ಧಾರವಾಡ : ಸಿಎಂ ವಿರುದ್ಧ ಶಿಗ್ಗಾವಿಯಲ್ಲಿ ಸ್ಪರ್ಧೆಗಿಳಿತಾರಾ ವಿನಯ ಕುಲಕರ್ಣಿ ಎಂಬ ಹಲವು ಗೊಂದಲಗಳಿಗೆ ವಿನಯ್ ಕುಲಕರ್ಣಿ ತೆರೆ ಏಳೆದಿದ್ದಾರೆ. ಎಲ್ಲವೂ ವದಂತಿ ಎನ್ನುವಾಗಲೇ ವಿನಯ ಕುಲಕರ್ಣಿ ಮಹತ್ವದ ಹೇಳಿಕೆ ಕೊಟ್ಟಿದಾರೆ. ಕಾಂಗ್ರೇಸ್ ಪಕ್ಷ ನಡೆಸಿದ ಹಲವು ಆಂತಾರಿಕ ಚುನಾವಣೆ ಸಮಿಕ್ಷೇಯಲ್ಲಿ ಶಿಗ್ಗಾವಿ ಕ್ಷೇತ್ರದಿಂದ ವಿನಯ ಹೆಸರು ಮುಂಚೂಣಿಯಲ್ಲಿದೆ. ಇದಕ್ಕೆ ಸ್ಪಷ್ಟನೆ ನೀಡಿದ ವಿನಯ್ ಕುಲಕರ್ಣಿ ಸರ್ವೆಯಲ್ಲಿ ನನ್ನ ಹೆಸರು ಕೇಳಿ ಬಂದಿತ್ತು, ಆಗ ಮುಖಂಡರು ಕೂಡ ನನ್ನನ್ನು ಕರೆದು ಮಾತನಾಡಿದ್ದಾರೆ. ಆದರೆ ನಾನು ಶಿಗ್ಗಾವಿದಲ್ಲಿ ಸ್ಪರ್ಧಿಸುವುದಿಲ್ಲ. ಅಲ್ಲಿ ಹಲವಾರು ಜನ ಆಕಾಂಕ್ಷಿಗಳಿದ್ದಾರೆ. ಅವರ ಮನಸ್ಸಿಗೆ ನೋವು ಮಾಡಿ ನಾನು ಹೋಗುವುದು ಸರಿಯಲ್ಲ. ಆ ಕ್ಷೇತ್ರದಲ್ಲಿ ಅವರೆಲ್ಲ ಸಾಕಷ್ಟು ದಿನದಿಂದ ಕೆಲಸ ಮಾಡುತ್ತಿದ್ದಾರೆ. ನಾನು ಹೋಗಿ ಅವರಿಗೆ ಅಡೆ ತಡೆ ಮಾಡುವುದು ಸರಿಯಲ್ಲ. ಆದರೆ ಪಕ್ಷ ಅಂತಹ ತೀರ್ಮಾನ ಈಗಂತೂ ತೆಗೆದುಕೊಂಡಿಲ್ಲ. ಆ ರೀತಿ ಆದರೆ ಮುಂದೆ ನೋಡುವಾ ಎಂದು ಕುಲಕರ್ಣಿ ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

