಲದೆ, 2 ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರು. ಕಾವೇರಿ ಹೋರಾಟದಲ್ಲಿ …

Read More »

ಒಂದೇ ಕುಟುಂಬದ 5 ಜನ ಕೊಲೆ ಪ್ರಕರಣ : ಆರೋಪಿ ಬಂಧನ

ಮಂಡ್ಯ: ತಾಯಿ ಸೇರಿದಂತೆ ನಾಲ್ವರು ಮಕ್ಕಳು ಒಟ್ಟು ಒಂದೇ ಕುಟುಂಬದ ಐವರ ಕೊಲೆ ಪ್ರಕರಣ ಫೆಬ್ರವರಿ 6ರ ಮಧ್ಯರಾತ್ರಿ ಶ್ರೀರಂಗಪಟ್ಟಣ ತಾಲೂಕಿನ ಕೆಆರ್​ಎಸ್​​ ಗ್ರಾಮದಲ್ಲಿ ನಡೆದಿದೆ. ಮನೆಯಲ್ಲಿ ಮಲಗಿದ್ದ ಲಕ್ಷ್ಮೀ(26), ರಾಜ್(12), ಕೋಮಲ್(7), ಕುನಾಲ್(4) ಹಾಗೂ ಗೋವಿಂದ(8) ನನ್ನು ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಬಳಿಕ ಸ್ಕೂಟರ್​​ನಲ್ಲಿ ಪರಾರಿಯಾಗಿದ್ದಳು. ಮಾರನೇ ದಿನ ಕೊಲೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ತಾನೂ ಮೃತರ ಮನೆಯ ಮುಂದೆ ಕೂತು ಕಣ್ಣೀರಿಟ್ಟು ಗೋಳಾಡಿ ನಾಟಕವಾಡಿದ್ದಳು. ಸದ್ಯ …

Read More »

ನಿಯಂತ್ರಣ ತಪ್ಪಿ ಹಾಲಿನ ಟ್ಯಾಂಕರ್‌ ಪಲ್ಟಿ – ಹಾಲಿಗಾಗಿ ಮುಗಿಬಿದ್ದ ಜನ

ಮಂಡ್ಯ: ನಿಯಂತ್ರಣ ತಪ್ಪಿ ಹಾಲಿನ ಕ್ಯಾಂಟರ್ ಬಿದ್ದಿದ್ದೆ ತಡ ಅಕ್ಕ-ಪಕ್ಕದಲ್ಲಿ ಇದ್ದ ಜನರು ಬಿಂದಿಗೆ, ಕ್ಯಾನ್, ಪಾತ್ರೆಗಳನ್ನು ತಂದು ಹಾಲು ತುಂಬಿಕೊಳ್ಳಲು ಮುಗಿ ಬಿದ್ದ ಘಟನೆ ಮಂಡ್ಯದ ಇಂಡುವಾಳು ಗ್ರಾಮದ ಬಳಿ ಜರುಗಿದೆ. ಮಂಡ್ಯ ಹಾಲು ಒಕ್ಕೂಟಕ್ಕೆ ಸೇರಿದ ಹಾಲಿನ ಕ್ಯಾಂಟರ್ ರಾಗಿಮುದ್ದನಹಳ್ಳಿ ಗ್ರಾಮದಿಂದ, ಹಾಲನ್ನು ತುಂಬಿಕೊಂಡು ಮಂಡ್ಯದ ಗೆಜ್ಜಲುಗೆರೆಯಲ್ಲಿರುವ ಮನ್‍ಮುಲ್‍ಗೆ ಬರ್ತಾ ಇತ್ತು. ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಬರುವ ವೇಳೆ ಇಂಡುವಾಳು ಗ್ರಾಮದ ಬಳಿ ನಿಯಂತ್ರಣ ತಪ್ಪಿ ಹಾಲು ತುಂಬಿದ್ದ ಟ್ಯಾಂಕರ್ …

Read More »

ವಿಶೇಷ ರೀತಿಯಲ್ಲಿ ಸಂಕ್ರಾಂತಿ ಹಬ್ಬ ಆಚರಣೆ

ಮಂಡ್ಯ : ಇತ್ತೀಚೆಗೆ ಅಪ್ಪು ಅವರನ್ನು ಚಿತ್ರರಂಗ ಕಳೆದುಕೊಂಡು ಅನಾಥ ವಾಗಿದೆ. ಅವರನ್ನು ನೆನದು ಮಾಡಿರುವಂತಂಹ ಕಾರ್ಯಕ್ರಮವಿಲ್ಲ ಹಾಗೂ ಪೂಜೆಗಳು ಇಲ್ಲಾ. ಇಷ್ಟು ಬೇಗ ಅವರನ್ನ ಕರೆದುಕೊಂಡ ಯಮನಿಗೆ ಇಡೀ ಶಾಪ ಹಾಕುತ್ತಿದ್ದಾರೆ. ಜೊತೆಗೆ ದೇವರ ಪೂಜೆಗಳಲ್ಲೂ ಅಪ್ಪು ಅವರನ್ನ ಮುಂದಿಡುತ್ತಿದ್ದಾರೆ. ಇದೀಗ ಸಂಕ್ರಾಂತಿ ಹಬ್ಬಕ್ಕೂ ಅಪ್ಪು ನೆನೆದಿದ್ದಾರೆ ಮಂಡ್ಯ ಜನ. ಈ ವೇಳೆ ಎತ್ತುಗಳ ಮೈ ಮೇಲೆ ಅಪ್ಪು ಭಾವಚಿತ್ರ ಬಿಡಿಸಿರುವುದು ಕಂಡು ಬಂದಿದೆ. ಜೊತೆಗೆ ದೇವರೊಟ್ಟಿಗೆ ಅಪ್ಪು …

Read More »

ಪಾಠ ಮಾಡುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ- ಮಕ್ಕಳ ಆಕ್ರಂದನ

ಮಂಡ್ಯ: ಪಾಠ ಮಾಡುತ್ತಿದ್ದ ಸಂದರ್ಭದಲ್ಲಿಯೇ ಶಿಕ್ಷಕರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ಈ ಘಟನೆ ಜಿಲ್ಲೆಯ ಎಲೆಚಾಕನಹಳ್ಳಿಯಲ್ಲಿ ನಡೆದಿದ್ದು, ಇಲ್ಲಿನ ಸರ್ಕಾರಿ ಶಾಲೆಯಲ್ಲಿನ ಶಿಕ್ಷಕ ರಾಜೇಶ್(47) ಎಂಬುವವರು ಪಾಠ ಮಾಡುತ್ತಿದ್ದ ಸಂದರ್ಭದಲ್ಲಿಯೇ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ ಶಿಕ್ಷಕರು.

Read More »

ಸಿದ್ದು ಹೊಸ ಅಸ್ತ್ರ, ಆ ಮಾಸ್ಟರ್ ಪ್ಲಾನ್ ಎನು?

ಲೋಕಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಅನುಭವಿಸಿದ ಕಾಂಗ್ರೆಸ್ ಪಕ್ಷ ಮುಂದಿನ ದಿನಗಳಲ್ಲಿ ತಮ್ಮ ವರ್ಚಸ್ಸು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸಿದ್ದರಾಮಯ್ಯ ಹೊಸ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ. ಇಡೀ ದೇಶವನ್ನೇ ತಮ್ಮತ್ತ ನೋಡುವಂತೆ ಮಾಡಿದ ಮಂಡ್ಯ ಕ್ಷೇತ್ರದ ಸಂಸದೆ ಸುಮಾಲತರವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತರಲು ಸುಮಾಲತಾ ರವರಿಗೆ ಕಾಂಗ್ರೆಸ್ ಪಕ್ಷ ಆಹ್ವಾನ ನೀಡಿದೆ. ಆದ್ರೇ ಚುನಾವಣೆ ಮುಂಚೆ ಟಿಕೇಟ್ ನೀಡುವ ವಿಚಾರದಲ್ಲಿ ಅವಮಾನಿಸಿದ ಕಾಂಗ್ರೆಸ್ ಪಕ್ಷಕ್ಕೆ ಹೋಗುವ ಬಗ್ಗೆ ಯಾವುದೇ ಸೂಚನೆ ನೀಡಿಲ್ಲ …

Read More »

You cannot copy content of this page